Advertisement

70 ದಿನಗಳ ಪೈಕಿ 50 ದಿನಗಳ ಕಾಲ ಫಾರಿನ್‌ನಲ್ಲೇ ಚಿತ್ರೀಕರಣ

01:20 PM Oct 17, 2017 | |

ಇತ್ತೀಚೆಗಷ್ಟೇ ಶಿವರಾಜಕುಮಾರ್‌ ಅಭಿನಯದಲ್ಲಿ ಹೊಸ ಚಿತ್ರವೊಂದರ ಘೋಷಣೆಯಾಗಿತ್ತು. ಈಗ ಶಿವರಾಜಕುಮಾರ್‌ ಅಭಿನಯದ ಇನ್ನೊಂದು ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಅಂದ ಹಾಗೆ, ಈ ಚಿತ್ರದ ಚಿತ್ರೀಕರಣ 2018ರಲ್ಲಿ ಪ್ರಾರಂಭವಾಗಲಿದೆ. ಈ ಮಧ್ಯೆ ಸೋಮವಾರ ರಾತ್ರಿ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ.

Advertisement

ಅಂದಹಾಗೆ, ಚಿತ್ರದ ಹೆಸರೇನು ಗೊತ್ತಾ? “ಬ್ಲಾಕ್‌ ಸಿ ನಂ 135′ ಅಂತ. ಪತ್ರಕರ್ತ ಮತ್ತು ನಟರಾಗಿರುವ ಸುರೇಶ್‌ ಚಂದ್ರ ಅವರ ಮಕ್ಕಳಾದ ಅಭಯ್‌ ಚಂದ್ರ ಮತ್ತು ವಿನಯ್‌ ಚಂದ್ರ ಅವರೇ ಈ ಚಿತ್ರಕ್ಕೆ ಸಾರಥಿ. ಈಗಾಗಲೇ “ಜವ’ ಎಂಬ ಚಿತ್ರ ಮಾಡಿರುವ ಅಭಯ್‌ ಮತ್ತು ವಿನಯ್‌, ಈಗ “ಬ್ಲಾಕ್‌ ಸಿ ನಂ 135′ ಚಿತ್ರವನ್ನು ಪ್ರಾರಂಭಿಸುತ್ತಿದ್ದಾರೆ.

ವೀರೇಂದ್ರ ವಿದ್ಯಾವ್ರತ್‌, ವಚನ್‌ ಶೆಟ್ಟಿ ಮತ್ತು ದೀಪಕ್‌ ಜೈನ್‌ ಜೊತೆಗೆ ಸೇರಿಕೊಂಡು ಅರ್ಬನ್‌ ಮೀಡಿಯಾ ಗ್ಯಾರೇಜ್‌ ಎಂಬ ನಿರ್ಮಾಣ ಸಂಸ್ಥೆ ಎಂಬ ಸಂಸ್ಥೆ ಹುಟ್ಟುಹಾಕಿರುವ ಅಭಯ್‌ ಮತ್ತು ವಿನಯ್‌, ಅದರಡಿ “ಬ್ಲಾಕ್‌ ಸಿ ನಂ 135′ ಚಿತ್ರವನ್ನು ಮಾಡುತ್ತಿದ್ದಾರೆ.

ಈ ಚಿತ್ರವನ್ನು ಅಭಯ್‌ ಚಂದ್ರ ನಿರ್ದೇಶಿಸಿದರೆ, ವಿನಯ್‌ ಚಂದ್ರ ಸಂಗೀತ ಸಂಯೋಜಿಸುತ್ತಿದ್ದಾರೆ. ಇದೊಂದು ಎಮೋಷನಲ್‌ ಥ್ರಿಲ್ಲರ್‌ ಆಗಿದ್ದು, ಅದ್ಭುತ ಆ್ಯಕ್ಷನ್‌ ದೃಶ್ಯಗಳು ಈ ಚಿತ್ರದಲ್ಲಿದೆಯಂತೆ.”ಬ್ಲಾಕ್‌ ಸಿ ನಂ 135′ ಚಿತ್ರದ ಒಂದು ವಿಶೇಷತೆಯೆಂದರೆ, ಸುಮಾರು 70 ದಿನಗಳ ಚಿತ್ರೀಕರಣ ನಡೆಯಲಿದ್ದು, ಆ ಪೈಕಿ 50 ದಿನಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ.

ಆದರೆ, ಸದ್ಯಕ್ಕೆ ಯಾವ ದೇಶ ಎಂಬುದು ಪಕ್ಕಾ ಆಗಿಲ್ಲ. ಕಥೆ ಕೇಳಿ ಖುಷಿಯಾಗಿರುವ ಶಿವರಾಜಕುಮಾರ್‌, ಫೆಬ್ರವರಿ ತಿಂಗಳಲ್ಲಿ ಡೇಟ್ಸ್‌ ಕೊಟ್ಟಿದ್ದಾರೆ. ಈ ಪೋಸ್ಟರ್‌ ಬಿಡುಗಡೆ ಸಮಾರಂಭದಲ್ಲಿ ಸಾಯಿಕುಮಾರ್‌, ನಟಿ ಭಾವನಾ, ವಿ, ಮನೋಹರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next