Advertisement

ಫ‌ುಟ್‌ಪಾತ್‌ ಅಂಗಡಿಗಳ ತೆರವು

11:51 AM Jun 24, 2018 | |

ಹುಣಸೂರು: ನಗರದ ಬಸ್‌ ನಿಲ್ದಾಣದ ಪಕ್ಕದ ರಸ್ತೆ ಒತ್ತುವರಿ ಮಾಡಿಕೊಂಡಿದ್ದ, ಫ‌ುಟ್‌ಪಾತ್‌ ಅಂಗಡಿಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು. ನಗರದ ಹೊಸ ಬಸ್‌ ನಿಲ್ದಾಣದ ಪಕ್ಕದಲ್ಲೇ ಇರುವ ತಾಪಂ ಆವರಣದಲ್ಲಿ ಎಸ್‌ಜೆಎಸ್‌ವೈ ಅನುದಾನದಡಿ 10 ಮಳಿಗೆಗಳನ್ನು ನಿರ್ಮಿಸಿ, ಶ್ರೀಶಕ್ತಿ ಸಂಘಗಳ ಬಲವರ್ಧನೆಗೆ ಆರ್ಥಿಕ ಚಟುವಟಿಕೆ ನಡೆಸಲು ನೀಡಲಾಗಿತ್ತು.

Advertisement

ಈ ಮಳಿಗೆಗಳ ಮುಂಭಾಗದ ಫ‌ುಟ್‌ಪಾತ್‌ನಲ್ಲೇ ಕೆಲವರು ಬಳೆ ಮಾರಾಟ, ಪಾನಿಪುರಿ ಇತರೆ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಇದರಿಂದ ಎಸ್‌ಜೆಎಸ್‌ವೈ ಅಂಗಡಿಗಳಲ್ಲಿ ವ್ಯಾಪಾರ ಸ್ಥಗಿತಗೊಂಡಿದ್ದನ್ನು ತಾಪಂ ಇಒ ಗಮನಕ್ಕೆ ತಂದ ಮಳಿಗೆದಾರರು ಫ‌ುಟ್‌ಪಾತ್‌ ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು.

ಇಒ ಕಚೇರಿಯ ಮನವಿಗೆ ಫ‌ುಟ್‌ಪಾತ್‌ ಮುಂಭಾಗದ ಮಳಿಗಳನ್ನು ಪೊಲೀಸರ ಸಹಕಾರ ಪಡೆದು,  ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು. ಎಸ್‌ಐ ಮಹೇಶ್‌ ನೇತೃತ್ವದಲ್ಲಿ ಭದ್ರತೆ ಒದಗಿಸಿದ್ದರು. 

ನಗರದೆಲ್ಲೆಡೆ ತೆರವುಗೊಳಿಸಿ: ನಗರದ ಪ್ರಮುಖ ಪ್ರದೇಶಗಳಾದ ಬಜಾರ್‌ ರಸ್ತೆ, ಎಸ್‌.ಜೆ.ರಸ್ತೆ, ಹಳೇ ಸೇತುವೆ, ಬೆ„ಪಾಸ್‌ ರಸ್ತೆಗಳಲ್ಲಿ ಪುಟ್‌ಬಾತ್‌ ಮೇಲೆ ವ್ಯಾಪಾರ ನಡೆಸುತ್ತಿದ್ದು, ಪಾದಾಚಾರಿಗಳು ಓಡಾಡುವುದಿರಲಿ ವಾಹನ ಸವಾರರು ಈ ರಸ್ತೆಗಳಲ್ಲಿ ಹರಸಾಹಸ ಪಟ್ಟು ತಿರುಗಾಡುವಂತಾಗಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಗಮನ ಹರಿಸಿ ನಗರವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ನಾಗರಿಕರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next