ರಿಯೋ ಡಿ ಜನೈರೊ: ವಿದೇಶದಲ್ಲಿ ಮನುಷ್ಯ ಸಂಬಂಧಗಳು ಬಹುತೇಕ ದೈಹಿಕ ಬಯಕೆಗಳನ್ನು ಆಧರಿಸಿರುತ್ತವೆ. ಸಂಸ್ಕೃತಿ, ಸಂಸ್ಕಾರಗಳಂತ ವಿಚಾರಗಳಿಗೆ ಅಲ್ಲಿ ಸ್ಥಾನವಿರುವುದಿಲ್ಲ. ಅದಕ್ಕೊಂದು ಹೊಸ ಸಾಕ್ಷಿ ಬ್ರೆಜಿಲ್‌ನ ವಿಶ್ವವಿಖ್ಯಾತ ಫುಟ್‌ಬಾಲ್ ತಾರೆ ನೇಯ್ಮರ್ ಅವರ ತಾಯಿ, ನಾಡಿನ್ ಕಾನ್‌ಕಾವ್ಸ್!
ಆಕೆಗೀಗ 52 ವರ್ಷ. ಪತಿಯಿಂದ 2016ರಲ್ಲಿ ವಿಚ್ಛೇದಿತರಾದ ಆಕೆ, ಈಗ ತರುಣನೊಬ್ಬನೊಂದಿಗೆ ಪ್ರಣಯ ಪ್ರಸಂಗ ಶುರು ಮಾಡಿಕೊಂಡಿದ್ದನ್ನು ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ. ಆತನ ವಯಸ್ಸು ಬರೀ 22! ಹೆಸರು ಟಿಯಾಗೊ ರ್ಯಾಮೊಸ್. ಈತ ನೇಯ್ಮರ್‌ಗಿಂತ 6 ವರ್ಷ ಕಿರಿಯವನು!
ವಿಶ್ವವಿಖ್ಯಾತ ಫುಟ್ ಬಾಲಿಗನಾಗಿರುವ ನೇಯ್ಮರ್, ವಿಶ್ವದ ಶ್ರೀಮಂತ ತಾರೆ ಎಂದು ಹೆಸರಾಗಿದ್ದಾರೆ. ಅವರು ತಾಯಿಯ ಈ ಹೊಸ ಸಂಬಂಧಕ್ಕೆ ಶುಭ ಹಾರೈಸಿದ್ದಾರೆ. ಸ್ವತಃ ತಾಯಿ ನಾಡಿನ್, ಕೆಲವೊಂದು ವರ್ಣಿಸಲಾಗದ್ದನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಚ್ಚರಿಯೆಂದರೆ ಟಿಯಾಗೊ ಒಬ್ಬ ಫುಟ್‌ಬಾಲ್ ಆಟಗಾರ. ರೂಪದರ್ಶಿ ಕೂಡ ಹೌದು. ಅವರು 4ಕೆ ಈಸಿ ಎಂಬ ತಂಡದ ಪರ ಆಡುತ್ತಾರೆ. ಈ ತಂಡ ಎನ್‌ಎಫ್ಎ ಲೀಗ್‌ನಲ್ಲಿ ಆಡುತ್ತದೆ. ಈ 22ರ ಹುಡುಗ ನೇಯ್ಮರ್ ಅವರ ಅಪ್ಪಟ ಅಭಿಮಾನಿ! ಅದನ್ನು ಅವರು 2017ರಲ್ಲೇ ನೇಯ್ಮರ್‌ಗೆ ತಿಳಿಸಿದ್ದರು. ನಾನು ನಿಮ್ಮ ಅಭಿಮಾನಿ, ನಿಮ್ಮಂತೆ ಆಗಲು ಬಯಸಿದ್ದೇನೆ. ಒಂದಲ್ಲ ಒಂದು ದಿನ ನಿಮ್ಮ ಪಕ್ಕ ಬಂದು ನಿಂತೇ ನಿಲ್ಲುತ್ತೇನೆ ಎಂಬ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದರು. ಅದೇ ರೀತಿ ನಡೆಯಿತು.
ಅವರು ನೇಯ್ಮರ್‌ರನ್ನು ಭೇಟಿ ಮಾಡಿದರು! ಈಗ ಈ ರೀತಿಯಾಗಿ ಸಂದರ್ಭ ಬದಲಾಗಿದೆ. 52 ವರ್ಷದ ತಾಯಿಯ ಪಕ್ಕ, ಈ ಹುಡುಗ ಬಂದು ನಿಲ್ಲುವುದನ್ನು ನೋಡುವಂತಾಗಿದೆ. ಆದರೆ ನೇಯ್ಮರ್ ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಂತಿಲ್ಲ