Advertisement

ಫುಟ್ಬಾಲಿಗ, ಮಾಜಿ ಯೋಧ ಈಗ 2ನೇ ಬಾರಿಗೆ ಸಿಎಂ!

11:02 AM Mar 21, 2022 | Team Udayavani |

ಮಣಿಪುರದ ಸಿಎಂ ಗದ್ದುಗೆಯಲ್ಲಿ ಎರಡನೇ ಬಾರಿಗೆ ಆಸೀನರಾಗ ಲಿರುವ ಬಿರೇನ್‌ ಸಿಂಗ್‌ರ ಜೀವನಗಾಥೆ ಬಲು ರೋಚಕ. ಒಂದು ಕಾಲದಲ್ಲಿ ಫ‌ುಟ್ಬಾಲ್‌ ಅನ್ನು ಗೋಲ್‌ಗೆ ಅಟ್ಟುತ್ತಿದ್ದ, ಬಂದೂಕು ಹಿಡಿದು ಇದೇ ಮಣಿಪುರದ ಗಡಿ ಕಾಯುತ್ತಿದ್ದ, ಬಳಿಕ ಪೆನ್‌ ಹಿಡಿದು ಪತ್ರಿಕೆಯ ಮೂಲಕ ಸಮಾಜವನ್ನು ಎಚ್ಚರಿಸುತ್ತಿದ್ದ ಪತ್ರಕರ್ತ ಈಗ ಆ ಪುಟ್ಟ ರಾಜ್ಯದ ದೊರೆ!.

Advertisement

ಹೌದು. ಬಹುಮುಖಿ ವ್ಯಕ್ತಿತ್ವದಿಂದಲೇ ಹೆಸರಾದ ಬಿರೇನ್‌ ಸಿಂಗ್‌ 1961, ಜ.1ರಂದು ಇಂಫಾಲ್‌ನಲ್ಲಿ ಜನಿಸಿದರು. ಕಾಲೇಜಿನ ಪದವಿ ಓದಿನ ದಿನಗಳಲ್ಲೇ ಅವರು ರಾಜ್ಯ ಮಟ್ಟದ ಫ‌ುಟ್ಬಾಲ್‌ ತಂಡದಲ್ಲಿ ಸ್ಟಾರ್‌ ಆಟಗಾರ. ಪದವಿ ಬಳಿಕ ಬಿಎಸ್‌ಎಫ್ ಸೇರಿಕೊಂಡು, ಸೇನಾ ತಂಡದ ಸದಸ್ಯನಾಗಿ ಅಲ್ಲಿಯೂ ಪ್ರಾದೇಶಿಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಡ್ಯುರಾಂಡ್‌ ಕಪ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು.

1992ರ ವೇಳೆಗೆ ಬಿರೇನ್‌, ಪತ್ರಿಕೋದ್ಯಮ ಪ್ರವೇಶಿಸಿದರು. 2001ರ ವರೆಗೆ “ನಹರ್‌ಲೋಗಿ ಥೌಡಾಂಗ್‌’ ಎಂಬ ಪತ್ರಿಕೆಗೆ ಸಂಪಾದಕರಾದರು. 2002ರಲ್ಲಿ ಡೆಮಾಕ್ರಟಿಕ್‌ ರೆವಲ್ಯುಷನರಿ ಪೀಪಲ್ಸ್‌ ಪಾರ್ಟಿ ಮೂಲಕ ರಾಜಕೀಯ ಪ್ರವೇಶಿಸಿದರು. 2003ರಲ್ಲಿ ಹೀಂಗ್ಯಾಂಗ್‌ ಕ್ಷೇತ್ರದ ಮೂಲಕ ಗೆದ್ದು ವಿಧಾನಸಭೆಗೆ ಕಾಲಿಟ್ಟರು. ಕಾಂಗ್ರೆಸ್‌ಗೆ ಸೇರಿ 2007, 2012ರಲ್ಲಿ ವಿವಿಧ ಸಚಿವ ಹುದ್ದೆ ಅಲಂಕರಿಸಿದರು. 2017ರಲ್ಲಿ ಬಿರೇನ್‌ ಬಿಜೆಪಿಗೆ ಸೇರಿಕೊಂಡು, ಮುಖ್ಯಮಂತ್ರಿಯಾದರು. ಪ್ರಸ್ತುತ 18 ಸಾವಿರ ಮತಗಳಿಂದ ಗೆದ್ದು ಪುನಃ ವಿಧಾನಸಭೆ ಪ್ರವೇಶಿಸಿ, 2ನೇ ಬಾರಿಗೆ ಸಿಎಂ ಆಗಿ ಪುನರಾಯ್ಕೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next