Advertisement
ಅಖೀಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಮನವಿ ಮೇರೆಗೆ, ಕತಾರ್ ತಲುಪಿದ ಬಳಿಕ ತಂಡದ ಆಟಗಾರರಿಗೆ ಕ್ವಾರಂಟೈನ್ ರಿಯಾಯಿತಿ ನೀಡಲಾಗುವುದು. ಆಟಗಾರರು, ತಂಡದ ಸಹಾಯಕ ಸಿಬಂದಿಯೆಲ್ಲ ನೇರವಾಗಿ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಲಿದ್ದಾರೆ. ಇಲ್ಲಿ 15 ದಿನಗಳ ಕಾಲ ಸಿದ್ಧತಾ ಶಿಬಿರವನ್ನು ಆಯೋಜಿಸಲಾಗುವುದು ಎಂಬುದಾಗಿ ಎಐಎಫ್ಎಫ್ನ ಮಹಾ ಕಾರ್ಯದರ್ಶಿ ಕುಶಲ್ ದಾಸ್ ಹೇಳಿದ್ದಾರೆ.
ಭಾರತ ತಂಡ ಜೂ. 3ರಂದು ಕತಾರ್ ವಿರುದ್ಧ ಆಡಲಿದೆ. ಬಳಿಕ ಬಾಂಗ್ಲಾದೇಶ (ಜೂ. 7) ಮತ್ತು ಅಫ್ಘಾನಿಸ್ಥಾನ (ಜೂ. 15) ವಿರುದ್ಧ ಸೆಣಸಲಿದೆ. ಭಾರತ ಈಗಾಗಲೇ ವಿಶ್ವಕಪ್ ರೇಸ್‌ನಿಂದ ಹೊರಬಿದ್ದರೂ 2023ರ ಏಶ್ಯ ಕಪ್ ಪಂದ್ಯಾವಳಿಗಾಗಿ ಈ ಪಂದ್ಯಗಳು ಮಹತ್ವದ್ದಾಗಿವೆ. “ಇ’ ವಿಭಾಗದಲ್ಲಿರುವ ಭಾರತ 5 ಪಂದ್ಯಗಳಿಂದ ಕೇವಲ 3 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಮೂರಕ್ಕೇರಿದರೆ ಭಾರತ ಏಶ್ಯಕಪ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಲಿದೆ.