Advertisement
ಸಾರ್ವಜನಿಕರ ಹಾಗೂ ವಾಹನ ಸಂಚರಿಸುವ ರಸ್ತೆಗಳ ಮೇಲೆ ಪುಟ್ ಪಾತ್ ವ್ಯಾಪಾರಿಗಳು ಹೂ ಹಣ್ಣು, ತರಕಾರಿ, ಹೋಟೆಲ್ ಸೇರಿದಂತೆ ಮೊದಲಾದ ಪದಾರ್ಥಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು ಇದರಿಂದ ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿಗಳು ತಿರುಗಾಡಲು ತೊಂದರೆ ಉಂಟಾಗಿದೆ, ಈ ಸಂಬಂಧ ಪುರಸಭಾ ಸಮಾಸ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಬಂದು ರಸ್ತೆ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುವ ವ್ಯಾಪರಸ್ಥರನ್ನು ಕೂಡಲೇ ತೆರವುಗೊಳಿಸುವಂತೆ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರಾದರೂ , ಸಭೆಯಲ್ಲಿ ತಿರ್ಮಾನವಾಗಿ ತಿಂಗಳ ನಂತರ ತೆರವು ಕಾರ್ಯಚರಣೆಯನ್ನು ಕೈಗೊಂಡ ಅಧಿಕಾರಿಗಳು, ಕಾರ್ಯಚರಣೆ ಸಮರ್ಪಕವಾಗಿ ಮಾಡದೇ ಕಾಟಾಚಾರಕ್ಕೆ ಮಾಡಿ ಕೈ ತೊಳೆದುಕೊಂಡಿರುವುದಕ್ಕೆ ನಾಗರೀಕರು ಅಸಮಾಧಾನ ಹೊರ ಹಾಕಿದ್ದಾರೆ.
ಶುಕ್ರವಾರ ಬೆಳ್ಳಂಬೆಳಗ್ಗೆ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಪರಿಸರ ಎಂಜಿನಿಯರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಪೊಲೀಸರ ಸಹಕಾರದೊಂದಿಗೆ ಹಕೀಂ ಷಾವಲಿ ಕಾಂಪ್ಲೆಕ್ಸ್ , ಹಳೇಯ ರಾಷ್ಟ್ರೀಯ ಹೆದ್ದಾರಿ ೪೮ ಬಿ.ಎಂ ರಸ್ತೆ, ರಾಜ್ಯ ಹೆದ್ದಾರಿ ೩೩ ಟಿ.ಎಂ ರಸ್ತೆ, ಸಂತೇ ಮೈದಾನಕ್ಕೆ ಹೊಗುವ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಚರಂಡಿ ಮೇಲೆ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಪುಟ್‌ಪಾತ್ ವ್ಯಾಪಾರಿಗಳ ತೆರವು ಕಾರ್ಯಚರಣೆ ಪ್ರಾರಂಭಿಸಿದರು, ರಸ್ತೆ ಬದಿಯ ಮೇಲೆ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸದೇ, ಅಧಿಕಾರಿಗಳು ರಸ್ತೆಯನ್ನು ಬಿಟ್ಟು ಸ್ವಲ್ಪ ದೂರದ ಹಿಂದಕ್ಕೆ ಇಟ್ಟುಕೊಂಡು ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಸೂಚಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಅಧಿಕಾರಿಗಳು ತೆರಳಿದರು, ಅಧಿಕಾರಿಗಳು ತೆರವು ಕಾರ್ಯಚರಣೆ ನಡೆಸಿ ತೆರಳುತ್ತಿದ್ದಂತೆ ಮರು ಕ್ಷಣವೇ ವ್ಯಾಪಾರಿಗಳು ಯಥಾ ಸ್ಥಿತಿ ಪುಟ್‌ಪಾತ್ ಹಾಗೂ ಚರಂಡಿ ಮೇಲೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಪ್ರಾರಂಭ ಮಾಡಿದ್ದಾರೆ. ಆಕ್ರೋಶ
ನಿರಂತರ ಮಳೆಯಿಂದ ಪಟ್ಟಣದಾಧ್ಯಂತ ರಸ್ತೆಗಳು ಆಳುದ್ದ ಗುಂಡಿ ಬಿದ್ದು ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳು ಹಾಗೂ ನಾಗರೀಕರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ರಸ್ತೆ ಬಿಟ್ಟು ಪುಟ್ ಪಾತ್ ಮೇಲೆ ಸಾರ್ವಜನಿಕರು ಹೋಗುವುದಕ್ಕೂ ಆಗುತ್ತಿಲ್ಲ, ಪುಟ್‌ಪಾತ್ ಹಾಗೂ ಇದರ ರಸ್ತೆ ಪಕ್ಕ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಸಂಚಾರ ಅವ್ಯವಸ್ಥೆಯಿಂದ ಕೂಡಿದೆ, ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಚರಣೆ ನಡೆಸಿದ್ದಾರೆ ಎಂದು ವಾಹನ ಸವಾರರು ಹಾಗೂ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪಟ್ಟಣದಲ್ಲಿ ಕಂಡು ಬಂದಿತ್ತು, ನಿರ್ಲಕ್ಷö್ಯತೆ ಹಾಗೂ ಬೇಜವಾಬ್ದಾರಿಯ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.