Advertisement
ಪ್ರಾಣಿಗಳಿಗೂ ಕೋವಿಡ್ ಭೀತಿ: ದೇಶವೇ ಲಾಕ್‌ಡೌನ್ ಆಗಿದೆ. ಕಾರ್ಮಿಕರು, ನಿರ್ಗತಿಕರು, ಭಿಕ್ಷುಕಕರು, ಅಸಹಾಯಕರು, ವೃದ್ಧರು, ಅನಾಥರು ಹಾಗೂ ಉದ್ಯೋಗ ಅರಸಿ ಮೈಸೂರಿಗೆ ಬಂದಿರುವ ಅನೇಕರು ಆಹಾರ ಸಮಸ್ಯೆ ಎದುರಿಸಿದ್ದರು. ಸದ್ಯ ಇವರೆಲ್ಲರಿಗೂ ಯೂತ್ ಹಾಸ್ಟೆಲ್ ಹಾಗೂ ನಂಜರಾಜ ಬಹದ್ದೂರ್ ಛತ್ರದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ವಿವಿಧ ಸಂಘ-ಸಂಸ್ಥೆಗಳು, ಪೊಲೀಸರು, ಜನಪ್ರತಿನಿಧಿಗಳು ನೆರವಿನ ಹಸ್ತ ಚಾಚಿದ್ದಾರೆ. ಆದರ ನಡುವೆಯೂ ನಗರದಲ್ಲಿ ಸಾಕುಪ್ರಾಣಿಗಳು ಆಹಾರ ಸಮಸ್ಯೆಯಿಂದ ಬಳಲುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಅರಿತ ಮೈಸೂರಿನ ಕೆಲವು ಪ್ರಾಣಿ ಪ್ರಿಯರು ತಮ್ಮ ಸ್ವತಃ ಖರ್ಚಿನಲ್ಲಿ ಪ್ರಾಣಿಗಳಿಗೆ ನಿತ್ಯ ಕೈಲಾದಷ್ಟು ಆಹಾರ ನೀಡುವ ಕೆಲಸ ಮಾಡುಲ್ಲಿ ನಿರತರಾಗಿದ್ದಾರೆ. ಸಾಮಾನ್ಯವಾಗಿ ನಮ್ಮಮನೆ ಸುತ್ತ ಇರುವ ನಾಯಿಗಳು, ಜಾನುವಾರು, ಕೋತಿಗಳು ಸೇರಿದಂತೆ ಅಳಿಲು, ವಿವಿಧ ಬಗೆಯ ಪಕ್ಷಿಗಳು ಅಂಗಡಿ, ಹೋಟೇಲ್, ಹಣ್ಣು-ತರಕಾರಿ ವ್ಯಾಪಾರ ಸ್ಥಳಗಳಲ್ಲಿ ಸಿಗುವ ಆಹಾರ ತಿಂದು ಬದುಕು ದೂಡುತ್ತಿದ್ದವು. ಆದರೆ, ಲಾಕ್‌ಡೌನ್ ಘೋಷಣೆಯಾದ ನಂತರ ಆಹಾರವಿಲ್ಲದೆ ಎಲ್ಲವೂ ಪರಿತಪಿಸುವಂತಾಗಿತ್ತು. ಇದನ್ನು ಗಮನಿಸಿದನಗರದ ನೂರಕ್ಕೂ ಹೆಚ್ಚು ಪ್ರಾಣಿಪ್ರಿಯರು ನಿತ್ಯ ತಮ್ಮ ಮನೆ ಸುತ್ತಮುತ್ತ, ರಸ್ತೆ ಬದಿಗಳಲ್ಲಿರುವ ಶ್ವಾನ, ಮಂಗ, ಜಾನುವಾರುಗಳಿಗೆ ಬಿಸ್ಕತ್ತು, ಬಾಳೆಹಣ್ಣು, ಬನ್, ನೀರು ಮತ್ತು ಆಹಾರ ನೀಡುವ ಮೂಲಕ ಮೂಕಪ್ರಾಣಿಗಳ ಹಸಿವಿನ ಬಾಧೆಯನ್ನು ತಣಿಸಿದ್ದಾರೆ.
●ಸ್ನೇಕ್ ಶ್ಯಾಮ್, ಉರಗ ತಜ್ಞ. ಸಂಕಷ್ಟದ ಕಾಲಘಟ್ಟದಲ್ಲಿ ಇದ್ದೇವೆ. ಮನುಷ್ಯರಂತೆ ಪ್ರಾಣಿಪಕ್ಷಿಗಳು ಆಹಾರ ಸಮಸ್ಯೆ ಎದುರಿಸುತ್ತಿವೆ. ಅವುಗಳಿಗೂ ನಮ್ಮಂತೆ ಹಸಿವು, ಬಾಯಾರಿಕೆ ಆಗುತ್ತದೆ. ಹಾಗಾಗಿ ಸಾಧ್ಯವಾದರೆ ಅವುಗಳ ನೆರವಿಗೆ ಬನ್ನಿ. ಪ್ರಾಣಿಗಳಿಗೆ ಆಹಾರ ನೀಡಿ. ನಾನು ಸಹ ಈ ಕಾರ್ಯದಲ್ಲಿ ನಿರತಳಾಗಿದ್ದೇನೆ.
●ನೇಹಾ, ಮೈಸೂರು
Related Articles
Advertisement