Advertisement

Easy & Healthy Recipes; ಆಹಾ ಈ ರೀತಿ ಬದನೆಕಾಯಿ ಪೋಡಿ ಮಾಡಿದ್ರೆ ಏನ್ ರುಚಿ ಗೊತ್ತಾ!

12:01 AM Feb 10, 2024 | ಶ್ರೀರಾಮ್ ನಾಯಕ್ |

ಕೆಲವರಿಗೆ ಬದನೆಕಾಯಿ ಅಂದ್ರೆ ಅಚ್ಚುಮೆಚ್ಚು. ಅದರಲ್ಲೂ ಬದನೆಕಾಯಿಯಿಂದ ಮಾಡುವ ಸಾಂಬಾರ್, ಪಲ್ಯ, ಖಾದ್ಯವಂತೂ ಸಖತ್ ಸ್ವಾದವನ್ನು ನೀಡುತ್ತದೆ.ಬದನೆಕಾಯಿಯಲ್ಲಿ ಪೋಷಕಾಂಶ, ವಿಟಮಿನ್, ಖನಿಜಾಂಶಗಳು ಮತ್ತು ನಾರಿನ ಅಂಶ ಯಥೇಚ್ಛವಾಗಿರುವುದರಿಂದ ಮನುಷ್ಯನ ಆರೋಗ್ಯಕ್ಕೆ ಇದು ತುಂಬಾನೇ ಸಹಕಾರಿ.

Advertisement

ಬದನೆಕಾಯಿಗಳಲ್ಲಿ ಹಲವಾರು ರೀತಿಯ ಬಣ್ಣಗಳು ಮತ್ತು ಗಾತ್ರಗಳು ಇರುವುದನ್ನು ನಾವು ನೀವು ಗಮನಿಸಿರುತ್ತೇವೆ. ನೇರಳೆ ಬದನೆಕಾಯಿ, ಹಸಿರು ಬದನೆಕಾಯಿ,ಮಟ್ಟುಗುಳ್ಳ ಮತ್ತು ಕಪ್ಪು ಬದನೆಕಾಯಿಗಳು ಗಾತ್ರದಲ್ಲೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ.

ಹಾಗಾದ್ರೆ ಇಂದು ನಾವು ನಿಮಗೆ ವಿಭಿನ್ನ ಟೇಸ್ಟ್‌ನ ಬದನೆಕಾಯಿ ಪೋಡಿ(ಬಜ್ಜಿ)ವನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಿರಿ.

ಬದನೆಕಾಯಿ ಪೋಡಿ (ಬಜ್ಜಿ)
ಬೇಕಾಗುವ ಸಾಮಗ್ರಿಗಳು
ಬದನೆಕಾಯಿ-3,ಕಡ್ಲೆಹಿಟ್ಟು-ಅರ್ಧ ಕಪ್‌, ಅಕ್ಕಿಹಿಟ್ಟು-2ಚಮಚ, ಹಿಂಗಿನ ನೀರು-1ಚಮಚ, ಮೆಣಸಿನ ಪುಡಿ-1ಚಮಚ, ಅಡುಗೆ ಸೋಡಾ-ಸ್ವಲ್ಪ, ಎಣ್ಣೆ-ಕರಿಯಲು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದು ತೆಳ್ಳಗೆ ಹೆಚ್ಚಿ ,ಸ್ವಲ್ಪ ಉಪ್ಪು ಹಾಕಿ ನೀರಿನಲ್ಲಿ 5ರಿಂದ 10ನಿಮಿಷಗಳ ಕಾಲ ನೀರಿನಲ್ಲಿ ಹಾಕಿರಿ. ನಂತನ ಒಂದು ಬೌಲ್‌ಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಹಿಂಗಿನ ನೀರು,ಮೆಣಸಿನಪುಡಿ,ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಹೆಚ್ಚಿಟ್ಟುಕೊಂಡ ಬದನೆಕಾಯಿಯನ್ನು ಮೊದಲೇ ಮಾಡಿಟ್ಟ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ ಎಣ್ಣೆಗೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿದರೆ ಬದನೆಕಾಯಿ ಪೋಡಿ(ಬಜ್ಜಿ) ಸವಿಯಲು ಸಿದ್ಧ.

Advertisement

-ಶ್ರೀರಾಮ್ ಜಿ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next