Advertisement

Hospitalised: ಉಪಹಾರ ಸೇವಿಸಿದ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

02:59 PM Aug 16, 2023 | Team Udayavani |

ಚಿಂತಾಮಣಿ (ಚಿಕ್ಕಬಳ್ಳಾಪುರ): ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥರಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರದ ಬೆಳಗ್ಗೆ ನಡೆದಿದೆ.

Advertisement

ತಾಲೂಕಿನ ಅಂಬಾಜಿದುರ್ಗ ಹೋಬಳಿ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಕೆ.ರಾಗುಟ್ಟಹಳ್ಳಿ ಹಾಸ್ಟೆಲ್ ನಲ್ಲಿ ನೆಲೆಸಿರುವ ವಿದ್ಯಾರ್ಥಿಗಳಾದ ಶ್ರೀನಿವಾಸ್. ಭರತ್.ಶಶಿಕುಮಾರ್.ಗಗನ್. ಪ್ರಭಾಸ್.ಭವೇಶ್. ಅರವಿಂದ್. ಯಶ್ವಂತ್. ನವದೀಪ್.ಅಭಿಷೇಕ್. ರಾಜೇಶ್.ಲಕ್ಷ್ಮಿ ನಾಯಕ್.ನವೀನ್ ತೇಜ.ರಾಮ್ ಚರಣ್. ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಬೆಳಗಿನ ಉಪಹಾರಕ್ಕೆ ಇಡ್ಲಿ, ಸಾಂಬಾರ್ ಸೇವಿಸಿದ ನಂತರ ಅಸ್ವಸ್ಥರಾಗಿ ಹೊಟ್ಟೆನೋವು,ವಾಂತಿ ಭೇದಿಯಿಂದ ಬಳಲಾರಂಭಿಸಿದ್ದು ತಕ್ಷಣವೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪ್ರಾಯಶಃ ಫುಡ್ ಪಾಯಜನ್ ಆಗಿರಬಹುದು ಎನ್ನಲಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಇನ್ನೂ ಘಟನೆಯ ವಿಷಯ ತಿಳಿದ ಕೂಡಲೆ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಜಿಲ್ಲಾ ಆರೋಗ್ಯ ಅಧಿಕಾರಿ ಹಾಸ್ಟೆಲ್ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಬೆಳಗ್ಗೆ ಮಾಡಲಾಗಿದ್ದ ಇಡ್ಲಿ ಸಾಂಬಾರ್ ಅನ್ನು ಪರಿಶೀಲನೆ ನಡೆಸಿ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಬೇಟಿ ಮಾಡಿದ ವರದಿಗಾರರೊಂದಿಗೆ ತಿಳಿಸಿದ್ದಾರೆ.

ಚಿಂತಾಮಣಿ ಉಪ ವಿಭಾಗದ ಎ ಎಸ್ ಪಿ ಕುಶಲ್ ಚೌಕ್ಸೆ,ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

ಹಾಸ್ಟೆಲ್ ಅಡುಗೆ ಸಹಾಯಕರಲ್ಲಿ ಅಡುಗೆ ಮಾಡುವ ವಿಚಾರವಾಗಿ ಗೊಂದಲವಿದ್ದು ಈ ಘಟನೆಗೆ ಇದೇ ಸಾಕ್ಷಿ ಯಾಗಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿದ ನಂತರ ಸತ್ಯ ಸತ್ಯತೆ ಹೊರಬೀಳಲಿದೆ?

ಇದನ್ನೂ ಓದಿ: Snake: ಹೂಕೋಸಿನ ಒಳಗೆ ಅವಿತ್ತಿದ್ದ ಹಾವು! ಸೊಪ್ಪು ತರಕಾರಿ ಖರೀದಿಸುವಾಗ ಇರಲಿ ಎಚ್ಚರ!

Advertisement

Udayavani is now on Telegram. Click here to join our channel and stay updated with the latest news.

Next