Advertisement
ಮುಖ್ಯಾಧಿಕಾರಿ ಮತ್ತಡಿ ಮಾತನಾಡಿ, ಕೋವಿಡ್ 19 ವಿಚಾರದಲ್ಲಿ ಆಗಬೇಕಾದ ಕೆಲಸದ ಪ್ರಸ್ತಾವಿಸಿದರು. ಪ್ರತಿಕ್ರಿಯಿಸಿದ ಸದಸ್ಯ ವಿನಯ್ ಕುಮಾರ್ ಕಂದಡ್ಕ, ಈಗಾಗಲೇ ಹಲವು ಬಾರಿ ಸಭೆಗಳಾಗಿವೆ. ಸಮಿತಿ ರಚಿಸಲಾಗಿದೆ. ನ.ಪಂ. ಮೂಲಕ ನಗರದಲ್ಲಿ ರೇಶನ್ ಕಾರ್ಡ್ ರಹಿತರ ಪಟ್ಟಿ, ರೇಶನ್ ಕಾರ್ಡ್ ಇದ್ದು ಪಡಿತರ ಸಿಗದಿ ರುವ ಬಗ್ಗೆ ಮಾಹಿತಿ ಇದೆಯಾ? ಎಂ.ಬಿ.ಫೌಂಡೇಶನ್ ವಲಸೆ ಕಾರ್ಮಿಕರರಿಗೆ ವ್ಯವಸ್ಥೆ ಮಾಡದಿರುತ್ತಿದ್ದರೆ ನಗರದ ಪರಿಸ್ಥಿತಿ ಏನಾಗುತ್ತಿತ್ತು? ನಾವು ಸದಸ್ಯರು ನಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ನ.ಪಂ.ನಿಂದ ದೊರೆಯುವ ಬೆಂಬಲ ಏನು ಎಂದರು.
ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ, ಅನಾರೋಗ್ಯದಲ್ಲಿರುವ ಶಾಸಕ ಅಂಗಾರ ಅವರ ಜವಾಬ್ದಾರಿಯನ್ನು ಅಧಿಕಾರಿಗಳು ನಿಭಾಯಿಸಲಿ. ಅಸಂಘಟಿತ ಕಾರ್ಮಿಕರಿಗೆ ಊಟ ನೀಡುವ ಕುರಿತು ನಿರ್ಣಯ ಆಗಿದ್ದರೂ ಅದೇ ಕಾರ್ಮಿಕರನ್ನು ಕರೆದು ಪಡಿತರ ನೀಡಿದ್ದೀರಿ. ಸರಕಾರದ ಸುತ್ತೋಲೆ ಪ್ರಕಾರ ನ.ಪಂ.ಸಾಮಾನ್ಯ ನಿಧಿಯಿಂದ ಹಣ ಬಳಸಲು ಸೂಚಿಸಲಾಗಿದೆ. ಎಂ.ಬಿ. ಫೌಂಡೇಶನ್ ವತಿಯಿಂದ ನೀಡುತ್ತಿರುವ ಅನ್ನದಾಸೋಹ ಕಾರ್ಯಕ್ಕೆ ನ.ಪಂ. ಏನೆಲ್ಲ ನೆರವು ನೀಡಿದೆ ಎಂದರು. ಚೆನ್ನಕೇಶವ ದೇಗುಲದ ಅಕ್ಕಿ ಬಳಕೆಗೆ ಸಲಹೆ
ಸದಸ್ಯ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಮುಜುರಾಯಿ ಇಲಾಖೆಗೆ ಸೇರಿರುವ ಶ್ರೀ ಚೆನ್ನಕೇಶವ ದೇಗುಲದಲ್ಲಿ 60 ಕಿಂ. ಅಕ್ಕಿ ಇರುವ ಬಗ್ಗೆ ಮಾಹಿತಿಯಿದ್ದು, ಅದನ್ನು ವಲಸೆ ಕಾರ್ಮಿಕರ ಅನ್ನದಾಸೋಹಕ್ಕೆ ಬಳಸಬಹುದು. ಈ ಬಗ್ಗೆ ತಹಶೀಲ್ದಾರರು ಗಮನಿಸಬೇಕು. ಎಂ.ಬಿ. ಪೌಂಢೇಶನ್ ವತಿಯಿಂದ ಖಾಸಗಿ ಸಭಾಭವನದಲ್ಲಿ ಅಡುಗೆಯವರನ್ನು ಕರೆಸಿ ಅನ್ನದಾಸೋಹ ನಡೆಯುತ್ತಿದೆ. ಚೆನ್ನಕೇಶವ ದೇಗುಲದಲ್ಲಿ ಸುಸಜ್ಜಿತ ಪಾಕಶಾಲೆ, ಸಭಾಂಗಣ ವ್ಯವಸ್ಥೆಯಿದೆ. ಜತೆಗೆ ದೇಗುಲದಲ್ಲಿ ಅಡುಗೆಯವರು ಇದ್ದಾರೆ ಎಂದರು.
Related Articles
ತಾಲೂಕಿನಲ್ಲಿ ಉನ್ನತ ಅಧಿಕಾರಿ ಗಳು, ಜನಪ್ರತಿನಿಧಿಗಳ ಸಭೆ ನಡೆಸುವ ಸಂದರ್ಭ ಮಾಧ್ಯಮದವರಿಗೆ ಆಹ್ವಾನ ನೀಡದಿರುವುದು ಗಮನಕ್ಕೆ ಬಂದಿದೆ. ಆಡಳಿತ ಯಂತ್ರ ತಪ್ಪು ಹೆಜ್ಜೆ ಇಟ್ಟಾಗ ಎಚ್ಚರಿಸುವುದು ಮಾಧ್ಯಮ ಜವಾಬ್ದಾರಿ. ಒಟಿಪಿ ಇಲ್ಲದೆ ಪಡಿತರ ದೊರೆಯದ ಬಗ್ಗೆ ಮಾಧ್ಯಮದವರು ಸರಕಾರವನ್ನು ಎಚ್ಚರಿಸಿ ಸಮಸ್ಯೆ ಪರಿಹಾರವಾಗಿದೆ ಎಂದು ವಿಪಕ್ಷ ಮುಖಂಡ ಎಂ. ವೆಂಕಪ್ಪ ಗೌಡ ಹೇಳಿದರು.
Advertisement
ಮುಖ್ಯಾಧಿಕಾರಿ ಉತ್ತರಿಸಿ, ನ.ಪಂ. ಎಲ್ಲ ಸಿಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರ ಪಟ್ಟಿ ಮಾಡಿದ್ದೇವೆ. ಕಿಟ್ ವಿತರಣೆ, ಕೀಟನಾಶಕ ಸಿಂಪಡಣೆ, ಜನಜಾಗೃತಿ ಕೈಗೊಂಡಿದ್ದೇವೆ. ಎಂ.ಬಿ. ಫೌಂಡೇಶನ್, ಇತರ ಸಂಘಟನೆಗಳ ಅನ್ನದಾಸೋಹಕ್ಕೆ ಸಹಕಾರಿಸಲು ಸಿದ್ಧ. ಎ. 14ರ ತನಕ ಅವರು ಮುಂದುವರಿಸುವುದಾಗಿ ಹೇಳಿದ ಮೇರೆಗೆ ನಾವು ನೆರವು ನೀಡಿಲ್ಲ ಎಂದರು.
ತಹಶೀಲ್ದಾರ್ ಅನಂತಶಂಕರ್ ಮಾತನಾಡಿ, ಸರಕಾರದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಅರ್ಹರಿಗೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ. ಲೋಪ ಮಾಡಿಲ್ಲ. ನಿಮ್ಮೆಲ್ಲರ ಸಲಹೆ ಸೂಚನೆಯಂತೆ ಮುಂದುವರಿಯುವುದಾಗಿ ನುಡಿದರು.ಸದಸ್ಯ ಶರೀಫ್ ಕಂಠಿ ಎಂ.ಬಿ. ಫೌಂಡೇಶನ್ ನಡೆಸುತ್ತಿರುವ ಕಾರ್ಯ, ತಗಲುವ ಖರ್ಚಿನ ಬಗ್ಗೆ ಸಭೆಗೆ ತಿಳಿಸಿದರು. ವಾರ್ಡ್ ವ್ಯಾಪ್ತಿ ಆಹಾರ ಸಮಸ್ಯೆ ಕುರಿತು ಬಾಲಕೃಷ್ಣ ಭಟ್, ಬಾಲಕೃಷ್ಣ ರೈ, ಉಮ್ಮರ್ ಕೆ.ಎಸ್., ಬುದ್ದ ನಾಯ್ಕ, ಶಶಿಕಲಾ ನೀರಬಿದಿರೆ, ಡೇವಿಡ್ ಧೀರ ಕ್ರಾಸ್ತ ಪ್ರಸ್ತಾವಿಸಿದರು. ನಾರಾಯಣ ಶಾಂತಿನಗರ, ಸುಶೀಲ ಕಲ್ಲುಮುಟ್ಲು, ಶಿಲ್ಪಾ ಸುದೇವ್, ಪೂಜಿತ ಕೆ.ಯು., ವಾಣಿ ಜಟ್ಟಿಪಳ್ಳ, ಸರೋಜಿನಿ ಪೆಲತಡ್ಕ, ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ಪ್ರವಿತಾ ಪ್ರಶಾಂತ್ ಉಪಸ್ಥಿತರಿದ್ದರು.