Advertisement

ವಾರ್ಷಿಕ ಗುರುಮೂರ್ತಿ ಪ್ರತಿಷ್ಠಾಪನ ದಿನಾಚರಣೆ, ಆಹಾರ ಕಿಟ್‌ ವಿತರಣೆ

12:15 PM Jul 09, 2021 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಬೊರಿವಿಲಿ – ದಹಿಸರ್‌ ಸ್ಥಳೀಯ ಕಚೇರಿಯ ವತಿಯಿಂದ ಜು. 6ರಂದು ಬೆಸ್ಟ್‌ ಕ್ವಾಟ್ರìಸ್‌, ಬಿಎಂಸಿ ಗ್ಯಾರೇಜಿನ ಹತ್ತಿರ, ಶಿಂಪೋಲಿ ರೋಡ್‌ ಗೊರಾಯಿ, ಬೊರಿವಿಲಿ ಪಶ್ಚಿಮದಲ್ಲಿರುವ ಸ್ಥಳೀಯ ಕಚೇರಿ ಗುರುಸನ್ನಿಧಿಯಲ್ಲಿ ಉಳೂ¤ರು ಶೇಖರ ಶಾಂತಿ ಮತ್ತು ಸಂಗಡಿಗರಿಂದ ಗುರುಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕ ದಿನಾಚರಣೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರಗಿದವು.

Advertisement

ಬೆಳಗ್ಗೆ 7ರಿಂದ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರ್ತಿಶುದ್ಧಿ, ವಿವಿಧ ಅಭಿಷೇಕ, ಅಲಂಕಾರ, ಮಂಗಳಾರತಿ ಕಾರ್ಯಕ್ರಮಗಳು ನೆರವೇರಿದವು. ಪೂಜಾ ಕೈಂಕರ್ಯದ ಯಜಮಾನತ್ವವನ್ನು ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್‌ ಮತ್ತು ಲೀಲಾ ದಂಪತಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಿಂದ ಭಜನ ಕಾರ್ಯಕ್ರಮ ಜರಗಿತು. ಮಂಗಳಾರತಿ, ಭಕ್ತರಿಗೆ, ಸದಸ್ಯರಿಗೆ ಪ್ರಸಾದ ವಿತರಣೆ ಜರಗಿತು.

ಇದೇ ಸಂದರ್ಭದಲ್ಲಿ  ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರ ಮುಂದಾಳತ್ವದಲ್ಲಿ ಸಮಾಜದ ದಾನಿಗಳ ನೆರವಿನಿಂದ ಅಸೋಸಿಯೇಶನ್‌ನ ಎಲ್ಲ ಸ್ಥಳೀಯ ಕಚೇರಿಗಳಿಗೆ ಕೊರೊನಾ

ದಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ತೊಂದರೆಗೀ ಡಾದ ಸಮಾಜದ ಬಡ ಅಶಕ್ತ ಕುಟುಂ ಬಗಳಿಗೆ ಕೊಡಮಾಡಿದ ಆಹಾರ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್‌ ಬಿ. ಅಮೀನ್‌ ಮಾತನಾಡಿ, ಸಂಸ್ಥೆಯ ಹಿರಿಯರ ಮಾರ್ಗದರ್ಶನದ ಮೂಲಕ ಹಲವಾರು ಜನಪರ ಕಾರ್ಯಕ್ರಮ ಗಳನ್ನು ನೀಡಿ ಆ ಮೂಲಕ ಸಮಾಜದ ಬಡವರ್ಗದ ಜನರಿಗೆ ಹಿಂದಿನಿಂದಲೂ ಬಿಲ್ಲವರ ಅಸೋಸಿಯೇಶನ್‌ ಆಶಾಕಿರ ಣವಾಗಿ ಸಮಾಜದ ಜನರ ಸುಖ, ದುಃಖಗಳಿಗೆ ಸ್ಪಂದಿಸುತ್ತ ಬಂದ ಸಂಸ್ಥೆಯಾಗಿದೆ. ಕೊರೊನಾದಿಂದ ಜಗತ್ತೇ ಸಂಕಷ್ಟಕ್ಕೊಳಗಾಗಿರುವ ಸಮಯದಲ್ಲಿ ಸಮಾಜದ ಹಲವಾರು ಕುಟುಂಬ ಗಳುಗಳು ಕಂಗೆಟ್ಟಿದ್ದು, ಇಂತಹ ಪರಿಸ್ಥಿತಿ ಯಲ್ಲಿ ನಾರಾಯಣಗುರುಗಳ ತತ್ತÌದಂತೆ ಸಂಘಟನೆಯಿಂದ ನಾವೆಲ್ಲ ಬಲಯುತರಾಗಿ ಆರ್ಥಿಕ ಸಂಕಷ್ಟದ ಕುಟುಂಬಗಳಿಗೆ ಸಹಾಯ ಮಾಡಲು ಮುಂದಾಗೋಣ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷ ರಜಿತ್‌ ಎಲ್‌. ಸುವರ್ಣ, ಗೌರವ ಕಾರ್ಯದರ್ಶಿ ಶೇಖರ್‌ ಅಮೀನ್‌, ಜತೆ ಕಾರ್ಯದರ್ಶಿ ವತ್ಸಲಾ ಕೆ. ಪೂಜಾರಿ, ಜತೆ ಕೋಶಾಧಿಕಾರಿ ಉಮೇಶ್‌ ಜಿ. ಕೋಟ್ಯಾನ್‌, ಕೃಷ್ಣರಾಜ್‌ ಸುವರ್ಣ, ಕೇಶರಂಜನ್‌ ಮೂಲ್ಕಿ, ರಾಘು ಜಿ. ಪೂಜಾರಿ, ಚಂದ್ರಶೇಖರ ಎ. ಪೂಜಾರಿ, ಸುಂದರಿ ಪೂಜಾರಿ, ಕೇಂದ್ರ ಕಚೇರಿ ಉಪ ಯುವ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್‌ ಎಂ. ಕೋಟ್ಯಾನ್‌, ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಕೇಶವ ಕೋಟ್ಯಾನ್‌, ಮಾಜಿ ಕಾರ್ಯದರ್ಶಿ ಧರ್ಮಪಾಲ ಅಂಚನ್‌, ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ಬೊರಿವಿಲಿ ಪೂರ್ವ ಶಾಖಾ ಪ್ರಬಂಧಕ ಅಶೋಕ್‌ ಶೆಟ್ಟಿ, ಭಾರತ್‌ ಬ್ಯಾಂಕ್‌ ಬೊರಿವಲಿ ಪಶ್ಚಿಮ ಶಾಖೆಯ ಕಸ್ತೂರಿ ಅಮೀನ್‌, ದಯಾನಂದ ಸುವರ್ಣ, ಕರುಣಾಕರ ಪೂಜಾರಿ, ವಾರಿಜಾ ಕೆ. ಸನಿಲ್‌, ಸುಜಾತಾ ಕೆ. ಪೂಜಾರಿ, ಆರ್‌. ಡಿ. ಕೋಟ್ಯಾನ್‌, ಹರೀಶ್‌ ಕೋಟ್ಯಾನ್‌, ರವಿ ಪೂಜಾರಿ, ಶಿವಾನಂದ ಪೂಜಾರಿ, ಅಶೋಕ್‌ ನಿಂಜೂರು ಉಪಸ್ಥಿತರಿದ್ದರು.

ಪರಿಸರದ ಸಮಾಜದ ಬಡ ಕುಟುಂಬಗಳಿಗೆ ಕೇಂದ್ರ ಕಚೇರಿ ನೀಡಿದ ಆಹಾರದ ಪೊಟ್ಟಣಗಳನ್ನು ಕಾರ್ಯ ಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಅತಿಥಿಗಳು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next