Advertisement

ವಾರಿಯರ್ಸ್‌ಗೆ ಆಹಾರ ಕಿಟ್‌ ವಿತರಣೆ

07:37 PM Jun 11, 2021 | Team Udayavani |

ಮಂಡ್ಯ: ಯೋಧ ಹಾಗೂ ರೈತ ದೇಶದ ಬೆನ್ನುಲುಬಾದರೆ, ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ದೇಶದಆರೋಗ್ಯ ಸುಧಾರಿಸುವಲ್ಲಿ ಬೆನ್ನೆಲುಬಾಗಿ ಶ್ರಮಿಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಕೀಲಾರ ಕೆ.ಕೆ.ರಾಧಾಕೃಷ್ಣ ಅಭಿಪ್ರಾಯಪಟ್ಟರು.

Advertisement

ನಗರದ ಶಂಕರಪುರ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವಆಶಾ ಕಾರ್ಯಕರ್ತೆಯರು, ದಾದಿಯರಿಗೆ ಕೀಲಾರರಾಧಾಕೃಷ್ಣ ಅಭಿಮಾನಿಗಳ ಬಳಗದ ವತಿಯಿಂದಆಹಾರ ಕಿಟ್‌ ವಿತರಿಸಿ ಮಾತನಾಡಿದರು.

ಕೊರೊನಾಇನ್ನೂ 2ರಿಂದ 3 ವರ್ಷ ಇರುವ ಮುನ್ಸೂಚನೆ ಇದ್ದು,ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುವುದನ್ನು ಕಡಿಮೆ ಮಾಡಿ ಎಂದರು.ವಿಧಾನಸಭಾಕ್ಷೇತ್ರದ ಎಲ್ಲ 24 ಗ್ರಾಪಂ ವ್ಯಾಪ್ತಿಯ ವಾರಿಯರ್ಗಳಾದ ಆಶಾ, ಶುಶ್ರೂಷಕರು, ಡಿ.ಗ್ರೂಪ್‌ ನೌಕರರಿಗೆಆಹಾರ ಕಿಟ್‌ ವಿತರಿಸಲಾಗಿದ್ದು, ಈಗಾಗಲೇ ನಗರದ35 ವಾರ್ಡ್‌, 160 ಹಳ್ಳಿಗಳಲ್ಲಿ ಸ್ಯಾನಿಟೈಸರ್‌ ಸಿಂಪಡಣೆಮಾಡಲಾಗಿದೆ ಎಂದರು.

ಶಂಕರಪುರ ಪ್ರಾಥಮಿಕಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ.ಯಶವಂತಗೌಡ, ಗ್ರಾಪಂ ಸದಸ್ಯೆ ಕಲ್ಪನಾ, ನಗರಸಭಾ ಸದಸ್ಯೆಸೌಭಾಗ್ಯ, ಮಾಜಿ ಸದಸ್ಯ ಬೋರೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next