Advertisement

8000 ಮಂದಿಗೆ ಆಹಾರದ ಕಿಟ್‌ ವಿತರಣೆ

07:55 PM Jun 07, 2021 | Team Udayavani |

ಕೆಜಿಎಫ್: ಕೋವಿಡ್‌ 2ನೇ ಅಲೆಸಂದರ್ಭದಲ್ಲಿ ಸಮುದಾಯದ 8000ಮಂದಿಗೆ ಆಹಾರ ಕಿಟ್‌ ವಿತರಣೆ ಮಾಡಲಾಗಿದೆ ಎಂದು ಕರ್ನಾಟಕ ಬ್ರಾಹ್ಮಣಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹೇಳಿದರು.

Advertisement

ಬೆಮಲ್‌ ನಗರದ ಗಾಯತ್ರಿ ಮಂದಿರದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಆಹಾರ ಕಿಟ್‌ ವಿತರಣೆ ಮಾಡಿ ಮಾತನಾಡಿ, ಕೊರೊನಾ ಸಮಯದಲ್ಲಿ ತೀವ್ರಸಂಕಷ್ಟದಲ್ಲಿರುವ ಬ್ರಾಹ್ಮಣ ಸಮುದಾಯದವರಿಗೆ ಸಹಾಯ ಮಾಡಲು ಇತರೆವರ್ಗದವರು, ರಾಜಕೀಯ ಮುಖಂಡರುಮುಂದೆ ಬಂದಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿರುವ ಬ್ರಾಹ್ಮಣರು ತಮ್ಮ ಸಹಜ ವೃತ್ತಿಯನ್ನು ನಡೆಸಲಾಗದೆ ಕಷ್ಟ ಪಡುತ್ತಿದ್ದರು. ಅವರಿಗೆ ಅಭಿವೃದ್ಧಿ ಮಂಡಳಿಯಿಂದ ಆಹಾರ ಕಿಟ್‌ ನೀಡುವುದು ಬೇಡ ಎಂದುಸರ್ಕಾರದ ಅಧಿಕಾರಿಗಳು ಸೂಚಿಸಿದ್ದರಿಂದ,ದಾನಿ ಗಳಿಂದ ಪಡೆಯಲಾಗುತ್ತಿದೆಎಂದರು. ಬೈರತಿ ಬಸವರಾಜ್‌,ಗೋಪಾಲಯ್ಯ ಮೊದಲಾದ ಸಚಿವರುಉದಾರವಾಗಿ ಸಹಕಾರ ನೀಡಿದ್ದಾರೆ.

ಇತರೆಸಮುದಾಯದವರು ಕೂಡ ಸೌಲಭ್ಯಕೊಟ್ಟಿದ್ದಾರೆ. ಮಂಡಳಿಯಿಂದ 8000 ವಿದ್ಯಾರ್ಥಿಗಳಿಗೆ ವೇತನ, ನವದೆಹಲಿಯಲ್ಲಿಐಎಎಸ್‌ ತರಬೇತಿ ಶಿಬಿರ ನಡೆಸಲಾಗುತ್ತಿದ್ದು,ಈ ಬಾರಿ ಕನಿಷ್ಠ 35 ಮಂದಿ ಐಎಎಸ್‌ಅಧಿಕಾರಿಗಳಾಗುವ ವಿಶ್ವಾಸ ಇದೆ. ಬಡವರಿಗೆ 1000 ಮನೆ ನೀಡಲು ಅರ್ಜಿಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು.ಮಂಡಳಿಯ ನಿರ್ದೇಶಕಿ ವತ್ಸಲಾ,ಬೆಮಲ್‌ ಬ್ರಾಹ್ಮಣ ಸಂಘದ ಅಧ್ಯಕ್ಷಶೇಷಗಿರಿರಾವ್‌ ಮಾತನಾಡಿದರು.ವೆಂಕಟೇಶಮೂರ್ತಿ ಸ್ವಾಗತಿಸಿದರು.ಕೆ.ಪಿ.ಸುರೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next