ಡಿ. ನಟರಾಜು
ಕೊಳ್ಳೇಗಾಲ: ಕೊರೊನಾ ಸೋಂಕು ಮುಗಿದೇ ಹೋಯಿತು ಎಂಬಂತೆ ಜನಜಂಗುಳಿ, ಒಬ್ಬರಿಗೊಬ್ಬರು ಅಂಟಿಕೊಂಡಂತೆ ಜನರು ಮುಗಿಬಿದ್ದಿರುವ ದೃಶ್ಯಗಳುಕಂಡು ಬರುತ್ತಿವೆ.
ಪಟ್ಣಣದ ಆರ್‌ಎಂಸಿ ಆವರಣದಲ್ಲಿ ಸೋಮವಾರ ಉಚಿತ ಆಹಾರ ಕಿಟ್ ಪಡೆಯಲು ಕಾರ್ಮಿಕರು ಸಾಮಾಜಿಕ ಅಂತರ, ಸರಿಯಾಗಿ ಮಾಸ್ಕ್ ಧರಿಸದೇ ನೂಕುನುಗ್ಗಲಿನಲ್ಲಿ ನೆರೆದಿದ್ದರು. ನಾಲ್ಕು ದಿನಗಳ ಹಿಂದೆ ಇತ್ತೀಚೆಗೆ ಶಾಸಕ ಎನ್.ಮಹೇಶ್ ಅವರು ಹಲವರಿಗೆ ಕಿಟ್ ವಿತರಣೆ ಮಾಡಿ ಸಾಂಕೇತಿಕವಾಗಿ ಚಾಲನೆ ನೀಡಿದ್ದರು. ಬಳಿಕ ಕಾರ್ಮಿಕ ಇಲಾಖೆಯಿಂದ ನೋಂದಣೆಗೊಂಡ ಕಾರ್ಮಿಕರಿಗೆ ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಆಹಾರ ಕಿಟ್ ಪಡೆಯುವಂತೆ ಸೂಚನೆ ನೀಡಲಾಗಿತ್ತು. ತಾಲೂಕಿನಲ್ಲಿ ಸುಮಾರು 10 ಸಾವಿರ ಮಂದಿ ನೋಂದಾಯಿತ ಕಾರ್ಮಿಕರಿದ್ದು, ಇದೀಗ ಸಹಸ್ರಾರು ಮಂದೆ ಒಮ್ಮೆಲೆ ಜಮಾಯಿಸಿ, ನೂಕು ನುಗ್ಗಲಿನಲ್ಲಿಕಿಟ್ ಪಡೆಯುತ್ತಿದ್ದಾರೆ.
ಸೋಮವಾರು ಬರೋಬ್ಬರಿ 2 ಸಾವಿರ ಮಂದಿ ಆರ್‌ಎಂಸಿ ಉಗ್ರಾಣ ಮುಂದೆ ಜಮಾಯಿಸಿದ್ದರು. ಕೊರೊನಾ ಎಲ್ಲಿದೆ ಎಂಬಂತೆ ಒಂದೇ ಕಡೆ ಜನರು ನೆರೆದಿದ್ದರು. ಮಾಸ್ಕ್ಕೂಡ ಸರಿಯಾಗಿ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಮಾಯವಾಗಿತ್ತು. ಯಾರೊಬ್ಬರಿಗೊಸೋಂಕಿನಭಯವೇ ಇರಲಿಲ್ಲ.
ಕೊರೊನಾ ನಿಯಂತ್ರಿಸಲು ರಚಿಸಿರುವ ಕೊರೊನಾ ಕಾರ್ಯ ಪಡೆಗಳು, ಕೋವಿಡ್ ಕ್ಯಾಪ್ಟನ್ ಯೋಜನೆಗಳು ಏನು ಮಾಡುತ್ತಿವೆ, ನೆಪ ಮಾತ್ರಕ್ಕೆ ಕಚೇರಿಯಲ್ಲಿ ಕುಳಿತು ಸಭೆಗಳನ್ನುಮಾಡಿದರೆ ಸಾಲದು,ಫೀಲ್ಡ್‌ಗಿಳಿದು ಇಂತಹ ಜನದಟ್ಟಣೆ, ನೂಕು ನುಗ್ಗಲನ್ನು ತಡೆಯಲುಕ್ರಮಕೈಗೊಳ್ಳಬೇಕಿತ್ತು.ಯಾವುದೇ ಪೂರ್ವ ಸಿದ್ಧತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಬೇಕಾಬಿಟ್ಟಿಯಾಗಿ ಹೀಗೆ ಮಾಡಿದ್ದರಿಂದಜನಜಂಗುಳಿಉಂಟಾಗಿದೆಎಂದು ಸಾರ್ವಜನಿಕರು ದೂರಿದ್ದಾರೆ.