Advertisement
ಸಮಸ್ಯೆ ಇತ್ಯರ್ಥಕ್ಕೆ ದೌಡು: ಗೌರಿಬಿದನೂರು ತಾಲೂಕಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರ ಮಧ್ಯೆ ಸಂಘರ್ಷ ತಾರಕಕ್ಕೇರಿ ಸಗಟು ಗೋದಾಮಿನಿಂದ ಪಡಿತರ ಎತ್ತುವಳಿ ಮಾಡಲು ನಿರಾಕರಿಸಿದ 10 ಸರ್ಕಾರಿ ನ್ಯಾಯಬೆಲೆಅಂಗಡಿ ಮಾಲೀಕರ ಪರವಾನಿಗೆಯನ್ನು ಆಹಾರ ಇಲಾಖೆಯ ಉಪನಿರ್ದೇಶಕಿ ಸವಿತಾ ಅಮಾನತು ಗೊಳಿಸಿರುವ ಹಿನ್ನೆಲೆಯಲ್ಲಿ ಶಾಸಕ ಶಿವಶಂಕರ್‌ರೆಡ್ಡಿ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ.
Related Articles
Advertisement
ಅಧಿಕಾರಿಗಳಿಂದ ಸಂಘ ವಿಭಜಿಸುವ ಹುನ್ನಾರ : ಕ್ಷೇತ್ರದ ಶಾಸಕರ ಸಲಹೆ ಮೇರೆಗೆ ಗೋದಾಮಿನಿಂದ ಆಹಾರಧಾನ್ಯಗಳನ್ನು ಎತ್ತುವಳಿ ಮಾಡಿ ನಾಗರಿಕರಿಗೆ ವಿತರಿಸಲುಕ್ರಮಕೈಗೊಂಡಿದ್ದೇವೆ. ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಜೊತೆಗೆ ಅವಹೇಳನೆ ಸಹ ಮಾಡಿಲ್ಲ ಎಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು. ಈ ಸಂಬಂಧ ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಆಹಾರ ಇಲಾಖೆಯ ಅಕಾರಿಗಳ ಕಾರ್ಯವೈಖರಿ ವಿರೋಧಿಸಿದ್ದೇವೆ. ಅಧಿಕಾರಿಗಳು ಸಂಘವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಆಹಾರಧಾನ್ಯ ಎತ್ತುವಳಿ ಮಾಡಿದ್ದೇವೆ ಎಂದು ತಿಳಿಸಿದರು.
25 ಅಂಗಡಿ ಮಾಲೀಕರರಿಂದ ಎತ್ತುವಳಿ : ಅಂಗಡಿ ಮಾಲೀಕರ ಪರವಾನಿಗೆ ಅಮಾನತುಗೊಳಿಸಿದ ಬಳಿಕ ಶಾಸಕರ ಮಧ್ಯೆ ಪ್ರವೇಶದಿಂದ ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳುಕಂಡು ಬರುತ್ತಿದ್ದು, ಈಗಾಗಲೇ ಸುಮಾರು25 ರಿಂದ27 ಮಂದಿಗೆ ಗೋದಾಮಿನಿಂದ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿದ್ದಾರೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಗೌರಿಬಿದನೂರು ತಾಲೂಕಿನಲ್ಲಿ111 ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿದ್ದು, ಮುಂದಿನ ವಾರದೊಳಗೆ ಎಲ್ಲಾ ಅಂಗಡಿ ಮಾಲೀಕರು ಆಹಾರಧಾನ್ಯವನ್ನು ಎತ್ತುವಳಿ ಮಾಡುವ ಸಾಧ್ಯತೆಯಿದೆ.
ಆಹಾರ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಿದ್ದೇನೆ. ಅಂಗಡಿಗಳ ಪರವಾನಿಗೆ ಅಮಾನತು ಆದೇಶ ವಾಪಸ್ಸು ಪಡೆಯಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕ್ಷೇತ್ರದಲ್ಲಿ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಲಾಗಿದೆ. – ಎನ್.ಎಚ್.ಶಿವಶಂಕರ್‌ರೆಡ್ಡಿ, ಶಾಸಕರು ಗೌರಿಬಿದನೂರು ಕ್ಷೇತ್ರ