ವಿಜಯಪುರ: ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಸಮಾಜ ಸೇವಕ ಮಂಜುನಾಥ ಕಾಮಗೊಂಡ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಭೀಮಾ ನದಿ ಪ್ರವಾಹ ಪೀಡಿತ ಇಂಡಿ ತಾಲೂಕಿನ ಮಿರಗಿ, ರೋಡಗಿ ಗ್ರಾಮಗಳಲ್ಲಿ ತಲಾ 900 ರೂ. ಮೌಲ್ಯದ 500 ಕಿಟ್ ವಿತರಿಸಿದರು.
ಪ್ರವಾಹದ ಅಬ್ಬರ ತಗ್ಗಿದೆ ಎಂದರು ಸಂತ್ರಸ್ತರು ಮನೆಗೆ ಮರಳಿದರೂ ಮನೆಗಳಲ್ಲಿ ದಿನ ಬಳಕೆ ವಸ್ತುಗಳೇ ಇಲ್ಲ. ಬಹುತೇಕ ಕುಟುಂಬಗಳ ಬದುಕು ಸಂಪೂರ್ಣ ಬೀದಿಗೆ ಬಂದಿದ್ದು, ದಿನಸಿ ಕೊಳ್ಳಲು ಬಿಡಿಗಾಸೂ ಇಲ್ಲದ ದುಸ್ಥಿತಿ. ಇದನ್ನು ಅರಿತ ಮಂಜುನಾಥ ದಿನಸಿ ಕಿಟ್ ವಿತರಿಸಿ,ಇವಿಷ್ಟೇ ಗ್ರಾಮಗಳಲ್ಲದೇ ಪ್ರವಾಹ ಪೀಡಿತ 10 ಹಳ್ಳಿಗಳಿಗೆ ಧಾನ್ಯಗಳ ಕಿಟ್ ತರಕಾರಿ, ಹಣ್ಣುಗಳನ್ನು ವಿತರಿಸುವುದಾಗಿ ಹೇಳಿದರು.
ಈ ಹಿಂದೆ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿಯೂ ಸಂತ್ರಸ್ತರಿಗೆ ಅಹಾರ್ ಧಾನ್ಯ ಕಿಟ್ ವಿತರಿಸಿ ಮಾಡಿ ಮಾನವೀಯತೆ ಮೆರೆದಿದ್ದ ಮಂಜುನಾಥ, ಈ ಬಾರಿಯೂ ತಮ್ಮ ಮಾನವೀತೆ ತೋರಿದ್ದಾರೆ. ಇದಲ್ಲದೇ ಪ್ರವಾಹದಲ್ಲಿ ಪಠ್ಯಪುಸ್ತಕ, ನೋಟ್ ಬುಕ್ ಕೊಚ್ಚಿಹೋಗಿದ್ದ, ಮಕ್ಕಳಿಗೆ ಬುಕ್, ನೋಟ್ ಬುಕ್, ಬ್ಯಾಗ್ ಗಳನ್ನು ನೀಡುವ ಭರವಸೆ ನೀಡಿದ್ದಾರೆ.
ಪ್ರವಾಹ ಪೀಡಿತರ ನೆರವಿಗೆ ನಿಂತಿರುವ ಮಂಜುನಾಥ ಅವರ ಕಾರ್ಯಕ್ಕೆ ಸಂತ್ರಸ್ತರು ಕೃತಜ್ಞತೆ ಸಲ್ಲಿಸಿದ್ದಾರೆ.