ಮೊಳಕಾಲ್ಮೂರು: ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಟ್ಯಾಕ್ಸಿ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.
ಜಿ.ಪಂ ಸದಸ್ಯ ಡಾ| ಬಿ.ಯೋಗೇಶ್ ಬಾಬು ಮಾತನಾಡಿ, ಕೊರೊನಾ ಕಷ್ಟಕಾಲದಲ್ಲಿ ಕಾಂಗ್ರೆಸ್ ಪಕ್ಷ ಬಡವರ, ಕಾರ್ಮಿಕರ ಹಾಗೂ ರೈತರ ಪರ ಬೆನ್ನೆಲುಬು ಆಗಿ ಕೆಲಸ ಮಾಡುತ್ತಿದೆ. ದೇಶಾದ್ಯಂತ ಹರಡಿರುವ ಕೋವಿಡ್ ಹಿಮ್ಮೆಟ್ಟಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಲಸಿಕೆಗೆ ಕಾಂಗ್ರೆಸ್ ಪಕ್ಷ ನೂರು ಕೋಟಿ ರೂ.ಗಳ ಯೋಜನೆ ರೂಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಸಿಕೆ ಕಲ್ಪಿಸಲು ಅನುಮತಿ ಕೋರಿದ್ದರೂ ರಾಜ್ಯ ಸರ್ಕಾರ ನಿರಾಕರಿಸಿತು ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ನ ತಾಲೂಕು ಅಧ್ಯಕ್ಷ ಡಾ| ಎನ್.ಕೆ. ದಾದಾಪೀರ್ ಮಾತನಾಡಿ, ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅತಿ ಹೆಚ್ಚು ಟ್ಯಾಕ್ಸಿ ಚಾಲಕರು ಹಾಗೂ ಬಡ ಉದ್ದಿಮೆದಾರರಿಗೆ ಸಹಕಾರ ನೀಡಲು ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಆದೇಶದ ಮೇರೆಗೆ ಯುವ ಕಾಂಗ್ರೆಸ್ ವತಿಯಿಂದ ಎಲ್ಲಾ ಟ್ಯಾಕ್ಸಿ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ನೀಡಿ ಸಹಕರಿಸಲಾಗುವುದು ತಿಳಿಸಿದರು.
ಪ.ಪಂ ಸದಸ್ಯರಾದ ಎಂ.ಅಬ್ದುಲ್ಲಾ, ನಬಿಲ್ ಅನ್ಸಾರ್,ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುದ್ದಪ್ಪ, ಚಾಲಕರ ಯೂನಿಯನ್ ಅಧ್ಯಕ್ಷ ಗಿರಿ, ಯುವ ಕಾಂಗ್ರೆಸ್ ನ ತಾಲೂಕು ಉಪಾಧ್ಯಕ್ಷ ನಾಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಬಾಷಾ, ಮಾಲಿಕ್, ಪವನ್, ಜಾಪರ್, ದಿವಾಕರ್, ಓಬಣ್ಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕರುನಾಡ ಜಿಯಾವುಲ್ಲಾ, ಕೆಪಿಸಿಸಿಯ ಭಕ್ತಪ್ರಹ್ಲಾದ, ಅಲ್ಪ ಸಂಖ್ಯಾತ ತಾಲೂಕು ಅಧ್ಯಕ್ಷ ಜುಬೇರ್, ಮುಖಂಡರಾದ ಜಗಧೀಶ್,ಗೋಪಾಲ್, ಗೌಸ್, ಎಸ್.ಟಿ.ಪಾಲಯ್ಯ, ಬಾಲಚೌಡಪ್ಪ, ಕಿರಣ್ ವಾಂಜ್ರೆ, ನಾಗರಾಜ್, ಶ್ರೀನಿವಾಸ್, ನವೀನ್ ಕುಮಾರ್ ಇದ್ದರು.