Advertisement

ಮೆಂತ್ಯೆ ಸೊಪ್ಪಿನ ವೈವಿಧ್ಯಮಯ ಅಡುಗೆಗಳು

06:12 PM Jul 04, 2022 | Team Udayavani |

ಅತ್ಯಂತ ವಿಶಿಷ್ಟವಾದ ಪರಿಮಳವನ್ನು ಹೊಂದಿರುವ ಮೆಂತ್ಯೆ ಸೊಪ್ಪಿನಲ್ಲಿ ಹಲವಾರು ಆರೋಗ್ಯಕರವಾದ ಗುಣಗಳಿವೆ. ಇದರಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳಾದ ಕೆ, ಎ , ಸಿ ಮತ್ತು ಆಂಟಿ ಆಕ್ಸಿಡೆಂಟ್‌ಗಳಿವೆ. ಆದುದರಿಂದ ದಿನ ನಿತ್ಯದ ಅಡುಗೆಯಲ್ಲಿ ಇದನ್ನು ಬಳಸುವುದು ಬಹಳ ಉಪಯುಕ್ತ.

Advertisement

ಮೆಂತ್ಯೆ ಸೊಪ್ಪಿನ ಅವಲಕ್ಕಿ ಒಗ್ಗರಣೆ

ಬೇಕಾಗುವ ಸಾಮಗ್ರಿಗಳು: ಮೆಂತೆ
ಸೊಪ್ಪು-1/2 ಕಪ್‌, ದಪ್ಪ
ಅವಲಕ್ಕಿ-2 ಕಪ್‌,
ಈರುಳ್ಳಿ-1, ಅರಿಶಿನ
ಪುಡಿ-1 ಚಮಚ,
ಒಗ್ಗರಣೆಗೆ: ಸಾಸಿವೆ-1
ಚಮಚ, ಉದ್ದಿನಬೇಳೆ-1
ಚಮಚ, ಹಸಿಮೆಣಸು-2, ನೆಲಗಡಲೆ ಬೀಜ-2 ಚಮಚ, ಎಣ್ಣೆ- 4 ಚಮಚ, ಕರಿಬೇವು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಲಿಂಬೆ ರಸ-2 ಚಮಚ, ತೆಂಗಿನತುರಿ-1 ಹಿಡಿ.

ತಯಾರಿಸುವ ವಿಧಾನ: ದಪ್ಪ ಅವಲಕ್ಕಿಯನ್ನು 5 ನಿಮಿಷ ನೀರಿನಲ್ಲಿ ನೆನೆಸಿ ನಂತರ ಹಿಂಡಿ ಒಂದು ತಟ್ಟೆಯಲ್ಲಿ ಹರಡಿ. ಬಾಣಲೆಯಲ್ಲಿ ಮೇಲೆ ತಿಳಿಸಿದ ಸಾಮಗ್ರಿಗಳನ್ನು ಬಳಸಿ ಒಗ್ಗರಣೆ ಮಾಡಿ ಅದಕ್ಕೆ ಈರುಳ್ಳಿ ಸೇರಿಸಿ ಹುರಿಯಿರಿ. ಇದಕ್ಕೆ ತೊಳೆದು ಹೆಚ್ಚಿಟ್ಟ ಮೆಂತೆ ಸೊಪ್ಪನ್ನು ಸೇರಿಸಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ. ಅದಕ್ಕೆ ಅವಲಕ್ಕಿ, ತೆಂಗಿನ ತುರು, ಅರಿಶಿನ, ಉಪ್ಪು ಮತ್ತು ಲಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಸ್ಟೌನಿಂದ ಕೆಳಗಿಳಿಸಿ. ಬೆಳಿಗ್ಗಿನ ಉಪಹಾರಕ್ಕೆ ಆರೋಗ್ಯಕರವಾದ ಮೆಂತೆ ಸೊಪ್ಪಿನ ಅವಲಕ್ಕಿ ಒಗ್ಗರಣೆ ಸಿದ್ದ.

ಮೆಂತೆ ಸೊಪ್ಪಿನ ರೊಟ್ಟಿ
ಬೇಕಾಗುವ ಸಾಮಗ್ರಿಗಳು: ಮೆಂತೆ ಸೊಪ್ಪು-1 ಕಪ್‌, ಅಕ್ಕಿ ಹಿಟ್ಟು-2 ಕಪ್‌, ಹಸಿಮೆಣಸು-2, ಶುಂಠಿ- 1 ಇಂಚು, ಉಪ್ಪು-ರುಚಿಗೆ ತಕ್ಕಷ್ಟು, ನೀರು-2ರಿಂದ 3 ಕಪ್‌.

Advertisement

ತಯಾರಿಸುವ ವಿಧಾನ: ಒಂದು ಬೌಲ್‌ ಗೆ ಅಕ್ಕಿಹಿಟ್ಟು, ತೊಳೆದು ಹೆಚ್ಚಿಟ್ಟ ಮೆಂತೆಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿ, ಹಸಿಮೆಣಸು, ಉಪ್ಪನ್ನು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಚೆನ್ನಾಗಿ ನಾದಿ. ನಂತರ ನಿಂಬೆ ಹಣ್ಣಿನಷ್ಟು ದೊಡ್ಡ ಉಂಡೆಯನ್ನು ಮಾಡಿ ಕಾವಲಿಯ ಮೇಲೆ ರೊಟ್ಟಿಯನ್ನು ತಟ್ಟಿ ಎರಡೂ ಬದಿ ಚೆನ್ನಾಗಿ ಕಾಯಿಸಿ. ಬಾಳೆಯ ಎಲೆಯ ಮೇಲೆ ರೊಟ್ಟಿ ತಟ್ಟಿ ಕಾವಲಿಗೆಗೆ  ಹಾಕಿದರೂ ರುಚಿಯಾಗಿರುತ್ತದೆ. ಚಟ್ನಿ ಅಥವಾ ಸಾಂಬಾರ್‌ ನೊಂದಿಗೆ ಬೆಳಗ್ಗಿನ ಉಪಹಾರಕ್ಕೆ ಸವಿಯಲು ಇದು ಉತ್ತಮ ತಿಂಡಿಯಾಗುತ್ತದೆ.

– ಡಾ. ಹರ್ಷಿತಾ ಎಂ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next