Advertisement

ಹಳ್ಳಿಗಳಲ್ಲಿರುವ ಬಡವರ ಮನೆಗೆ ಆಹಾರ : ಗ್ರಾಮ ಪಂಚಾಯತ್‌ನಿಂದ ಯೋಜನೆ

03:14 AM May 17, 2021 | Team Udayavani |

ಬೆಂಗಳೂರು: ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಗ್ರಾಮೀಣ ದುರ್ಬಲರು, ನಿರ್ಗತಿಕರ ಮನೆಗೆ ಊಟ ಪೂರೈಸಲು ಸರಕಾರ ಮುಂದಾಗಿದೆ.

Advertisement

ಇದಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಹಳ್ಳಿಗಳ ನಿರ್ಗತಿಕರು ಮತ್ತು ದುರ್ಬಲರನ್ನು ಗುರುತಿಸಿ ಸಿದ್ಧ ಆಹಾರದ ಪೊಟ್ಟಣಗಳನ್ನು ಹಂಚಲಾಗುತ್ತದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ 150 ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಬೇಕಾಗುವ ಹಣಕಾಸಿನ ವ್ಯವಸ್ಥೆಯನ್ನು ಆಯಾ ಗ್ರಾ.ಪಂ.ಗಳು ನಿಭಾಯಿಸಬೇಕಾಗುತ್ತದೆ.

ಹಳ್ಳಿಗಳ ದುರ್ಬಲ ಕುಟುಂಬಗಳನ್ನು ಗುರುತಿಸಲು ಮತ್ತು ಆಹಾರವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಸ್ವ-ಸಹಾಯ ಗುಂಪುಗಳ ನೆರವು ಪಡೆಯಬಹುದು. ಊಟ ತಯಾರಿಸಲು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡವರ ಸೇವೆ ಪಡೆಯಬಹುದು ಎಂದು ಸೂಚನೆ ನೀಡಲಾಗಿದೆ.

ಊಟದಲ್ಲಿ ಏನಿರಲಿದೆ?
ಊಟದಲ್ಲಿ ಬೇಳೆ, ಹಸುರು ತರಕಾರಿಗಳ ಜತೆಗೆ ಆಯಾ ಋತು ಮಾನದ ತರಕಾರಿಗಳು ಇರಲಿವೆ. ಅನ್ನ ಅಥವಾ ರೊಟ್ಟಿ ಸಿಗಲಿದೆ. 150ಕ್ಕಿಂತ ಹೆಚ್ಚಿನ ಆಹಾರ ಪೊಟ್ಟಣಗಳ ಅಗತ್ಯ ಬಿದ್ದರೆ ಬೇಕಾಗುವ ಹಣವನ್ನು 15ನೇ ಹಣಕಾಸು ಆಯೋಗದ ಅನು ದಾನ ಮತ್ತು ಸ್ವಂತ ಸಂಪನ್ಮೂಲ ಗಳಿಂದ ಭರಿಸಬೇಕು ಎಂದು ತಿಳಿಸಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮೀಣ ಭಾಗದ ನಿರ್ಗತಿಕ ಮತ್ತು ಬಡ ಕುಟುಂಬಗಳಿಗೆ ಊಟ ಪೂರೈಸಲು ಕಾರ್ಯಕ್ರಮ ರೂಪಿಸಲಾಗಿದೆ. ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲಾಗುತ್ತಿದೆ.
– ಎಲ್‌.ಕೆ. ಅತೀಕ್‌, ಗ್ರಾ. ಮತ್ತು ಪಂ. ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ

Advertisement

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next