Advertisement

ಆರೋಗ್ಯಕ್ಕೆ ಇಂಬು ನೀಡುವ ತಂಬುಳಿ

07:20 AM May 11, 2018 | |

ಪ್ರಕೃತಿಯ ಕೊಡುಗೆಯಾದ ವಿವಿಧ ಚಿಗುರುಗಳು, ಹೂವುಗಳು ಇತ್ಯಾದಿಗಳಿಗೆ ಮಜ್ಜಿಗೆ ಸೇರಿಸಿ ತಯಾರಿಸುವ ತಂಬುಳಿಗಳು ಒಗರು ರುಚಿಯನ್ನು ಹೊಂದಿದ್ದು ಆರೋಗ್ಯಕ್ಕೆ ಪೂರಕವಾದ ಹಲವಾರು ಉತ್ತಮ ಅಂಶಗಳನ್ನೊಳಗೊಂಡಿದೆ. ಇವುಗಳ ಸೇವನೆಯಿಂದ ಬಿಸಿಲ ಬೇಗೆಗೆ ದೇಹ ತಂಪಾಗುವುದರ ಜೊತೆಗೆ ಜೀರ್ಣಶಕ್ತಿಯೂ ವೃದ್ಧಿಸುವುದು. ಇಲ್ಲಿವೆ ಕೆಲವು ವೈವಿಧ್ಯಮಯ ತಂಬುಳಿಗಳು.

Advertisement

ಕೇಪುಳ ಕಿಸ್ಕಾರ ಹೂವಿನ ತಂಬುಳಿ 
ಬೇಕಾಗುವ ಸಾಮಗ್ರಿ: ಕೆಂಪು ಕೇಪುಳ ಹೂವುಗಳು- ಅರ್ಧ ಕಪ್‌, ತೆಂಗಿನ ತುರಿ- ಅರ್ಧ ಕಪ್‌, ಸಿಹಿ ಮಜ್ಜಿಗೆ- ಒಂದು ಕಪ್‌, ಕೆಂಪು ಮೆಣಸು- ಒಂದು, ಜೀರಿಗೆ- ಅರ್ಧ ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಕೇಪುಳ ಹೂವಿನ ಮಧ್ಯದ ಪರಾಗ ಕುಸುಮವನ್ನು ತೆಗೆದು ಎರಡು ಚಮಚ ತುಪ್ಪದಲ್ಲಿ ಬಾಡಿಸಿಕೊಳ್ಳಿ. ಮಿಕ್ಸಿಜಾರಿಗೆ ತೆಂಗಿನ ತುರಿ, ಜೀರಿಗೆ, ಕೇಪುಳ ಹೂವು, ಉಪ್ಪು, ಮೆಣಸು, ಸ್ವಲ್ಪ$ಮಜ್ಜಿಗೆ ಇವುಗಳನ್ನು ಹಾಕಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿಕೊಂಡು ತಂಬುಳಿಯ ಹದ ಮಾಡಿಕೊಳ್ಳಿ. ಅನ್ನದ ಜೊತೆ ಸವಿಯಲು ತಯಾರಾದ ಈ ತಂಬುಳಿ ತಂಪು ಗುಣವನ್ನು ಹೊಂದಿದ್ದು ಇದರ ಸೇವನೆ ಬೇಸಿಗೆಯಲ್ಲಿ ಉಷ್ಣದಿಂದ ಉಂಟಾಗುವ ಬಾಯಿಹುಣ್ಣಿಗೆ ಹಾಗೂ ರಕ್ತಶುದ್ಧಿಗೆ ಬಹಳ ಉಪಯುಕ್ತ.

ಎಲಾವರೆ ತಂಬುಳಿ 
ಬೇಕಾಗುವ ಸಾಮಗ್ರಿ:
ಎಲಾವರೆ ಸೊಪ್ಪು- ಅರ್ಧ ಕಪ್‌, ತೆಂಗಿನ ತುರಿ- ಮುಕ್ಕಾಲು ಕಪ್‌, ಮಜ್ಜಿಗೆ- ಒಂದು ಕಪ್‌, ಹಸಿಮೆಣಸು- ಒಂದು, ಶುಂಠಿ- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ತೆಂಗಿನ ತುರಿಯ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಸ್ವಲ್ಪ$ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದನ್ನು ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಇದಕ್ಕೆ ಉಳಿದ ಮಜ್ಜಿಗೆ ಹಾಗೂ ನೀರು ಸೇರಿಸಿಕೊಂಡು ಹದ ಮಾಡಿಕೊಳ್ಳಿ. ಇದಕ್ಕೆ ಇಂಗು ಹಾಗೂ ಉದ್ದಿನಬೇಳೆ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ಈಗ ತಯಾರಾದ ಈ ತಂಬುಳಿಯ ಸೇವನೆ ಬಿಸಿಲಿನ ಉಷ್ಣದಿಂದ ಉಂಟಾಗುವ  ಹೊಟ್ಟೆನೋವು, ಬಾಯಿಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಉತ್ತಮ ಪರಿಹಾರ.

Advertisement

ಗೇರು ಮರದ ಚಿಗುರಿನ ತಂಬುಳಿ 
ಬೇಕಾಗುವ ಸಾಮಗ್ರಿ:
ಗೇರುಮರದ ಚಿಗುರೆಲೆಗಳು- ಎಂಟು, ತೆಂಗಿನ ತುರಿ- ಅರ್ಧ ಕಪ್‌, ಮಜ್ಜಿಗೆ- ಒಂದು ಕಪ್‌, ಕೆಂಪು ಮೆಣಸು- ಒಂದು, ಜೀರಿಗೆ- ಕಾಲು ಚಮಚ, ಉಪ್ಪು$ರುಚಿಗೆ.

ತಯಾರಿಸುವ ವಿಧಾನ: ಚಿಗುರೆಲೆಗಳನ್ನು ಬೇಯಿಸಿ. ಆರಿದ ನಂತರ ಇದಕ್ಕೆ ತೆಂಗಿನ ತುರಿ ಹಾಗೂ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳು ಹಾಗೂ ಸ್ವಲ್ಪಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ಮಜ್ಜಿಗೆ ಸೇರಿಸಿ ಹದ ಮಾಡಿಕೊಂಡು ಘಮ್‌ ಎನ್ನುವ ಸಾಸಿವೆ ಒಗ್ಗರಣೆ ನೀಡಿ. ಬಹಳ ರುಚಿಯಾದ ಈ ತಂಬುಳಿಯ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಸುವುದು.

ನುಗ್ಗೆ ಹೂವಿನ ತಂಬುಳಿ 
ಬೇಕಾಗುವ ಸಾಮಗ್ರಿ:
ನುಗ್ಗೆ ಹೂವು- ಅರ್ಧ ಕಪ್‌, ಕಾಳುಮೆಣಸು- ಆರು, ತೆಂಗಿನ ತುರಿ- ಅರ್ಧ ಕಪ್‌, ಜೀರಿಗೆ- ಕಾಲು ಚಮಚ, ಮಜ್ಜಿಗೆ- ಒಂದು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ತುಪ್ಪಹಾಕಿ ನುಗ್ಗೆ ಹೂವನ್ನು ಬಾಡಿಸಿಕೊಳ್ಳಿ. ಆರಿದ ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಜ್ಜಿಗೆ ಜೊತೆ ನುಣ್ಣಗೆ ರುಬ್ಬಿ. ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಹದಮಾಡಿಕೊಂಡು ಇದಕ್ಕೆ ತುಪ್ಪದಲ್ಲಿ ಇಂಗಿನ ಒಗ್ಗರಣೆ ಸಿಡಿಸಿದರೆ ತಂಬುಳಿ ಸವಿಯಲು ಸಿದ್ಧ. ಕಬ್ಬಿಣಾಂಶ ಪೂರಿತವಾದ ಈ ತಂಬುಳಿ ಆರೊಗ್ಯಕ್ಕೆ ಬಹಳ ಉತ್ತಮ.

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next