Advertisement

ಕಟಪಾಡಿ: ಮೂಕ ಪ್ರಾಣಿಗಳ ಹಸಿವು ನೀಗಿಸುವ ಮೂಲಕ ಮಾನವೀಯತೆ

04:52 PM Apr 22, 2020 | sudhir |

ಕಟಪಾಡಿ: ಸುಭಾಸ್‌ನಗರದ ಟೀಂ ಓಂಕಾರ್‌ ನಾಸಿಕ್‌ ಫ್ರೆಂಡ್ಸ್‌ ಹಸಿದ ಶ್ವಾನಗಳು, ಪಕ್ಷಿಗಳಿಗೆ ಕೋಳಿ ಪದಾರ್ಥ ಬೆರೆಸಿದ ಅನ್ನದ ಊಟ, ಪೆಡಿಗ್ರಿ, ಕುಡಿಯುವ ನೀರನ್ನು ನಿತ್ಯ ಉಣಬಡಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

Advertisement

ಶ್ವಾನಪ್ರಿಯರಾದ ಈ ತಂಡವು ಮೂಡಬೆಟ್ಟು, ಪಾಂಗಾಳ, ಕಲ್ಲಾಪು, ಕಟಪಾಡಿ, ಕೋಟೆ, ಮಟ್ಟು, ಅಗ್ರಹಾರ, ಮಣಿಪುರ, ದೆಂದೂರುಕಟ್ಟೆ, ಅಲೆವೂರು, ಕುರ್ಕಾಲು, ಸುಭಾಸ್‌ನಗರ, ಶಂಕರಪುರ, ಅರಸಿಕಟ್ಟೆ, ಬಂಟಕಲ್ಲು , ಸರಕಾರಿಗುಡ್ಡೆ ವ್ಯಾಪ್ತಿಯಲ್ಲಿ ತಮ್ಮ ಎರಡು ದ್ವಿಚಕ್ರ ವಾಹನಗಳ ಮೂಲಕ ಪಯಣಿಸಿ ಕಳೆದ ಸುಮಾರು 12 ದಿನಗಳಿಂದ ಹಸಿದ ಶ್ವಾನ -ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತಿದೆ ಎಂದು ಉದಯವಾಣಿಗೆ ಮಾಹಿತಿಯನ್ನು ನೀಡುವ ಈ ತಂಡವು ಮೂಕ ಪ್ರಾಣಿ ಗಳ ಒಡನಾಡಿಗಳಾಗಿ ಮಾನವೀಯ ನೆಲೆಯಲ್ಲಿ ತಮ್ಮ ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ದಿನನಿತ್ಯ ಸುಮಾರು 90ಕ್ಕೂ ಅಧಿಕ ನಾಯಿಗಳು, ಪಕ್ಷಿಗಳಿಗೆ ಮೂಡಬೆಟ್ಟುವಿನ ರೇಣುಕಾ ಮತ್ತು ಪುತ್ರಿ ಹರ್ಷಿತಾ ಅವರು ತಮ್ಮ ಮನೆಯಲ್ಲಿ 4 ಸೇರು ಅಕ್ಕಿ ಬಳಸಿ ಸಿದ್ಧಪಡಿಸಿದ ಅನ್ನ ಹಾಗೂ ಕೋಳಿ ಪದಾರ್ಥವನ್ನು ಬೇಯಿಸಿ ಈ ಯುವಕರ ತಂಡಕ್ಕೆ ನೀಡಿ ಬೆಂಬಲವನ್ನು ನೀಡುತ್ತಿದ್ದಾರೆ. ದಾನಿಗಳ ಸಹಕಾರದಿಂದ ಈ ಸೇವೆಯನ್ನು ನಡೆಸುತ್ತಿದ್ದಾರೆ. ತಂಡದಲ್ಲಿ ನಿತೇಶ್‌, ಕಾರ್ತಿಕ್‌, ಸುಜಿತ್‌, ಅಕ್ಷಿತ್‌, ಪ್ರಜ್ವಲ್‌, ವಿಜಯ್‌, ವಿನಯ್‌ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next