ಮಕ್ಕಳ ದಿನಾಚರಣೆಯನ್ನು ಶಾಲೆಗಳಲ್ಲಿ ಆಚರಿಸುವುದು ಗೊತ್ತೇ ಇದೆ. ಸಿಹಿ ಹಂಚಿ, ಮಕ್ಕಳಿಗಾಗಿ ಚಟುವಟಿಕೆಗಳನ್ನು ನಡೆಸಿ, ಗೆದ್ದವರಿಗೆ ಬಹುಮಾನ ನೀಡುವುದು ಸರ್ವೇಸಾಮಾನ್ಯ. ಆದರೆ, ಈ ಬಾರಿ ಹೈಪರ್‌ಸಿಟಿ ರಿಟೇಲ್ ಇಂಡಿಯಾದವರು ವಿಶೇಷ ರೀತಿಯಲ್ಲಿ ಮಕ್ಕಳ ದಿನ ಆಚರಿಸುತ್ತಿದ್ದಾರೆ.
“ಫುಡ್ ಫಿಯೆಸ್ಟಾ’ ಎಂಬ ಆಕರ್ಷಣೀಯ ಇವೆಂಟ್ ಅನ್ನು ಆಯೋಜಿಸಿದ್ದು, ಮಕ್ಕಳಿಗಾಗಿ ಅಡುಗೆ ಕಾರ್ಯಾಗಾರ ನಡೆಸುತ್ತಿದ್ದಾರೆ. ಅದರಲ್ಲಿ ಮಕ್ಕಳಿಗೆ ಕೇಕ್ ತಯಾರಿಸುವುದು ಹೇಗೆ ಎಂದು ತಿಳಿಸಿಕೊಡುತ್ತಾರೆ. ಪೋಷಕರು ಹೈಪರ್‌ಸಿಟಿಯ ಕೇಕ್ ಮೇಕಿಂಗ್ ವರ್ಕ್‌ಶಾಪ್‌ಗೆ ತಮ್ಮ ಮಗುವನ್ನು ಸೈನ್ ಅಪ್ ಮಾಡಿದರೆ ಸಾಕು.
ಇದೇ ವೇಳೆ ಡೋನಟ್ ಈಟಿಂಗ್ ಕಾಂಟೆಸ್ಟ್, ಸ್ನ್ಯಾಕ್ ಈಟಿಂಗ್ ಮ್ಯಾರಥಾನ್‌ನಂಥ ಹಲವು ಫುಡ್ ಗೇಮ್‌ಗಳು ನಡೆಯಲಿವೆ. ಹಾಗೆಯೇ ಹೈಪರ್‌ಸಿಟಿ ಸ್ಟೋರ್‌ಗಳಲ್ಲಿ ಲೈವ್ ಕುಕಿಂಗ್ ಡೆಮೋ ಕೂಡ ಆಯೋಜನೆಯಾಗಿದೆ.
ಎಲ್ಲಿ?: ಹೈಪರ್ ಸಿಟಿ ರಿಟೇಲ್ ಇಂಡಿಯಾ ಸ್ಟೋರ್ ರಾಯಲ್ ಮೀನಾಕ್ಷಿ ಮಾಲ್ ಮತ್ತು ಎಂಬಸಿ ಪ್ಯಾರಗಾನ್ ಕಂದಲಹಳ್ಳಿ ಗೇಟ್
ಯಾವಾಗ?: ನವೆಂಬರ್ 11 ಮತ್ತು 12, ಸಂಜೆ 5-7
ಹೆಚ್ಚಿನ ಮಾಹಿತಿಗೆ: ಮಂಜುನಾಥ್- 7259579122, ರವಣನ್ – 77952 13926