Advertisement

ಜಿನಿವಾ: ಹಸಿವಿನ ಸಮಸ್ಯೆ ದುಪ್ಪಟ್ಟು

03:53 PM Apr 23, 2020 | sudhir |

ಜಿನಿವಾ: ಮುಂಬರುವ ಕೋವಿಡ್‌-19 ಬಿಕ್ಕಟ್ಟಿನಿಂದ ಎದುರಾಗುವ ಸಮಸ್ಯೆಗಳ ಮಹಾಪೂರವನ್ನು ಮತ್ತು ಅದರ ಪರಿಣಾಮವನ್ನು ವಿಶ್ವಸಂಸ್ಥೆ ಒಂದೊಂದಾಗಿ ಬಿಚ್ಚಿಡುತ್ತಿದೆ. ಈಗಾಗಲೇ ಸೋಂಕು ಸೆಪ್ಟಂಬರ್‌ವರೆಗೂ ತನ್ನ ಕರಾಳ ಛಾಯೆ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಮುಂದಿನ ಐದು ತಿಂಗಳು ಒಂದಲ್ಲ ಒಂದು ರೀತಿಯ ನಿರ್ಬಂಧ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ. ಪರಿಣಾಮ ಜಾಗತಿಕವಾಗಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿರಲಿದೆ ಎಂದಿರುವ ವಿಶ್ವಸಂಸ್ಥೆ ಇದೀಗ ಮತ್ತೂಂದು ಆಘಾತಕಾರಿ ವರದಿ ಬಿಡುಗಡೆ ಮಾಡಿದೆ.

Advertisement

ಕೋವಿಡ್‌-19ಗೂ ಬಿಕ್ಕಟ್ಟು ಪ್ರಾರಂಭವಾಗುವ ಮುನ್ನ ವಿಶ್ವದಲ್ಲಿ 13 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರು. ಆದರೆ ಇದೀಗ ಇದರ ಪ್ರಮಾಣ ದುಪ್ಪಟ್ಟಾಗಲಿದೆ. ಅಂದರೆ 26 ಕೋಟಿಗೂ ಅಧಿಕ ಜನರು ತುತ್ತು ಅನ್ನಕ್ಕೂ ಪರಿತಪಿಸಲಿದ್ದಾರೆ. ಅದರಲ್ಲೂ ಜನರಿಗೆ ಸಹಾಯ ಹಸ್ತ ಚಾಚಲಿಕ್ಕಾಗದ ಅಸಹಾಯಕ ಸರಕಾರಗಳಿರುವ ರಾಷ್ಟ್ರಗಳಲ್ಲಿ ಪರಿಸ್ಥಿತಿ ಇನ್ನೂ ವಿಷಮಿಸಲಿದೆ ಎನ್ನಲಾಗಿದೆ. ಹಸಿವನ್ನು ನೀಗಿಸಲು ತಮ್ಮಲ್ಲಿರುವ ಜೀವನಾಧಾರ ವಸ್ತುಗಳನ್ನು ಮಾರಲು ಮುಂದಾದರೆ ಮತ್ತೆ ಅದನ್ನು ಗಳಿಸಲು ವರ್ಷಗಳೇ ಬೇಕಾದೀತು. ಉದಾಹರಣೆಗೆ ರೈತನೊಬ್ಬ ಜಾನುವಾರುಗಳು, ಕೃಷಿ ಸಲಕರಣೆಗಳನ್ನು ಮಾರಿದರೆ ಮತ್ತೆ ಅವನ್ನು ಪಡೆಯಲಾಗುವುದಿಲ್ಲ. ಇದು ಆಹಾರ ಉತ್ಪಾದನೆ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.

ಆಹಾರ ಮತ್ತು ಜೀವನಾ ಶ್ಯಕ ವಸ್ತುಗಳ ತೀವ್ರ ಕೊರತೆಯು ವಿಶ್ವಸಂಸ್ಥೆ ಗುರುತಿಸಿರುವ ಐದು ಹಂತಗಳಲ್ಲಿ ಮೂರನೆಯದ್ದು. ಐದನೇ ಹಂತವು ಸಾಮೂಹಿಕ ಹಸಿವು ಎಂದು ಹೇಳಿದೆ. ಜಾಗತಿಕ ಹಸಿವಿನ ಸಮಸ್ಯೆ ನೀಗಿಸಲು ಸುಮಾರು 10 ರಿಂದ 12 ಶತಕೋಟಿ ರೂ. ಡಾಲರ್‌ಗಳ ಅಗತ್ಯವಿದೆ. ಕಳೆದ ಬಾರಿ ವಿಶ್ವ ಆಹಾರ ಯೋಜನೆಗಾಗಿ 8.3 ಬಿಲಿಯನ್‌ ಡಾಲರ್‌ಗಳ ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದೆ.

ಯಾವ ಯಾವ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಬಗ್ಗೆ ಭೌಗೋಳಿಕ ವಿಂಗಡನೆ ನೀಡ ದಿದ್ದರೂ, ಮುಖ್ಯವಾಗಿ ಆಫ್ರಿಕಾ ಖಂಡದ ಹಲವು ರಾಷ್ಟ್ರಗಳು ಭಾರಿ ಸಂಕಷ್ಟಕ್ಕೆ ಸಿಲುಕಲಿವೆ. ಮಿಡತೆಗಳ ದಾಳಿಯಿಂದಾಗಿ ಬೆಳೆಯನ್ನು ಕಳೆದುಕೊಂಡಿರುವ ಈ ರಾಷ್ಟ್ರಗಳಲ್ಲಿ ಮುಂಬರುವ ದಿನಗಳು ದುಸ್ತರವಾಗಿರಲಿವೆ. ಆದರೆ, ಭಾರತದ ದಿನಗೂಲಿ ಕಾರ್ಮಿಕರು, ನಿರಾಶ್ರಿತರು ಎಷ್ಟರಮಟ್ಟಿಗೆ ಪ್ರಭಾವಿತರಾಗಲಿದ್ದಾರೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next