Advertisement

Tupperware ಲಂಚ್‌ ಬಾಕ್ಸ್‌ ದಿವಾಳಿ: ಅಮೆರಿಕದ ಕಂಪೆನಿ ಘೋಷಣೆ

01:22 AM Sep 20, 2024 | |

ಹೊಸದಿಲ್ಲಿ: ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಶಾಲಾ ಮಕ್ಕಳ ಲಂಚ್‌ ಬಾಕ್ಸ್‌, ನೀರು ತೆಗೆದುಕೊಂಡು ಹೋಗಲು ಬಳಕೆಯಾಗುತ್ತಿದ್ದ ಟಪ್ಪರ್‌ ವೇರ್ ಪ್ಲಾಸ್ಟಿಕ್‌ ಪಾತ್ರೆಗಳ ಕಂಪೆನಿ ದಿವಾಳಿ ಎದ್ದಿರುವುದಾಗಿ ಘೋಷಿಸಿದೆ. ಈ ಬಗ್ಗೆ ಕಂಪೆನಿ ಆಡಳಿತ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. ಫ್ಲೋರಿಡಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪೆನಿ, ತನಗೆ ವಿತ್ತೀಯ ಸಂಕಷ್ಟ ಎದುರಾಗಿದೆ, ಪ್ಲಾಸ್ಟಿಕ್‌ ಉತ್ಪನ್ನಗಳಿಂದ ಜನರು ದೂರ­ವಾಗುತ್ತಿರುವುದೂ ತನ್ನ ಈ ಸ್ಥಿತಿಗೆ ಕಾರಣ ಎಂದು ಕಂಪೆನಿ ಟ್ವೀಟ್‌ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next