Advertisement

ಆಧುನಿಕ ಕೃಷಿ ಪದ್ಧತಿ ಅನುಸರಿಸಿ: ಡಾ|ರಾಜಕುಮಾರ

09:53 AM Jul 13, 2017 | |

ನಾರಾಯಣಪುರ: ನೀರಿನ ಮಿತ ಬಳಕೆಗೆ ಆದ್ಯತೆ ನೀಡಿ, ಆಧುನಿಕ ಕೃಷಿ ಪದ್ಧತಿ ಅನುಸರಿಸಬೇಕು ಎಂದು ಮಾಳನೂರು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ| ರಾಜಕುಮಾರ ಹೇಳಿದರು.

Advertisement

ಪಟ್ಟಣದ ಶ್ರೀ ಯಲ್ಲಾಲಿಂಗ ದೇವಸ್ಥಾನದ ಮಂಗಲ ಮಂಟಪದಲ್ಲಿ ಬುಧವಾರ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ 2017-18 ನೇ ಸಾಲಿನ ಕೃಷಿ ಅಭಿಯಾನ, ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೀರಿನ ಮಿತ ಬಳಕೆಗೆಂದು ಇರುವ ತುಂತುರು, ಹನಿ ನೀರಾವರಿ ಪದ್ಧತಿಗಳನ್ನು ಅನುಸರಿಸಿ ಭೂಮಿ ಸವಳು
ಜವಳು ಆಗುವುದನ್ನು ತಡೆಯಬೇಕು. ಇದಕ್ಕಾಗಿ ತಜ್ಞರ ಮಾರ್ಗದರ್ಶನದಲ್ಲಿ ಬಸಿಗಾಲುವೆ ನಿರ್ಮಿಸಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ರೈತನು ಜಮೀನಿನಲ್ಲಿನ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಭೂಮಿಯಲ್ಲಿ ಮಣ್ಣಿನ ಫಲವತ್ತತೆ ಅರಿತು ಮಿತವಾದ ರಸಾಯನಿಕಗಳನ್ನು ಬಳಕೆ ಮಾಡಿಕೊಂಡು ಕೃಷಿ ಮಾಡಬಹುದು, ಸಾವಯವ ಕೃಷಿಗೆ ಮಹತ್ವ ನೀಡಿ, ಭೂಮಿ ಫಲವತ್ತತೆಗೆ ನೈಸರ್ಗಿಕ ಎರೆಹುಳು ಹಾಗೂ ಹಸಿರೆಲೆ ಗೊಬ್ಬರವನ್ನು ಯಥೇಚ್ಚವಾಗಿ ಬಳಸಿ ಶ್ರಮವಹಿಸಿ ದುಡಿದರೆ ನಾನಾ ಮಾದರಿಯ ಬೆಳೆಗಳನ್ನು ಬೆಳೆಯಬಹುದು ಎಂದು ವಿವರಿಸಿದರು.  

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಮಾತನಾಡಿ, ಕೃಷಿ ಇಲಾಖೆ ಮಳೆಯಾಶ್ರಿತ ವಲಯದ ರೈತರ ಜೀವನ ಮಟ್ಟ ಉತ್ತಮಗೊಳಿಸಲು ಇಲಾಖೆ ವತಿಯಿಂದ ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ ಎನ್ನುವ ಘೋಷಣೆಯೊಂದಿಗೆ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ತಾಪಂ ಅಧ್ಯಕ್ಷೆ ಅನಸೂಬಾಯಿ ಚವ್ವಾಣ ಉದ್ಘಾಟಿಸಿದರು, ಗ್ರಾ.ಪಂ ಅಧ್ಯಕ್ಷ  ಧೀರಪ್ಪ ರಾಠೊಡ ಅಧ್ಯಕ್ಷತೆ ವಹಿಸಿದ್ದರು, 
ಉಪತಹಶೀಲ್ದಾರ ಮಹಾದೇವಪ್ಪಗೌಡ ಬಿರಾದಾರ, ಜಿ.ಪಂ. ಸದಸ್ಯ ಎನ್‌.ಡಿ. ನಾಯಕ, ಗ್ರಾಪಂ ತಾ.ಪಂ ಸದಸ್ಯ ಮೋಹನ
ಪಾಟೀಲ, ಬಾಲಾಜಿ ಚವ್ವಾಣ, ಶೇಖ ಅಹ್ಮದ, ಕೃಷಿ ಅಧಿಕಾರಿಗಳಾದ ಎಸ್‌.ಬಿ. ತೆಗ್ಗಿ, ಪಶುಸಂಗೋಪನಾ ಅಧಿ ಕಾರಿ ಡಾ|
ಮೆಹಬೂಬಸಾಬ ಖಾಜಿ, ತೋಟಗಾರಿಗೆ ಅಧಿಕಾರಿ ಶಿವಾನಂದ, ಬಸಮ್ಮ, ಎಸ್‌.ಬಿ.ಪಾಲ್ಕೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ,
ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಬಾಪೂಜಿ ಶಾಲೆ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು,
ಎಸ್‌.ಆರ್‌.ಚಳಗೇರಿ ಸ್ವಾಗತಿಸಿದರು, ಆರ್‌.ಎಸ್‌. ಸರ್ಜಾಪುರ ನಿರೂಪಿಸಿದರು. ಕೃಷಿ ಅಧಿ ಕಾರಿ ಚನ್ನಪ್ಪಗೌಡ ಗೌಡರ
ವಂದಿಸಿದರು.

Advertisement

ವಿವಿಧ ಇಲಾಖೆಗಳಿಂದ ಕೃಷಿಯಂತ್ರಗಳ ಪ್ರದರ್ಶನ: ಇಲಾಖೆಯ ನಡೆ ರೈತರ ಮನೆ ಕಡೆ ಕಾರ್ಯಕ್ರಮದಡಿ ರೈತರ ಕೃಷಿಗೆ ಉಪಯೋಗವಾಗುವ ವಿವಿಧ ಯಂತ್ರಗಳ  ಪ್ರದರ್ಶನ ಹಾಗೂ ವಸ್ತು ಪ್ರದರ್ಶನ ವಿಶೇಷ ಗಮನ ಸೆಳೆಯಿತು. ನಾರಾಯಣಪುರಕ್ಕೂ ರೈತ ಸಂಪರ್ಕ ಕೇಂದ್ರ ನೀಡಿ ನಾರಾಯಣಪುರ ಸುತ್ತಮುತ್ತ ಅನೇಕ ಹಳ್ಳಿಗಳಿವೆ. ಇಲ್ಲಿಯೇ ರೈತ ಸಂಪರ್ಕ ಕೇಂದ್ರವಾದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿ ದೊರೆಯುತ್ತದೆ. ಈ
ನಿಟ್ಟಿನಲ್ಲಿ ಕೃಷಿ ಅಧಿ ಕಾರಿಗಳು ಯೋಚಿಸಬೇಕು.
ಸೋಮನಗೌಡ, ರೈತ ಸಂಘದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next