Advertisement
ಕಾರವಾರದಲ್ಲಿ ಉಚಿತ ಬಸ್ ಪ್ರಯಾಣದ ಯೋಜನೆ ಶಕ್ತಿಗೆ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು.ಕದ್ರಾ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಹನುಮವ್ವ ಹಾಗೂ ಸದಸ್ಯೆ ಅಶ್ವಿನಿ ಪೆಡ್ನೆಕರ್ ಗೆ ಮೊದಲ ಉಚಿತ ಬಸ್ ಟಿಕೆಟ್ ನೀಡುವ ಮೂಲಕ ಶಕ್ತಿ ಯೋಜನೆ ಉದ್ಘಾಟಿಸಲಾಯಿತು. ಮಹಿಳೆಯರು ಮತ್ತು ವಿದ್ಯಾರ್ಥಿಗಳ ಜೊತೆ ಸೌಜನ್ಯದಿಂದ ವರ್ತಿಸಿ, ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ. ಉಚಿತ ಬಸ್ ಪ್ರಯಾಣ ವ್ಯವಸ್ಥೆ ಯಿಂದ ಕೆಎಸ್ ಆರ್ ಟಿಸಿ ಮತ್ತಷ್ಟು ಸದೃಢವಾಗಲಿದೆ. ಈ ಸಂಸ್ಥೆಯನ್ನು ಬಲಗೊಳಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಸರ್ಕಾರ ಮಾಡಲಿದೆ.
ಬಡವರಿಗೆ ಮಾತು ಕೊಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. ಉಳಿದ ನಾಲ್ಕು ಗ್ಯಾರಂಟಿಗಳನ್ನು ಅನುಷ್ಟಾನ ಮಾಡುತ್ತೇವೆ. ಕಾದು ನೋಡಿ ಎಂದರು. ಸರ್ಕಾರದ ಬಳಿ ಒಳ್ಳೆಯ ಆಲೋಚನೆ ಇದೆ. ಸರ್ಕಾರ ಜನರಿಗೆ ಸಹಾಯ ಮಾಡಬೇಕು. ಹಿಂದೆ ಏನಾಗಿತ್ತು ನಾನು ಕೆದಕುವುದಿಲ್ಲ. ಬಸ್ ಗಳ ಕೊರತೆ, ಸಿಬ್ಬಂದಿ ಕೊರತೆ, ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದಿರುವುದಕ್ಕೆ ಬಿಜೆಪಿ ಸರ್ಕಾರ ಕಾರಣ. ಇದಕ್ಕಿಂತ ಹೆಚ್ಚಿಗೆ ಹೇಳಲಾರೆ .ನಿಮಗೆ ಎಲ್ಲಾ ಗೊತ್ತಿದೆ .ಈಗ ನಾವು ಹೊಸ ಬಸ್ ಖರೀದಿಸುತ್ತೇವೆ. ತಕ್ಷಣ ಸಿಬ್ಬಂದಿ ಕೊರತೆ ನೀಗಲು ಹೊರ ಗುತ್ತಿಗೆ ಆಧಾರದಲ್ಲಿ 120 ಜನ ಚಾಲಕರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ತೇವೆ ಎಂದರು. ಈಗಾಗಲೇ ಈ ಸಂಬಂಧ ಪ್ರಕ್ರಿಯೆ ಆರಂಭವಾಗಿವೆ. ಕೆಲ ಮಜಿರೆಗಳಿಗೆ ಬಸ್ ಹೊಗಲು ರಸ್ತೆ, ಸೇತುವೆ ನಿರ್ಮಾಣದ ಅವಶ್ಯಕತೆ ಇದೆ. ಯಾವ ರೂಟ್ ಗಳಲ್ಲಿ ಬಸ್ ಸಂಚಾರ ಇತ್ತೋ ಅದನ್ನು ಮೊದಲು ಉಳಿಸಿಕೊಳ್ಳಬೇಕಿದೆ. ಹಂತ ಹಂತವಾಗಿ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸೈಲ್ ಮಾತನಾಡಿ ಸಿದ್ದರಾಮಯ್ಯ 15 ನೇ ಬಜೆಟ್ ಮಂಡಿಸುತ್ತಿದ್ದಾರೆ. ಅವರ ದೂರ ದೃಷ್ಟಿ ಆಡಳಿತದಿಂದ ಅನೇಕ ಕೆಲಸ ಆಗಲಿವೆ. ಕಾರವಾರ ಕಾರಗೃಹ ಸ್ಥಳಾಂತರಿಸಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಸೈನಿಕ ಬೋರ್ಡ್ ಕಚೇರಿ ಜಾಗ, ಸ್ವಲ್ಪ ಮಟ್ಟಿಗೆ ಪಾಲಿಟೆಕ್ನಿಕ್ ಕಾಲೇಜು ಜಾಗ ಬಳಸಿ ಕೊಂಡು ಟ್ರಾಮಾ ಕೇರ್ ಸೆಂಟರ್ ಹೆಚ್ಚುವರಿ150 ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಯತ್ನಿಸಲಾಗುವುದು ಎಂದರು. ಕೆರವಡಿ, ಗಂಗಾವಳಿ ಸೇತುವೆ ಕೆಲಸವನ್ನು ಸದ್ಯದಲ್ಲಿ ಪೂರ್ಣ ಮಾಡಲಿದ್ದೇವೆ ಎಂದರು.
Related Articles
Advertisement