Advertisement

ಕೋವಿಡ್ ನಿಯಂತ್ರಣಕ್ಕೆ SMS ಕ್ರಮ ಅನುಸರಿಸಿ : ಸುರೇಶ್ ಕುಮಾರ್

06:25 PM Apr 17, 2021 | Girisha |

ಚಿಕ್ಕಮಗಳೂರು : 1 ರಿಂದ 9 ನೇ ತರಗತಿ ಪರೀಕ್ಷೆ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ, ಸಂಬಂಧಪಟ್ಟವರನ್ನು ಕರೆದು ಚರ್ಚಿಸಿದ್ದೇವೆ. ಪರೀಕ್ಷೆ ಬಗ್ಗೆ ಅವರೆಲ್ಲರ ಅಭಿಪ್ರಾಯವನ್ನು ಸ್ವೀಕರಿಸಿದ್ದೇವೆ, ಇನ್ನೇರಡು ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಂಡು ತೀರ್ಮಾನ ಪ್ರಕಟಿಸಲಿದ್ದೇವೆ ಎಂದರು.

Advertisement

ಕಾಫಿನಾಡಿಗೆ ಭೇಟಿ ಕೊಟ್ಟಿರುವ ಸುರೇಶ್ ಕುಮಾರ್, ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ 10 ನೇ ತರಗತಿ ಮಕ್ಕಳಿಗೆ ಪ್ರಶ್ನಾಕೋಟಿಯನ್ನು ಬಿಡುಗಡೆ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರಶ್ನಾಕೋಟಿ ಬಿಡುಗಡೆ ಮಾಡಲಾಗಿದೆ.

ಇದೇ ವೇಳೆ ಕೋವಿಡ್ ಮುಂಜಾಗ್ರತೆ ಬಗ್ಗೆ ಮಾತನಾಡಿರುವ ಅವರು, SMS ಕ್ರಮವನ್ನು ಸಾರ್ವಜನಿಕರು ಅನುಸರಿಸಿದ್ರೆ ಲಾಕ್ಡೌನ್ ಅವಶ್ಯಕತೆ ಇಲ್ಲ, S ಸ್ಯಾನಿಟೇಷನ್, M ಮಾಸ್ಕ್, S ಸೋಶಿಯಲ್ ಡಿಸ್ಟೆನ್ಸ್ ಅನುಸರಿಸಿ. ನಮಗೆ ಕೋವಿಡ್ ಬರೋದಿಲ್ಲ ಅಂತ ಜನರು ಓಡಾಡುತ್ತಿದ್ದಾರೆ. ಯಾವುದೋ ಒಂದು ಸಾವು ನಮಗೆ ಸಂಖ್ಯೆ ಆಗಬಾರದು ಆ ಮನೆಯ ದುಃಖ ನಮಗೆ ಅರ್ಥವಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next