ಹೊಸಪೇಟೆ: ಸುರಕ್ಷತಾ ಕ್ರಮ ಕೈಗೊಳ್ಳದೇ ಕಲ್ಲು ಗಾಣಿಕಾರಿಕೆ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗವುದು ಎಂದು ಜಿಲ್ಲಾಧಿಕಾರಿ ಪವನ್ ಕುಮಾರ ಮಾಲಪಾಟಿ ಹೇಳಿದರು.
ನಗರದ ವೆಂಕಟೇಶ್ ಕಲ್ಯಾಣ ಮಂಟದಲ್ಲಿ ಸೋಮವಾರ ಕಲ್ಲು ಗಣಿಗಾರಿಕೆ ಸುರಕ್ಷತೆ ಮತ್ತು ಸ್ಫೋಟಕ ಬಳಿಕೆ ಗಣಿಗಾರಿಕೆ ತಡೆ ಜಾಗೃತಿ ಕುರಿತುಮಾತನಾಡಿ, ಕಲ್ಲು ಗಣಿಗಾರಿಕೆಗಾರಿಕೆಯಲ್ಲಿ ಅಗತ್ಯಮುನ್ನಚ್ಚರಿಕೆ ಕ್ರಮ ಕೈಗೊಳ್ಳದೇ ಮತ್ತು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮಾಡುವಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ನ್ಪೋಟಕ ವಸ್ತುಗಳನ್ನುಬಳಸುವ ಮುನ್ನ ಇಲಾಖೆಯ ಪರವಾನಿಗೆಪಡೆದುಕೊಳ್ಳಬೇಕು. ಕಲ್ಲು ಕ್ವಾರಿಯಲ್ಲಿ ಸ್ಫೋಟಮಾಡುವುದಕ್ಕಿಂತ ಅರ್ಧಗಂಟೆ ಮುಂಚಿತವಾಗಿ ಜನ-ಜಾನುವಾರು ಬರದಂತೆ ನಿರ್ಜನ ಪ್ರದೇಶವನ್ನಾಗಿ ಮಾಡಬೇಕು. ಕ್ವಾರಿಗಳಲ್ಲಿಅಗತ್ಯಕ್ಕಿಂತ ಹೆಚ್ಚು ಸ್ಪೂಟಕ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಗಣಿ ಕಾರ್ಮಿಕರಿಗೆಕಡ್ಡಾಯವಾಗಿ ಶೂ, ಹ್ಯಾಂಡ್‌ಬ್ಲೌಸ್, ಹೆಲ್ಮಟ್ ಅಗತ್ಯ ಸುರಕ್ಷತೆ ವ್ಯವಸ್ಥೆ ಕಲ್ಪಿಸಿ, ನಿಯಮ ಪಾಲನೆ ಮಾಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತನಾಡಿ, ಸಣ್ಣಪುಟ್ಟ ಗಣಿ ಕಲ್ಲು ಕ್ವಾರಿಗಳ ಮಾಲೀಕರು ಸರಿಯಾಗಿನಿಯಮಾವಳಿ ಪಾಲನೆ ಮಾಡುವುದು ಕಡಿಮೆ. ದೊಡ್ಡ ಕಂಪನಿಗಳು ನಿಯಾಮಗಳನ್ನು ಪಾಲನೆಮಾಡುತ್ತಾರೆ. ಪ್ರತಿಯೊಬ್ಬ ಗಣಿ ಮಾಲೀಕರುನಿಯಮ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಮಹಾವೀರ ಕೆ.ಎ, ಕರ್ನಾಟಕ ವಲಯದ ಗಣಿ ಸುರಕ್ಷತಾ ಸಂಘದ ಮಧುಸೂದನಕೆ, ಡೈರೆಕ್ಟರ್ ಆಫ್ ಮೈನ್ಸ್ ಸೇಫ್ಟಿಯ ಉಮೇಶ್‌ಸಾವರ್ಕರ್ ಹಾಗೂ ಗಣಿ ಮತ್ತು ಕಲ್ಲು ಕ್ವಾರಿಗಳ ಮಾಲೀಕರು ಹಾಗೂ ಅಧಿಕಾರಿಗಳು ಇದ್ದರು.