Advertisement
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದರು.
Related Articles
Advertisement
ಆಕ್ಷೇಪಣೆಗಳಿಗೆ ಮುಕ್ತ ಅವಕಾಶಪರಿಶೀಲನೆಯ ಸಭೆಯ ನಂತರ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ತಮ್ಮ ಆಕ್ಷೇಪಣೆಗಳು, ಅಹವಾಲುಗಳು ಹಾಗೂ ಸಮಸ್ಯೆಗಳು ಏನಾದರೂ ಇದ್ದಲ್ಲಿ ಮುಕ್ತವಾಗಿ ಸಭೆ ಗಮನಕ್ಕೆ ತರಲು ಅವಕಾಶ ನೀಡಿದರು. ಜತೆಗೆ ಮುಂದಿನ ದಿನಗಳಲ್ಲೂ ಆಕ್ಷೇಪಣೆಗಳನ್ನು ನಮ್ಮ ಗಮನಕ್ಕೆ ನೇರವಾಗಿ ಸಲ್ಲಿಸಬಹುದು ಎಂದರು. ಪ್ರತಿಕ್ರಿಯಿಸಿದ ಪ್ರತಿನಿಧಿಗಳು ಮತ
ದಾರರ ಪಟ್ಟಿ ಪರಿಷ್ಕರಣೆ ತಿದ್ದುಪಡಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ಬೆರಳೆಣಿಕೆಯ ಅಧಿಕಾರಿಗಳು ಮರಣ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡುತ್ತಿದ್ದಾರೆ. ಅಂತಹವರಿಗೆ ಪತ್ರ ಲಭ್ಯವಿಲ್ಲದಿದ್ದಲ್ಲಿ ಮಹಜರ್ ಮಾಡಿ ಹೆಸರು ಕೈಬಿಡಲು ಸೂಚಿಸಬೇಕು ಎಂದು ಮನವಿ ಮಾಡಿದರು. ಶೇ.82.32 ಆಧಾರ್ ಜತೆಗೆ ಜೋಡಣೆ
ಕರಡು ಮತದಾರರ ಪಟ್ಟಿ ಅನ್ವಯ ಡಿ. 7ವರೆಗೆ ಜಿಲ್ಲೆಯಲ್ಲಿ ಸುಮಾರು 14,01,492 ಜನಸಂಖ್ಯೆಯಿದ್ದು, 10,13,760 ಮತದಾರರಿದ್ದಾರೆ. ಈ ಪೈಕಿ 6 ಪುರುಷರು, 5,10,437 ಮಹಿಳಾ ಮತದಾರರಿದ್ದಾರೆ. ಡಿ. 7ರವರೆಗೆ ನಮೂನೆ- 6ರಡಿ 18903 ಅರ್ಜಿಗಳು, ನಮೂನೆ- 7ರಡಿ 8614 ಅರ್ಜಿಗಳು, ನಮೂನೆ- 8ರಡಿ 17462, ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆ ಶೇ.82.32 ಮತದಾರರ ವಿವರವನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗಿದ್ದು, ಬಾಕಿ ಮತದಾರರ ವಿವರವನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.