ಧಾರವಾಡ: ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಆರೋಗ್ಯ ಇಲಾಖೆ ಪ್ರತ್ಯೇಕವಾದ ಕೋವಿಡ್-19 ಮಾರ್ಗ ಸೂಚಿಗಳನ್ನು (ಎಸ್‌ಒಪಿ)ನೀಡಿದ್ದು, ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಪಾಲಿಸಬೇಕು. ಅದರನ್ವಯ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಜಿಲ್ಲಾ ಹೆಲ್ತ್ ನೋಡಲ್ ಅಧಿಕಾರಿಯಾಗಿ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳನ್ನು ಸೆಕ್ಟರ್ ಹೆಲ್ತ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಚುನಾವಣಾ ದಿನಗಳಂದು ಕರ್ತವ್ಯ ನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿಗೆಹಮ್ಮಿಕೊಂಡಿದ್ದ ಕೋವಿಡ್-19 ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಮತಗಟ್ಟೆಗೆ ಚುನಾವಣಾ ಸಿಬ್ಬಂದಿಗಳೊಂದಿಗೆ ಓರ್ವ ವೈದ್ಯ, ಆಶಾ ಹಾಗೂ ಎಎನ್‌ಎಂ ಕಾರ್ಯರ್ತರನ್ನು ನೇಮಿಸಿ ಆದೇಶಿಸಲಾಗಿದೆ. ನೇಮಕಗೊಂಡ ಸಿಬ್ಬಂದಿ ಸೆಕ್ಟರ್ ಅಧಿಕಾರಿಗಳೊಂದಿಗೆ ನೇಮಿಸಿದ ಸ್ಥಳಗಳಲ್ಲಿ ಅ.27-28 ರಂದು ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪ್ರತಿ ಮತಗಟ್ಟೆಯಲ್ಲಿ ಸುಸಜ್ಜಿತ ಕೋಣೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯಸೌಕರ್ಯ ಸುಸ್ಥಿತಿಯಲ್ಲಿ ಇರುವುದನ್ನುಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಮತಗಟ್ಟೆ ಹತ್ತಿರ ಕೋವಿಡ್ ಲಕ್ಷಣ ಇರುವವರ ವಿಶ್ರಾಂತಿ, ತಕ್ಷಣ ಆರೈಕೆಗಾಗಿ ಪ್ರತ್ಯೇಕ ಐಸೋಲೇಶನ್ ರೂಮ್ ವ್ಯವಸ್ಥೆ ಮಾಡಿರಬೇಕೆಂದು ಸೂಚಿಸಿದರು.
ಪ್ರತಿ ಮತಗಟ್ಟೆಗೆ ಅಗತ್ಯವಿರುವಷ್ಟು ಸ್ಯಾನಿಟೈಸರ್, ಸಿಬ್ಬಂದಿಗೆ ಮಾಸ್ಕ್,ಹ್ಯಾಂಡ್‌ಗ್ಲೌಸ್, ಪಲ್ಸ್ ಆಕ್ಷಿಮೀಟರ್, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಮತ್ತು ಹ್ಯಾಂಡ್ ವಾಶರ್‌ಗಳನ್ನು ನೀಡಲಾಗುತ್ತದೆ. ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೆ ಪಲ್ಸ್ ಆಕ್ಷಿ ಮೀಟರ್ ಹಾಗೂ ಐ.ಆರ್.ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆ ಮಾಡಬೇಕು. ಮತದಾರರು ಮತದಾನಕ್ಕೆ ಹೋಗುವಾಗಮತ್ತು ಮತದಾನ ಮಾಡಿ ಬಂದಮೇಲೆ ಅವರ ಕೈಗೆ ಸ್ಯಾನಿಟೈಸರ್ ಹಾಕಬೇಕು. ಮತದಾನಕ್ಕೆ ನೇರಳೆ ಬಣ್ಣದ ಸ್ಕೆಚ್‌ಪೆನ್ ನೀಡಲಾಗುತ್ತಿದ್ದು, ಮತದಾನ
ನಂತರ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಅದನ್ನು ಇಡುವಂತೆ ಮತದಾರರಿಗೆ ತಿಳಿಸಬೇಕು. ಆಗಾಗ ಆ ಸ್ಕೆಚ್‌ಪೆನ್ ಗಳನ್ನು ಸ್ಯಾನಿಟೈಸರ್ ಉಪಯೋಗಿಸಿ ಸ್ವಚ್ಛಗೊಳಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಯಶವಂತ ಮದೀನಕರ ಕೋವಿಡ್ -19 ಮಾರ್ಗಸೂಚಿಗಳ ಪಾಲನೆ ಕುರಿತು ತರಬೇತಿ ನೀಡಿದರು.
ಜಿಲ್ಲಾ ಆರ್‌ಸಿಎಚ್‌ಒ ಅಧಿಕಾರಿ ಡಾ| ಎಸ್.ಎಂ. ಹೊನಕೇರಿ, ಹುಡಾ ಆಯುಕ್ತ ವಿನಾಯಕ ಪಾಲನಕರ,ಜಿಲ್ಲಾ ತರಬೇತಿದಾರ ಕೆ.ಎಂ.ಶೇಖ್‌ವಿವಿಧ ವಿಷಯಗಳನ್ನು ತಿಳಿಸಿದರು. ಚುನಾವಣಾ ತಹಶೀಲ್ದಾರ್ ಎಚ್.ಎನ್. ಬಡಿಗೇರ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ಶಾಖೆಯ ಸಿಬ್ಬಂದಿ, ತರಬೇತಿಯಲ್ಲಿ ಚುನಾವಣಾ ಸೆಕ್ಟರ್ ಆಫೀಸರ್ ಆಗಿರುವ ವಿವಿಧ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಇದ್ದರು.
ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸುವ ಮಹಿಳೆ, ಪುರುಷ ಮತ್ತು ಇತರರಿಗಾಗಿ ಪ್ರತ್ಯೇಕ ಮೂರು ಸಾಲುಗಳನ್ನು ಮಾಡಲಾಗಿರುತ್ತದೆ.ಪ್ರತಿಯೊಬ್ಬರು ಕನಿಷ್ಠ ಆರುಅಡಿ ಸಾಮಾಜಿಕ ಅಂತರಕಾಪಾಡುವಂತೆ ಮತ್ತುಕಡ್ಡಾಯವಾಗಿ ಮಾಸ್ಕ್ ಧರಿಸಿರುವಂತೆ ಆರೋಗ್ಯ ಸಿಬ್ಬಂದಿ ಕಣ್ಗಾವಲು ಇಡಬೇಕು. -ನಿತೇಶ ಪಾಟೀಲ, ಡಿಸಿ, ಧಾರವಾಡ.