Advertisement

ಜಾನಪದ ಸಮ್ಮೇಳನಾಧ್ಯಕ್ಷರಾಗಿ ಡಾ|ಶಾಲಿನಿ ಭಟ್‌ ಆಯ್ಕೆ

01:33 PM Mar 11, 2017 | |

ಧಾರವಾಡ: ನಗರದ ಕೆ.ಇ.ಬೋರ್ಡ್‌ ಕಾಲೇಜು ಆವರಣದಲ್ಲಿ ಮಾ.17 ಮತ್ತು 18 ರಂದು ನಡೆಯಲಿರುವ ಅಖೀಲ ಭಾರತ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ತಜ್ಞರಾದ ಡಾ|ಶಾಲಿನಿ ರಘುನಾಥ ಭಟ್‌ ಆಯ್ಕೆಗೊಂಡಿದ್ದಾರೆ. 

Advertisement

ಡಾ| ಶಾಲಿನಿ ಅವರ ಬಗ್ಗೆ ಒಂದಿಷ್ಟು: ಜಾನಪದ, ಭಾಷಾ ವಿಜ್ಞಾನ, ಸಾಹಿತ್ಯ ಹಾಗೂ ಮಹಿಳಾ ಅಧ್ಯಯನಗಳಲ್ಲಿ ಸಂಶೋಧನೆ ಮಾಡಿರುವ ಡಾ| ಶಾಲಿನಿ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು.

ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಪದವಿಯನ್ನು ಬಂಗಾರದ ಪದಕದೊಂದಿಗೆ ಪ್ರಥಮ ವರ್ಗದಲ್ಲಿ ಪೂರೈಸಿ, ಶಿರಸಿ-ಮೈಸೂರುಗಳಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಕೈಕೊಂಡ ಅವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಜಾನಪದ ಅಧ್ಯಯನ ವಿಭಾಗಗಳೆರಡರಲ್ಲಿಯೂ ಬೋಧನೆ ಮಾಡಿದ್ದಾರೆ.

ಅಲ್ಲದೆ ಜಾನಪದಅಧ್ಯಯನ ವಿಭಾಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಭಾಷೆಯ ಸಮಾಜೋ-ಭಾಷಿಕ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಡಾ|ಶಾಲಿನಿ ಅವರಿಗೆ 1995ರಲ್ಲಿ ಪಿಎಚ್‌ಡಿ ಪದವಿ ನೀಡಿದೆ.

ಡಾ| ಶಾಲಿನಿ ಅವರು 150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಚಿಸಿದ್ದು, ವಿವಿಧ ಗ್ರಂಥಗಳಲ್ಲಿ ಸಂಗ್ರಹಿತಗೊಂಡಿವೆ. ಇವರ ಹೆಸರಿನಲ್ಲಿ 28ಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿದ್ದು, ಅವುಗಳಲ್ಲಿ 11 ಸಂಪಾದನೆಗಳಾಗಿವೆ.

Advertisement

ಅವರ ಮಾರ್ಗದರ್ಶನದಲ್ಲಿ 22 ವಿದ್ಯಾರ್ಥಿಗಳು ಸಂಶೋಧನೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಡಾ|ಶಾಲಿನಿ ರಘುನಾಥ ಅವರು 13 ವರ್ಷ ಕವಿವಿ ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷರಾಗಿದ್ದರು. ಅವರ ಈ ಸಾಧನೆಯೇ ಈಗ ಅವರನ್ನು ಜಾನಪದ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next