Advertisement

ದೇವರಾಜ ಅರಸು ಕಾಲೇಜಲ್ಲಿ ಜನಪದ, ಭಾವಗೀತೆ ಸ್ಪರ್ಧೆ

07:08 AM Feb 08, 2019 | |

ಹುಣಸೂರು: ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು ವಿದ್ಯಾರ್ಥಿ ಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲಿವೆ ಎಂದು ಡಿ.ಡಿ. ಅರಸು ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾ ಧ್ಯಕ್ಷ ಧರ್ಮಾಪುರ ನಾರಾಯಣ್‌ ತಿಳಿಸಿದರು.

Advertisement

ನಗರದ ಅರಸು ಕಾಲೇಜು ವತಿಯಿಂದ ದೇವರಾಜ ಅರಸರ ಸ್ಮರಣಾರ್ಥ ಆಯೋಜಿಸಿದ್ದ ಐದನೇ ವರ್ಷದ ರಾಜ್ಯ ಮಟ್ಟದ ಜನಪದ ಹಾಗೂ ಭಾವಗೀತೆ ಸ್ಪರ್ಧೆ ಉದ್ಘಾಟನಾ ಸಮಾ ರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಅತ್ಯುತ್ತಮ ಅವಕಾಶ ಕಲ್ಪಿಸಿವೆ ಎಂದರು.

ಪ್ರಾಚಾರ್ಯ ಡಾ.ವೆಂಕಟೇಶ್‌ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಕಾಲೇಜಿಗೆ ಒಳ್ಳೆಯ ಹೆಸರು ಬರುತ್ತಿದೆ ಎಂದರು. ವೇದಿಕೆಯಲ್ಲಿ ನಗರಸಭೆ ಸದಸ್ಯೆ ಪ್ರೇಮಾನಂಜಪ್ಪ, ರೋಟರಿ ಸಂಸ್ಥೆ ನಿಯೋಜಿತ ಅಸಿಸ್ಟೆಂಟ್ ಗವರ್ನರ್‌ ಶ್ರೀಧರ್‌, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಕೆ.ಎನ್‌.ಮೋಹನ್‌, ಸಾಂಸ್ಕೃತಿಕ ವಿಭಾಗದ ಸಂಚಾಲಕ ಆರ್‌.ಉಮಾ ಕಾಂತ್‌, ಶಿಕ್ಷಕರಾದ ವೆಂಕಟರಮಣ, ಕುಮಾರ್‌, ಲೋಕೇಶ್‌ ಇತರರಿದ್ದರು.

ಕಾರ್ಯಕ್ರಮದಲ್ಲಿ 5ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರ ಪಟ್ಟಿ ಹೀಗಿದೆ. ಭಾವಗೀತೆ ವಿಭಾಗ: ನಿಶ್ಚಯ್‌ ಜೈನ್‌ (ಪ್ರಥಮ) ಜ್ಞಾನದೀಪ ಪ್ರಥಮ ದರ್ಜೆ ಕಾಲೇಜು ಮೈಸೂರು. ಮಧು ಬಿ.ಕೆ.(ದ್ವಿತೀಯ) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್‌.ಪೇಟೆ. ಲಕ್ಷ್ಮ್ಮಣ (ತೃತೀಯ) ಸಿದ್ಧಾರ್ಥ ನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮೈಸೂರು. ಜಾನಪದ ಸ್ಪರ್ಧೆ: ಸಂಧ್ಯಾ (ಪ್ರಥಮ) ಡಿ.ಡಿ. ಅರಸ್‌ ಕಾಲೇಜು ಹುಣಸೂರು. ಮಂಜೇಶ್‌ ಗೌಡ (ದ್ವಿತೀಯ) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಡ್ಯ. ಹರೀಶ್‌(ತೃತೀಯ) ಮೈಸೂರು ವಿವಿಯ ಲಲಿತಕಲಾ ಕಾಲೇಜು.

Advertisement

Udayavani is now on Telegram. Click here to join our channel and stay updated with the latest news.

Next