Advertisement

ಪೋಷಣ್‌ ಅಭಿಯಾನ: ಜನಜಾಗೃತಿ ಬೀದಿ ನಾಟಕ

06:42 PM Apr 16, 2021 | Team Udayavani |

ಭಾರತೀನಗರ: ತಾಯಂದಿರು ಮಕ್ಕಳಿಗೆ ಪೌಷ್ಟಿಕಆಹಾರ ನೀಡುವ ಮೂಲಕ ಪೋಷಣೆಮಾಡಬೇಕೆಂದು ಸಹಾಯಕ ಶಿಶು ಅಭಿವೃದ್ಧಿಯೋಜನಾಧಿಕಾರಿ ಕವಿತಾ ತಿಳಿಸಿದರು.ಇಲ್ಲಿನ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮದ್ದೂರು,ಗ್ರಾಪಂ ಮದ್ದೂರು ಸಹಯೋಗದಲ್ಲಿ ನಡೆದಪೋಷಣ್‌ ಅಭಿಯಾನ ಜನಜಾಗೃತಿ ಬೀದಿನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿಒಂದನೇ ಶುಕ್ರವಾರ ಮತ್ತು 3 ನೇ ಶುಕ್ರವಾರಸೀಮಂತ, ಅನ್ನಪ್ರಾಸನ, ಪೋಷಣ್‌ ದಿವಸಕಾರ್ಯಕ್ರಮಗಳನ್ನು ಆಚರಿಸಲಾಗಿದೆ. ಇದರಉದ್ದೇಶ ಮಗುವಿನ ಒಂದು ಸಾವಿರ ದಿನಗಳಪೋಷಣೆ ಮಾಡುವುದು ಆಗಿರುತ್ತದೆ. ಇದರಜೊತೆಗೆ ಗರ್ಭಾವಸ್ಥೆಯಿಂದ ಮಗುವಿನ 2ವರ್ಷದ ವರೆಗೆ ಮಗುವಿನ ಲಾಲನೆ, ಪೋಷಣೆಮಾಡುವುದು ಹಾಗೂ ಸ್ಟೆಂಟಿಂಗ್‌ ಮತ್ತುವೇಸ್ಟಿಂಗ್‌ ಕಡಿಮೆಗೊಳಿಸುವುದು ಇದರ ಮೂಲಉದ್ದೇಶವಾಗಿದೆ.

ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಈ ಬಗ್ಗೆ ಸಾರ್ವಜನಿಕರಲ್ಲಿಜನಜಾಗೃತಿ ಮೂಡಿಸಲು ಇಲಾಖೆ ವತಿಯಿಂದಬೀದಿನಾಟಕ ಆಯೋಜಿಸಲಾಗಿತ್ತು. ಗ್ರಾಪಂಅಧ್ಯಕ್ಷ ಎಂ.ಪಿ.ರವಿಚಂದ್ರ ಕಾರ್ಯಕ್ರಮಕ್ಕೆಚಾಲನೆ ನೀಡಿದರು. ಜಿ.ಪಿ.ಪ್ರದೀಪ್‌, ಪಿಡಿಒಸುಧಾ, ಮೇಲ್ವಿಚಾರಕಿ ಆರ್‌.ಭಾಗ್ಯ, ಎಸ್‌.ಶೋಭಾ, ಲತಾ, ಉಮಾ, ಪೋಷಣ್‌ಅಭಿಯಾನ ಸಂಯೋಜಕರು ಬಿ.ಎಂ.ಶ್ರೀಧರ್‌,ಬಿ.ಮಂಜುನಾಥ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next