Advertisement

ಸಿನಿಪ್ರಿಯರ ಗಮನ ಸೆಳೆದ ‘ಬನಾರಸ್‌’ ಚಿತ್ರದ ಜಾನಪದ ಗೀತೆ

04:09 PM Jul 25, 2022 | Team Udayavani |

ಶಾಸಕ ಜಮೀರ್‌ ಅಹಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ “ಬನಾರಸ್‌’ ತೆರೆಗೆ ಬರಲು ತಯಾರಾಗುತ್ತಿದೆ.

Advertisement

ಈಗಾಗಲೇ “ಬನಾರಸ್‌’ ಸಿನಿಮಾದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ನಿಧಾನವಾಗ “ಬನಾರಸ್‌’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

ಈಗಾಗಲೇ “ಬನಾರಸ್‌’ ಸಿನಿಮಾದ ಟೀಸರ್‌ ಮತ್ತು ಹಾಡೊಂದು ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದರ ಹಿಂದೆಯೇ ಚಿತ್ರತಂಡ, ಇದೀಗ “ಬನಾರಸ್‌’ ಸಿನಿಮಾದ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದೆ.

“ಹೆಣ್ಣು ಹಡೆಯಲು ಬ್ಯಾಡಾ…’ ಎಂಬ ಪ್ರಸಿದ್ದ ಜಾನಪದ ಗೀತೆಯನ್ನು “ಬನಾರಸ್‌’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಲ್ಲಿ ಹೊಸ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. ಹರ್ಷಿಕಾ ದೇವನಾಥ್‌ ಈ ಹಾಡಿಗೆ ಧ್ವನಿಯಾಗಿದ್ದು, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಹಾಡು ಬಿಡುಗಡೆಯಾಗಿದೆ.

“ಬನಾರಸ್‌’ ಸಿನಿಮಾದಲ್ಲಿ ಝೈದ್‌ ಖಾನ್‌ಗೆ ಸೋನಾಲ್‌ ಮಾಂತೇರೋ ನಾಯಕಿಯಾಗಿ ಜೋಡಿಯಾಗಿದ್ದಾರೆ. ತಿಲಕ್‌ ರಾಜ್‌ ಬಲ್ಲಾಳ್‌ ನಿರ್ಮಾಣದಲ್ಲಿ ಮತ್ತು ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಬನಾರಸ್‌’ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲೂ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಸಿನಿಮಾವನ್ನು ಎಲ್ಲ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next