Advertisement

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

08:59 AM Nov 06, 2024 | Team Udayavani |

ಹೊಸದಿಲ್ಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನಪ್ರಿಯ ಜಾನಪದ ಗಾಯಕಿ ಶಾರದಾ ಸಿನ್ಹಾ ಮಂಗಳವಾರ ರಾತ್ರಿ(ನ5 ) ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

Advertisement

“ಸೆಪ್ಟಿಸೆಮಿಯಾ ಪರಿಣಾಮವಾಗಿ ಆಘಾತದಿಂದಾಗಿ ಶಾರದಾ ಸಿನ್ಹಾ ರಾತ್ರಿ 9.20 ಕ್ಕೆ ನಿಧನ ಹೊಂದಿದರು ” ಎಂದು ಏಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಕಾರ್ತಿಕ್ ಮಾಸ್ ಇಜೋರಿಯಾ” ಮತ್ತು “ಕೋಯಲ್ ಬಿನ್” ಮತ್ತು “ಗ್ಯಾಂಗ್ಸ್ ಆಫ್ ವಾಸೇಪುರ್- II” ನಂತಹ ಬಾಲಿವುಡ್ ಹಾಡುಗಳಾದ “ತಾರ್ ಬಿಜ್ಲಿ” ಮತ್ತು “ಹಮ್ ಆಪ್ಕೆ ಹೈ ಕೌನ್” “ಬಾಬುಲ್” ನಂತಹ ಜಾನಪದ ಹಾಡುಗಳಿಗೆ ಸಿನ್ಹಾ ಅವರು ಖ್ಯಾತಿ ಹೊಂದಿದ್ದರು.

ಭೋಜ್‌ಪುರಿ, ಮೈಥಿಲಿ ಮತ್ತು ಮಾಘಹಿ ಭಾಷೆಗಳಲ್ಲಿ ಜಾನಪದ ಹಾಡುಗಳ ಮೂಲಕ ತನ್ನದೇ ಛಾಪು ಮೂಡಿಸಿದ್ದ ಗಾಯಕಿ ಪದ್ಮಭೂಷಣ ಪುರಸ್ಕೃತರಾಗಿದ್ದರು. ರಕ್ತದ ಕ್ಯಾನ್ಸರ್‌ನ ಒಂದು ರೂಪವಾದ ಮಲ್ಟಿಪಲ್ ಮೈಲೋಮಾದಿಂದಾಗಿ ಆರೋಗ್ಯದ ತೊಂದರೆಯ ನಂತರ ವೆಂಟಿಲೇಟರ್ ಬೆಂಬಲದಲ್ಲಿದ್ದರು. ಕಳೆದ ತಿಂಗಳು AIIMS ನ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆ (IRCH) ನ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಸಿನ್ಹಾ ಅವರ ಸ್ಥಿತಿಯನ್ನು ನಿರಂತರವಾಗಿ ಗಮನಿಸಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದರು ಎಂದು ಏಮ್ಸ್ ಹೇಳಿದೆ.

Advertisement

ಬಿಹಾರ್ ಕೋಕಿಲಾ ಎಂದು ಕರೆಯಲ್ಪಡುತ್ತಿದ್ದ ಗಾಯಕಿ ಸಿನ್ಹಾ, ಹುಟ್ಟೂರು ಬಿಹಾರ ಮಾತ್ರವಲ್ಲದೆ ಪೂರ್ವ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಛಾತ್ ಪೂಜೆ ಮತ್ತು ಮದುವೆಯಂತಹ ಸಂದರ್ಭಗಳಲ್ಲಿ ಹಾಡುವ ಜಾನಪದ ಹಾಡುಗಳಿಂದ ಪ್ರಸಿದ್ಧರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next