Advertisement

Folk ; ಜಾನಪದವು ಅರಿತವರ ಅನ್ನದ ಬಟ್ಟಲಾಗಬೇಕು

12:16 AM Nov 09, 2023 | Team Udayavani |

ಜಾನಪದವೆಂದರೆ ಜನಸಮುದಾಯಗಳ ಗ್ರಂಥಸ್ಥವಲ್ಲದ ಸಂಪ್ರ ದಾಯಗಳ ಮೊತ್ತ ಮತ್ತು ಅದನ್ನು ಕುರಿತ ವಿಜ್ಞಾನ. ಇದು ಪರಂಪ ರೆಯಿಂದ ಬಂದಿರು ವಂತಹದ್ದು, ಅದು ನಿಂತ ನೀರಲ್ಲ, ಬದಲಾವಣೆ ಯನ್ನು ಹೊಂದುತ್ತಾ ಕಾಲದಿಂದ ಕಾಲಕ್ಕೆ ಬೆಳೆದುಕೊಂಡು ಬಂದಿರುತ್ತದೆ. ಇದನ್ನೇ ವಿದ್ವಾಂಸರಾದ ಪಾಟಕ ಅವರು Folklore is lovely fossil which refuses to die (ಜಾನಪದ ಎಂದೂ ಸಾಯುವುದಿಲ್ಲ, ಅದು ಜೀವಂತ ಪಳೆಯುಳಿಕೆ) ಎಂದು ಹೇಳಿದ್ದಾರೆ. ಈ ಮಾತು ಎಂದೆಂದಿಗೂ ಪ್ರಸ್ತುತವೇ ಆಗಿದೆ.

Advertisement

ಆಧುನೀಕರಣ ಮತ್ತು ಜಾಗತೀಕರಣದ ಒತ್ತ ಡದ ಈ ಸಂದರ್ಭದಲ್ಲಿ ದೇಸಿ ಜ್ಞಾನ ಸಂಸ್ಕೃತಿಗಳಿಗೆ ಎಲ್ಲಿಲ್ಲದ ಮಹತ್ವ ಬರತೊಡಗಿದೆ. ಆದರೂ ಭಾರತ ದಂಥ ದೇಶಗಳಲ್ಲಿ ಸ್ಥಳೀಯವಾದ ನಮ್ಮದೇ ಆಗಿರ ತಕ್ಕಂತಹ ದೇಸಿ ಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ ಗಳನ್ನು ಅಭಿಮಾನದಿಂದ ಗೌರವಯುತವಾಗಿ ನೋಡುವ ಮಾನಸಿಕ ಸ್ಥಿತಿ ಇನ್ನೂ ನಿರ್ಮಾಣ ವಾಗಬೇಕಾಗಿದೆ. ಅಂದರೆ ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮದೆಯಾದ ಜಾನಪದವನ್ನು ತಿರಸ್ಕಾರ ದೃಷ್ಟಿಯಿಂದ ಕಾಣುವ ಮನಃಸ್ಥಿತಿಯಿಂದ ಹೊರ ಬರಬೇಕಾಗಿದೆ.

ಇಂದು ದೇಸಿ ಜ್ಞಾನ ಸಂಸ್ಕೃತಿ ಬಗ್ಗೆ ಹೆಮ್ಮೆ, ಗೌರವಗಳು ಜನಸಮುದಾಯಗಳಲ್ಲಿ ಮೂಡ ಬೇಕೆಂದರೆ ಜಾನಪದವನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ತೊಡಗಿಸಿ, ಅಲ್ಲಿಯ ಒಳಿತು- ಕೆಡಕುಗಳ ವಿಶ್ಲೇಷಣೆ ಗಂಭೀರವಾಗಿ ಆಗಬೇಕಾ ಗಿದೆ. ಹೀಗೆ ಜಾನಪದ ತಲಸ್ಪರ್ಶಿ ಅಧ್ಯಯನದ ತೀವ್ರತೆ ಹೆಚ್ಚಾಗಬೇಕೆಂದರೆ ಜಾನಪದ ಓದಿದವರಿಗೆ ಜಾನಪದ ಎಂಬ ವಿಷಯ ಅನ್ನದ ಬಟ್ಟಲಾಗಬೇಕು. ಜಾನಪದದಂತಹ ವಿಷಯವು ಆನ್ವಯಿಕತೆಯ ಆಶಯವಿಲ್ಲದೆ ಬರೀ ಅಧ್ಯಯನಕ್ಕಾಗಿ ಅಧ್ಯಯನ ಸಿದ್ಧಾಂತಗಳ ಶುಷ್ಕ ಸಮೀಕರಣ ಎಂಬ ಧೋರಣೆಗೆ ಸೀಮಿತವಾದರೆ ಅಂತಹ ಅಧ್ಯಯನ ಅಪೂರ್ಣ, ಮಾತ್ರವಲ್ಲ ಅಪ್ರಯೋಜಕವೂ ಆಗುತ್ತದೆ. ಆದ್ದ ರಿಂದ ಮುಖ್ಯವಾಗಿ ಬದುಕಿ ಪ್ರಸ್ತುತವಾಗಬೇಕು.

ಜಾನಪದ ಹಳತು ಎಂಬುದರಿಂದಷ್ಟೇ ವಸ್ತು ಅಥವಾ ವಿಚಾರ ಮೌಲ್ಯಯುತವೆಂದೂ ಅಥವಾ ಕಾಲಬಾಧಿತ ಅಪ್ರಯೋಜಕ ವಿಷಯವೆಂದೂ ಪರಿಭಾವಿಸುವಂತಿಲ್ಲ, ಜಾನಪದ ಪ್ರಪಂಚ ದೊಳಗೆ ಸೇರ್ಪಡೆಗೊಳ್ಳುವ ಎಲ್ಲ ವಿಷಯಗಳ ತಾಯಿಬೇರಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿ ಜಾನಪದ ಆಯಾ ಜನಾಂಗದ ಸಾಂಸ್ಕೃತಿಕ ಬೀಗದ ಕೈ ಇದ್ದಂತಾಗಿದೆ.

ಜಾನಪದ ಸಾಂಸ್ಕೃತಿಕ ಬದುಕಿನಲ್ಲಿ ಕರುಳನ್ನು ಮಿಡಿದು ನುಡಿಯುವ ತಾಯಿಯ ಪ್ರೀತಿ ಇದೆ. ಪದದ ಬದುಕಿನ ಸಂಗವಿದೆ. ಜೀವಧರ್ಮದ ಸಾರವಿದೆ. ಸಾವಯವ ಕೃಷಿಯ ನೋಟವಿದೆ. ಕೆರೆ, ಗ್ರಾಮ, ಮನೆ ಇತ್ಯಾದಿಗಳನ್ನು ಕಟ್ಟುವ ತಾಂತ್ರಿಕ ಕೌಶಲವಿದೆ. ಆಹಾರ ಆರೋಗ್ಯದ ಗುಟ್ಟಿದೆ. ನಾಟಿ ಔಷಧದ ಪೌಷ್ಟಿಕತೆಯಿದೆ. ಅಲ್ಲಿಗೆ ಜಾನಪದ ಕುರಿತ ಅಧ್ಯಯನ ಜೀವಂತ ಅಧ್ಯಯನವೇ ಆಗಿದೆ. ಹೀಗಾಗಿ ಅದನ್ನು ಶಾಲೆ-ಕಾಲೇಜುಗಳಲ್ಲಿ ಜಾನಪದ ಕಲಿಕೆಯ ವಿಷಯವಾಗಬೇಕಾಗಿದೆ. ಕೌಶಲಯುತ ಪಠ್ಯಕ್ರಮ ರಚನೆಯೊಂದಿಗೆ ಮಕ್ಕಳ ಮನಸ್ಸನ್ನು ಮುಟ್ಟಬೇಕಾಗಿದೆ. ಅವರು ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನ ದೇಸಿ ಜ್ಞಾನ ದೊರೆಯಬೇಕಾಗಿದೆ. ಅಲ್ಲದೆ ಕಳೆದು ಹೋಗುವ ಜಾನಪದ ವಿಷಯಗಳ ಆಡಿಯೋ-ವೀಡಿಯೋಗಳ ಮೂಲಕ ಸಂಗ್ರಹಿಸಿ ಬದುಕಿಗೆ ಆನ್ವಯಿಕ ಮಾಡ ಬೇ ಕಿ ದೆ.

Advertisement

ಡಾ| ವಿ.ಎಲ್‌.ಪಾಟೀಲ್‌
ಮುಖ್ಯಸ್ಥರು, ಜಾನಪದ ಅಧ್ಯಯನ ವಿಭಾಗ, ಕವಿವಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next