Advertisement

ಜಾನಪದ ಹಬ್ಬಗಳು ಮಾಯ: ಸಾಹಿತಿ ಸಿದ್ದರಾಜ ಪೂಜಾರಿ

03:22 PM Jul 29, 2023 | Team Udayavani |

ಮಹಾಲಿಂಗಪುರ: ಭಾರತೀಯ ಸಂಪ್ರದಾಯದ ಜಾನಪದ ಹಬ್ಬಗಳು ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿವೆ. ಪ್ರಸ್ತುತ
ದಿನಕ್ಕೆ ಇಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು, ಹಳ್ಳಿ ಹಬ್ಬಗಳು ಹಿರಿಯರ ಪರಂಪರೆ ನೆನಪಿಸುತ್ತವೆ ಎಂದು ಬನಹಟ್ಟಿಯ ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.

Advertisement

ಪಟ್ಟಣದ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಸ್ಫೂರ್ತಿ ಟ್ಯೂಷನ್‌ ಕ್ಲಾಸಸ್‌ ವತಿಯಿಂದ ಹಮ್ಮಿಕೊಂಡಿದ್ದ ಹಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ನಮ್ಮ ಸಂಸ್ಕೃತಿ, ಆಚರಣೆ, ಕಲೆ, ಸಾಹಿತ್ಯದಂತಹ ವಿಚಾರ ತಿಳಿಸುವ ಪ್ರಯತ್ನ ನಡೆದಾಗ
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ದಿನಾಚರಣೆ ಅಂಗವಾಗಿ
ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡ ರೊಟ್ಟಿ ಮಾಡುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಗೀತಾಂಜಲಿ ನಾಯಕ,
ದ್ವಿತೀಯ ಸ್ಥಾನ ಪಡೆದ ಸುಮಿತ್ರಾ ಚವ್ಹಾಣ, ತೃತೀಯ ಸ್ಥಾನ ಪಡೆದ ದೀಪ್ತಿ ಹುಲ್ಯಾಳ ಅವರಿಗೆ ಬಹುಮಾನ ವಿತರಿಸಲಾಯಿತು.

ಟ್ಯೂಷನ್‌ ಕ್ಲಾಸ್‌ ನ ವಿದ್ಯಾರ್ಥಿಗಳು ಹಲವು ದತ್ತಾಂಶಗಳ ಮೂಲಕ ಕಂಡು ಹಿಡಿದ ಪೈ ಬೆಲೆ ಪ್ರದರ್ಶಿಸಿದರು. ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ತಮ್ಮ ತಂದೆ-ತಾಯಿಯರ ಪಾದ ಪೂಜೆ ಮಾಡುವುದರ ಮೂಲಕ ಗೌರವ ಸಮರ್ಪಿಸಿದರು. ವಿದ್ಯಾರ್ಥಿಗಳು
ಮತ್ತು ಪಾಲಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗಣಿತ ಗ್ರಂಥ ಹೊತ್ತ ಪಲ್ಲಕ್ಕಿ ಉತ್ಸವ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಜರುಗಿತು. ಶ್ರೀಮಂತ ಮಹಾರಾಜರು ಸಾನ್ನಿಧ್ಯ, ಟ್ಯೂಷನ್‌ ಕ್ಲಾಸಸ್‌ನ ಶಿಕ್ಷಕ ಸುರೇಶ ಮಟಗಾರ ಅಧ್ಯಕ್ಷತೆ ವಹಿಸಿದ್ದರು. ಡಾ| ಗೀತಾ ಬಡಿಗೇರ, ಚಿತ್ರಕಲಾ ಶಿಕ್ಷಕರಾದ ಎಸ್‌. ಎಸ್‌.ಶಿಂಧೆ, ವಿ.ಜಿ.ಹುಡೇದಮನಿ,
ವಿ.ಜಿ.ಅಭಾನವರ, ಬಿ.ಬಿ.ಚೋಪಡೆ, ಶಿವಾನಂದ ನೇಗಿನಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next