Advertisement

ಹಾಡುಗಳ ಮೂಲಕವೇ ನೋವು-ನಲಿವು ವ್ಯಕ್ತ 

04:29 PM Sep 20, 2018 | |

ಬ್ಯಾಡಗಿ: ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಯ ನೃತ್ಯ, ಸಂಗೀತ ಹಾಗೂ ಜನಪದ ಕಲೆಗಳು ತಮ್ಮದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದು ಜಗತ್ತಿನಾದ್ಯಂತ ಅನುಕರಣೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಅಭಿಯಂತರ ಸಿ.ಆರ್‌.ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಆಂಜನೇಯ ಯುವಕ ಮಂಡಳದ ಆಶ್ರಯದಲ್ಲಿ ಗಣೇಶೋತ್ಸವದ ನಿಮಿತ್ತ ಪಟ್ಟಣದ ವಾಜಪೇಯಿ ರಂಗ ಮಂದಿರದಲ್ಲಿ ಆಯೋಜಿಸಿದ್ದ ‘ಜನಪದ ವೈವಿಧ್ಯ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಮಾಜವೇ ಒಂದು ಅವಿಭಕ್ತ ಕುಟುಂಬ ವ್ಯವಸ್ಥೆಯ ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದ ಕಾಲಘಟ್ಟದಲ್ಲಿ ತಮ್ಮ ದೈನಂದಿನ ಬದುಕು ಮತ್ತು ಬವಣೆಗಳನ್ನು ಆಧಾರವಾಗಿಟ್ಟುಕೊಂಡು ಕೌಟುಂಬಿಕ ಸಂಕೋಲೆಗಳನ್ನು ನಿರ್ಭಯವಾಗಿ ಸಮಾಜದೆದರು ನೋವು ನಲಿವುಗಳನ್ನು ಹಾಡುಗಳ ಮೂಲಕ ಹೇಳಿಕೊಳ್ಳುವಂತಹ ವ್ಯವಸ್ಥೆಯಾಗಿದೆ ಎಂದರು.

ವರ್ತಕ ಬಸವರಾಜ ಸುಂಕಾಪುರ ಮಾತನಾಡಿ, ಜನಪದ ಕಲೆ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಜ್ಜೆ ಇಡಬೇಕಿದೆ. ದೊಡ್ಡಾಟ, ಡೊಳ್ಳು ಕುಣಿತ, ಗೀಗಿ ಪದ, ನಾಟಕಗಳು ಇಂದು ಪ್ರೋತ್ಸಾಹವಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿದ್ದು, ಇದರಿಂದಾಗಿ ಈ ಕಲೆಯನ್ನೆ ನಂಬಿ ಬದುಕುತ್ತಿರುವ ಕಲಾವಿದರು ಕೂಡಾ ಕಲೆಗಳಿಂದ ವಿಮುಕ್ತರಾಗುತ್ತಿರುವುದು ದುರಂತ ಎಂದು ಖೇದ ವ್ಯಕ್ತಪಡಿಸಿದರು.

ಡಾ| ರಾಮು ಮೂಲಗಿ ಮಾತನಾಡಿ, ಇತ್ತೀಚಿನ ತಾಂತ್ರಿಕ ಬೆಳವಣಿಗೆ ಬಹಳಷ್ಟು ಜನರಿಗೆ ಕಲೆಯ ಬಗೆಗಿನ ಅಭಿರುಚಿ ಕಳೆಗುಂದುವಂತೆ ಮಾಡಿವೆ, ಮೊಬೈಲ್‌ಗ‌ಳ ಹಿಂದೆ ಬಿದ್ದಿರುವ ಪ್ರೇಕ್ಷಕನನ್ನು ಮತ್ತೆ ಜನಪದದ ಕಡೆಗೆ ಸೆಳೆಯಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜನಪದ ಕಲೆಗಳು ಅಸ್ಥಿತ್ವದಲ್ಲಿದ್ದವು ಎನುವುದನ್ನೆ ಮರೆಯುಬೇಕಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದರು. ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿ, ಜನಪದ ಕಲೆಗಳಲ್ಲಿ ಸಂಗೀತ ಕೂಡಾ ಒಂದಾಗಿದ್ದು, ಡಾ| ಪುಟ್ಟರಾಜ ಗವಾಯಿ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಮಲ್ಲಿಕಾರ್ಜುನ ಮನ್ಸೂರ ಅವರಂತಹ ಅನೇಕ ಮಹಾನ್‌ ಸಂಗೀತಗಾರರು ನಮ್ಮ ದೇಶೀಯ ಸಂಗೀತಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಸಂಗೀತ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಎಲೆಮರೆಯ ಕಾಯಿಯಂತಿರುವ ಕಲಾ ಪ್ರಾವಿಣ್ಯರನ್ನು ಪ್ರೋತ್ಸಾಹಿಸುವುದರೊಂದಿಗೆ, ಅವರಿಗೆ ವೇದಿಕೆ ಕಲ್ಪಿಸಿದಾಗ ಮಾತ್ರ ಸಂಗೀತ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯವೆ ಎಂದರು. ಉತ್ಸವ ರಾಕ್‌ ಗಾರ್ಡನ್‌ ಪ್ರಾಥಮಿಕ ಶಾಲಾ ಮಕ್ಕಳಿಂದ ಮೂಲ ಜನಪದ ಪ್ರಕಾರಗಳ ಪದರ್ಶನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next