Advertisement

ಜಾನಪದ ಕಲೆ ನಮ್ಮ ಪರಂಪರೆ ಪ್ರತೀಕ: ಬರಗುಂಡಿ

06:34 PM Dec 20, 2022 | Team Udayavani |

ಗುಳೇದಗುಡ್ಡ: ಜಾನಪದ ಕಲೆ ಉಳಿಸಿ ಬೆಳೆಸುವ ಕೆಲಸವಾಗಬೇಕು. ಜಾನಪದ ಕಲೆ ಮತ್ತು ಸಾಹಿತ್ಯವು ಬರವಣಿಗೆ ರೂಪಕ್ಕಿಂತ ಜನಪದವು ಜನರಿಂದ ಜನರಿಗೆ ಸಾಗುತ್ತ ಬಂದಿದ್ದು, ಚೌಡಕಿ, ಗೀಗಿ ಸೇರಿದಂತೆ ನಾನಾ ರೀತಿಯಲ್ಲಿ ಸಂಗಿತ ಕಂಡುಬರುತ್ತಿದೆ. ಇದು ನಮ್ಮ ನಿತ್ಯದ ಬದುಕಿನ ಜತೆಗೆ ಹಾಸುಹೊಕ್ಕಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ ಬರಗುಂಡಿ ಹೇಳಿದರು.

Advertisement

ಪಟ್ಟಣದ ಶ್ರೀ ಗಜಾನನ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವಕ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಹಾಗೂ ವಾದ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆ ಉಳಿಸಿ ಬೆಳೆಸುವುದಷ್ಟೇ ಅಲ್ಲ. ನಮ್ಮ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಕೆಲಸವಾಗಬೇಕು. ಗಜಾನನ ಯುವಕ ಮಂಡಳಿ ಉತ್ತಮ ಕೆಲಸ ಮಾಡುತ್ತ ಸಾಗುತ್ತಿದ್ದು, ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲಿ ಎಂದು ಹೇಳಿದರು.

ಪತ್ರಕರ್ತ ಹುಚ್ಚೇಶ ಯಂಡಿಗೇರಿ ಮಾತನಾಡಿ, ಜಾನಪದ ಕಲೆಯು ಇಂದು ನಿನ್ನೆಯದಲ್ಲ. ಆಯಾ ಭಾಷೆ ಪ್ರಾಂತ್ಯಗಳಲ್ಲಿ ತನ್ನದ ಶೈಲಿಯಲ್ಲಿ ಕಂಡು ಬರುತ್ತದೆ. ಮಹಿಳೆಯರು ಬಿಸುವಾಗ, ಗಂಡನ ಹೆಸರು ಹೇಳುವಾಗ ಒಡಪು ಇಟ್ಟು ಹೇಳುವುದು ಎಲ್ಲವು ಜಾನಪದ ಶೈಲಿಯದ್ದಾಗಿದೆ ಎಂದು ಹೇಳಿದರು. ನಿವೃತ್ತ ಉಪನ್ಯಾಸಕ ಶಿವಪ್ಪ ಸಾರಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದವು ಒಂದು ಸಾಹಿತ್ಯವಾಗಿರದೇ ಅದು ನಮ್ಮ ಬದುಕಿನ ಮೌಲ್ಯಗಳನ್ನ ತಿಳಿಸಿಕೊಡುತ್ತದೆ.ಚೌಡಕಿ, ಗೀಗಿ,ಬೀಸುವ ಪದಗಳು ಇಂದು ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿವೆ.

ಅವುಗಳನ್ನು ಉಳಿಸುವ ಕೆಲಸವನ್ನು ನಮ್ಮ ಯುವ ಪೀಳಿಗೆ ಮಾಡಬೇಕು ಎಂದು ಹೇಳಿದರು. ಬುದೂ°ರು ಪಿ.ಡಿ.ಯ ಸತ್ಯವ್ವ ಕಾಶಪ್ಪ ತಳಗೇರಿ ತಂಡದಿಂದ ಚೌಡಕಿ ಪದಗಳ ಕಾರ್ಯಕ್ರಮ ನಡೆಯಿತು. ಶಿವಪ್ಪ ಕಲಬುರ್ಗಿ, ಬಸವರಾಜ ಹುಣಸಿಮರದ, ದತ್ತು ಕಿರಗಿ, ಶಂಕರ ಇಟಗಿ ಅವರ ತಂಡಗಳಿಂದ ಜಾನಪದ ಸಂಗೀತ ವಾದ್ಯ ಮೇಳಗಳ ಕಾರ್ಯಕ್ರಮ ನಡೆಯಿತು.

ಸಂಗಯ್ಯ ಶಿವಪ್ಪಯ್ಯನಮಠ ಸಾನಿಧ್ಯ ವಹಿಸಿದ್ದರು. ಬಸವರಾಜ ತಾಂಡೂರ, ಅಮರೇಶ ತಟ್ಟಿ, ಬಸವರಾಜ ಕಾಳಿ, ಪತ್ರಕರ್ತ ಮಲ್ಲಿಕಾರ್ಜುನ ಕಲಕೇರಿ, ಸಂಗಪ್ಪ ಚಂದಾಪೂರ, ಸುರೇಶ ಸಾರಂಗಿ, ಓಂಕಾರೆಪ್ಪ ದಿಂಡಿ, ನೆರಕಿ, ವಿಜಯಕುಮಾರ ಬೇಟಗೇರಿಗೌಡ್ರ, ಬಸವರಾಜ ಅಲದಿ, ಮಲ್ಲಿಕಾರ್ಜುನ ಹಳ್ಳೂರ, ವಿವೇಕ ಪರಗಿ, ಶಂಕರ ಸಣಪಾ, ಕವಿಶೆಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next