Advertisement

ಜನಪದ ಕಲೆ ಸಂರಕ್ಷಣೆ ಎಲ್ಲರ ಹೊಣೆ

01:30 PM May 29, 2017 | |

ಹುಬ್ಬಳ್ಳಿ: ಕಲೆಯಲ್ಲಿ ಅಪಾರ ಶಕ್ತಿ ಇದೆ. ಆ ಕಲೆಯ ಶಕ್ತಿಯಿಂದಲೇ ಅನಾರೋಗ್ಯಕ್ಕೀಡಾದವರನ್ನು ಎದ್ದು ಕುಳಿತುಕೊಳ್ಳುವಂತೆ ಮಾಡುವ ಶಕ್ತಿ ಇದಕ್ಕಿದೆ ಎಂದು ಮೂರುಸಾವಿರಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. 

Advertisement

ಮೂರುಸಾವಿರ ಮಠದ ಸಭಾಭವನದಲ್ಲಿ ರವಿವಾರ ನಡೆದ ಸ್ವರ್ಣ ಮಯೂರಿ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಸೋಬಾನ ಪದ ಹಾಡುವುದು, ಜಾನಪದ ನೃತ್ಯ, ಜನಪದ ಸಂಸ್ಕೃತಿ ಎಲ್ಲವೂ ನಮ್ಮ ಜನಪದ ಕಲೆಗಳಾಗಿದ್ದು ಅವುಗಳಿಂದಲೇ ನಮ್ಮ ಕಲೆ-ಸಂಸ್ಕೃತಿ ಉತ್ತುಂಗದ ಶಿಖರದಲ್ಲಿದೆ.

ಕಲೆಯ ತರಬೇತಿ ಪಡೆಯುತ್ತಿರುವ ಪುಟಾಣಿ ಮಕ್ಕಳು ದೇಶದ ಬಂಗಾರದ ನವಿಲುಗಳು. ಅವರ ಮೂಲಕ ನಮ್ಮ ಕಲೆ-ಸಂಸ್ಕೃತಿ ಬೆಳೆಯಬೇಕು. ನೃತ್ಯ ಮಾಡುವುದರಿಂದ ದೇಹದಲ್ಲಿರುವ ನರನಾಡಿಗಳು ಜಾಗೃತಗೊಳ್ಳುತ್ತವೆ ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನಮ್ಮ ನಾಡು ಕಲೆ-ಸಂಸ್ಕೃತಿಯ ಬೀಡು. 

ಅದನ್ನು ಉಳಿಸಿ-ಬೆಳೆಸುವ ಕೆಲಸಗಳು ಹೆಚ್ಚಾಗಿ ನಡೆಯಬೇಕಾಗಿದೆ. ಸಂಗೀತ, ನೃತ್ಯಗಳಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ. ಎಲ್ಲರು ಕಲೆನ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮಾತನಾಡಿ, ಕಲೆ ಯಾರ ಸ್ವತ್ತು ಅಲ್ಲ.

ಕಲೆಯಲ್ಲಿ ಉಳಿದು ಬೆಳೆದವನೇ ಅದರ ಒಡೆಯ. ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಗುರುತಿಸಿ ಅವರಿಗೆ ಅವಕಾಶ ಮತ್ತು ವೇದಿಕೆ ಕಲ್ಪಿಸಿಕೊಟ್ಟಲ್ಲಿ ಅವರನ್ನು ಪ್ರೋತ್ಸಾಹಿಸಿದಂತೆ ಎಂದರು. ಬಂಗಾರೇಶ ಹಿರೇಮಠ, ಮನೀಶ ಶಿಂಧೆ, ಮನೋಜ ಹಾನಗಲ್ಲ ಇನ್ನಿತರರು ಮಾತನಾಡಿದರು.

Advertisement

ಮಹಾಪೌರ ಡಿ.ಕೆ. ಚವ್ಹಾಣ, ಮಹೇಶ ಟೆಂಗಿನಕಾಯಿ, ಚನ್ನು ವಸ್ತ್ರದ, ರವಿ ಬಂಕಾಪುರ, ಮಂಜುನಾಥ ಲೂತಿಮಠ, ಚೈತ್ರಾ ಮಹೇಂದ್ರಕರ, ಪ್ರಹ್ಲಾದ ಕಟ್ಟಿಮನಿ, ಶಿವಪ್ರಕಾಶ ನಾಯಕ, ಯಕ್ಕೇರಪ್ಪ ನಡುವಿಮನಿ, ಚೇತನ ಪವಾರ ಇದ್ದರು. ಕೊನೆಯಲ್ಲಿ ಮಕ್ಕಳಿಂದ ನೃತ್ಯ, ಜಾನಪದ ನೃತ್ಯ, ಭರತನಾಟ್ಯ, ವಚನ ನೃತ್ಯ, ಸುಗ್ಗಿ ಹಾಡು, ಸೋಬಾನ ಪದ, ಆಧುನಿಕ ನೃತ್ಯ, ದೇಶಭಕ್ತಿ ನೃತ್ಯ, ದೇಶಿ ನೃತ್ಯ ಸೇರಿದಂತೆ ಇನ್ನಿತರರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

Advertisement

Udayavani is now on Telegram. Click here to join our channel and stay updated with the latest news.

Next