Advertisement

ಜಾನಪದ ಕಲಾಮೇಳಕ್ಕೆ ಅದ್ಧೂರಿ ಚಾಲನೆ

12:12 PM Jan 13, 2020 | Suhan S |

ಬೈಲಹೊಂಗಲ: ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟುರಿನ ಗ್ರಾಮದಲ್ಲಿ ರವಿವಾರ ಪ್ರಾರಂಭಗೊಂಡ ಸಂಗೊಳ್ಳಿ ರಾಯಣ್ಣ ಉತ್ಸವ 2020ರ ಜಾನಪದ ಕಲಾಮೇಳಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

Advertisement

ಶಾಸಕ ಮಹಾಂತೇಶ ಕೌಜಲಗಿ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ , ತಹಶೀಲ್ದಾರ್‌ ಡಾ.ದೊಡ್ಡಪ್ಪ ಹೂಗಾರ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ ಅವರು ನಂದಗಡ ಗ್ರಾಮದಿಂದ ಸಂಗೊಳ್ಳಿ ಗ್ರಾಮಕ್ಕೆ ಆಗಮಿಸಿದ ರಾಯಣ್ಣನ ವೀರ ಜ್ಯೋತಿ, ಸಂಗೊಳ್ಳಿ ರಾಯಣ್ಣ ಯುವ ಜಾಗೃತಿ ರಥ ಯಾತ್ರೆಯನ್ನು ಸ್ವಾಗತಿಸಿದರು. ಕಿತ್ತೂರು ಸಂಸ್ಥಾನದ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ನೆರವೇರಿಸಿದರು.  ಜಾನಪದ ಕಲಾ ವಾಹಿನಿಯನ್ನು ಶಾಸಕ ಮಹಾಂತೇಶ ಕೌಜಲಗಿ ಹಾಗೂ ಅಧಿಕಾರಿ ವರ್ಗ ಉದ್ಘಾಟಿಸಿ ಕಲಾಮೇಳಕ್ಕೆ ಚಾಲನೆ ನೀಡಿದರು.

ಜಾನಪದ ಕಲಾಮೇಳ: ಸಂಗೊಳ್ಳಿ ಉತ್ಸವದಲ್ಲಿ ವಿವಿಧ ಕಲಾವಿದರಿಂದ ನಡೆದ ಕಲಾಮೇಳ ನೋಡುಗರನ್ನು ಜನಾಕರ್ಷಿಸಿತು. ಗ್ರಾಮದಲ್ಲಿ ರಂಗೋಲಿಯ ಚಿತ್ತಾರ, ನಾನಾ ಕಲಾ ತಂಡಗಳ ದೃಶ್ಯ ನಯನ ಮನೋಹರವಾಗಿತ್ತು. ವಿಧವಿಧವಾದ ಉಡುಪು ತೊಟ್ಟಿದ್ದ ಕಲಾವಿದರು ಉತ್ತಮ ಕಲಾಪ್ರದರ್ಶನ ನೀಡಿದರು.

ಗಮನ ಸೆಳೆದ ರೂಪಕಗಳು: ಕಲ್ಲೋಳಿಯ ಗಂಗಪ್ಪ ಮೂಡಲಗಿ ವೀರಗಾಸೆ, ಶೀವನಪ್ಪ ಚಂದರಗಿ ತಂಡದ ಡೊಳ್ಳು ಕುಣಿತ, ಬಾಳಪ್ಪ ಭಜಂತ್ರಿ ತಾಸೆ ವಾದನ, ಯಮನವ್ವ ಮಾದರ ಮಹಿಳಾ ಡೊಳ್ಳು ಕುಣಿತ ಮಹಾದೇವ ಗುಂಡೇನಟ್ಟಿ ತಂಡದ ಜಗ್ಗಲಗಿ, ಹುಬ್ಬಳ್ಳಿಯ ಗೊಂಬೆ ಕುಣಿತ, ಸಾಗರದ ಮಹಿಳಾ ಡೊಳ್ಳು ಮೇಳ, ಗೋಕಾಕ ಮಹಾಂತೇಶ ಹೂಗಾರ ತಂಡದ ಸಂಬಳ ವಾದನ, ಸಾರವಾಡದ ಗೊಂಬೆ ಕುಣಿತ, ತುಮಕೂರಿನ ಹುಲಿ ವೇಷ, ಸಂಗೊಳ್ಳಿ ಮರಿಯಮ್‌ ಕಲಾ ತಂಡದ ಕರಡಿ ಮಜಲು, ಜೋಕಾನಟ್ಟಿಯ ಮಹಿಳಾ ಡೊಳ್ಳು ಕುಣಿತ, ನಾಗನೂರಿನ ಯಮದೂತ ತಂಡ, ಹಂದಿಗುಂದ ಜಾಂಝಮೇಳ, ಶಾಲಾ ವಿದ್ಯಾರ್ಥಿಗಳ ರೂಪಕಗಳು ನೋಡುಗರ ಗಮನ ಸೆಳೆದವು.

ಕಲಾಮೇಳದಲ್ಲಿ ಸಾವಿರಾರು ಸುಮಂಗಲೆಯರ ಭವ್ಯ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು ಕಲಾತಂಡಕ್ಕೆ ಮೆರಗು ನೀಡಿತು. ಬೆಳಗ್ಗೆ ಪ್ರಾತಃಕಾಲದಲ್ಲಿ ಸಂಗೊಳ್ಳಿ ಗುರುಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಅರ್ಚಕ ಬಸವರಾಜ ಡೊಳ್ಳಿನ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ವಿವಿಧ ಪುಷ್ಪಗಳಿಂದ ರಾಯಣ್ಣ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಗ್ರಾಮಸ್ಥರು ರಾಗಿ ಅಂಬಲಿ, ಶರಬತ್ತು ವಿತರಿಸಲಾಯಿತು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಶ್ವೇತಾ ಹೊಸಮನಿ, ತಹಶೀಲ್ದಾರ ಡಾ| ಡಿ.ಎಚ್‌.ಹೂಗಾರ, ತಾಪಂ.ಇಓ ಸಮೀರ ಮುಲ್ಲಾ, ಸಿಡಿಪಿಒ ಮಹಾಂತೇಶ ಭಜಂತ್ರಿ, ಸಮಾಜ ಕಲ್ಯಾಣಾಕಾರಿ ಮಹೇಶ ಉಣ್ಣಿ, ಸಿಪಿಐ ಮಂಜುನಾಥ ಕುಸಗಲ್‌, ಪಿಎಸ್‌ಐ ಎಂ.ಎಸ್‌.ಹೂಗಾರ, ಗ್ರೇಡ್‌-2 ತಹಶೀಲ್ದಾರ ಮಂಜುನಾಥ ಮುನವಳ್ಳಿ, ಡಾ| ಎಸ್‌.ಎಸ್‌.ಸಿದ್ದನ್ನವರ, ಗಾಯಿತ್ರಿ ಲೋಕನ್ನವರ, ಡಾ.ಭಾರತಿ ಹುಡೇದ,  ಡಾ| ಸುಷ್ಮಾ ಬಾಳಿಮಟ್ಟಿ, ನೀಲವ್ವ ಫಕೀರನ್ನವರ,

ಯಲ್ಲವ್ವಾ ಹಳೇಮನಿ, ಬಸವರಾಜ ಕೊಡ್ಲಿ, ಅನಿಲ ಮೇಕಲಮರಡಿ, ಎಂ.ಡಿ.ಹಿರೇಮಠ, ಎಸ್‌.ಬಿ.ಮಠದ, ಅರುಣ ಕೊಟಿಹಾಳ, ಎನ್‌.ವೈ.ಕುರಿ, ರಮೇಶ ಶೀಗಿಹಳ್ಳಿ, ಪಿ.ಎಂ.ಕಂಬಾರ, ಮಮತಾಜ ಛಬ್ಬಿ, ಬಸವರಾಜ ಕಮತ, ಮಲ್ಲಿಕಾರ್ಜುನ ಕೊಡೊಳ್ಳಿ ಇದ್ದರು.

 

-ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next