Advertisement

ತಮಟೆ ಕಲಾವಿದ ತಿಮ್ಮಯ್ಯಗೆ ಜಾನಪದ ಅಕಾಡೆಮಿ ಪ್ರಶಸ್ತಿ

03:34 PM Jan 05, 2021 | Team Udayavani |

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬ್ರಹ್ಮಿಣಿಪುರ ಗ್ರಾಮದ ತಮಟೆ ಕಲಾವಿದ ತಿಮ್ಮಯ್ಯ ಅವರು 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

70 ವರ್ಷ ವಯಸ್ಸಿನ ತಿಮ್ಮಯ್ಯ ತೀರಾ ಬಡ ಕುಟುಂಬದಿಂದ ಬಂದವರು. 15ನೇ ವಯಸ್ಸಿಗೆ ತಮಟೆ ಕಲೆ ಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮಸಮಕಾಲೀನರ ಪೈಕಿ ಬಹುತೇಕರು ಸಕ್ರಿಯವಾಗಿಲ್ಲ. ಆದರೆ, ತಿಮ್ಮಯ್ಯ ಇಂದಿಗೂ ತಮಟೆ ನುಡಿಸುತ್ತಾರೆ.ತಿಮ್ಮಯ್ಯ ತಮ್ಮ ತಂದೆ ಹೋಟ್ಟಯ್ಅವರಿಂದ ತಮಟೆ ಕಲೆಯನ್ನು ಕಲಿತರು. ವಿದ್ಯಾಭ್ಯಾಸದಿಂದ ದೂರವುಳಿದಿರುವ ತಿಮ್ಮಯ್ಯ, ತಮ್ಮದೇ ತಂಡ ರಚಿಸಿಕೊಂಡು ತಮಟೆ ಮೇಳ ನಡೆಸಿಕೊಡುತ್ತಿದ್ದಾರೆ. ಜಾನಪದ ಕಲಾವಿದರಿಗೆ ದೊರೆ ಯುವ ಮಾಸಾಶನ ತಮಗೆದೊರೆಯುತ್ತಿಲ್ಲ ಎಂದು ಅಲವತ್ತಕೊಂಡಿದ್ದಾರೆ. ತಮಟೆ ಬಾರಿಸುವದಕ್ಕೆ ಅವಕಾಶ ಸಿಗದಿದ್ದರೆ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ.

ಜಾನಪದ ಅಕಾಡೆಮಿ ಪ್ರಶಸ್ತಿ ಬಗ್ಗೆಪ್ರತಿಕ್ರಿಯಿಸಿರುವ ಅವರು, ತಮಟೆಕಲೆಗೆ ಸಿಕ್ಕ ಗೌರವ ಎಂದಿದ್ದಾರೆ. ತಿಮ್ಮಯ್ಯ  ಅವರದ್ದು ತುಂಬು ಜೀವನ. ಒಬ್ಬ ಪುತ್ರಿಯನ್ನು ಮದುವೆ ಮಾಡಿಕೊಟ್ಟಿದ್ದಾರೆ. ಪುತ್ರನಿದ್ದು ಆತ ಖಾಸಗಿ ಉದ್ಯೋಗಿ. ಮಡದಿಯೂ ಕೂಲಿ ಮಾಡಿ ಜೀವನದ ಭಾರ ತಗ್ಗಿಸುತ್ತಿದ್ದಾರೆ. ತಂದೆ ಕಟ್ಟಿಸಿರುವ ಮನೆಯಲ್ಲೇ ವಾಸ. ಅದು ಸಹ ಇದೀಗ ಶಿಥಿಲವಾಗಿದೆ. ಫೆಬ್ರವರಿಯಲ್ಲಿ ಚಾಮರಾಜನಗರದಲ್ಲಿ ನಡೆ ಯುವ ಸಮಾರಂಭದಲ್ಲಿ ತಿಮ್ಮಯ್ಯ ಅವರಿಗೆ ಪ್ರಶಸ್ತಿಪ್ರದಾನವಾಗಲಿದೆ  ಎಂದು ಅಕಾಡೆಮಿಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next