Advertisement
ಮೇ 10ಕ್ಕೆ ರಾಷ್ಟ್ರೀಯ ಶಿಬಿರ ಆರಂಭವಾದರೂ ಗೀತಾ, ಬಬಿತಾ, ರೀತು,ಸಂಗೀತಾ ಶಿಬಿರವನ್ನು ಕೂಡಿಕೊಳ್ಳಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನೂ ರಾಷ್ಟ್ರೀಯ ಕುಸ್ತಿ ಒಕ್ಕೂಟಕ್ಕೆ ನೀಡಿಲ್ಲ. ಇದರಿಂದ ಸಿಟ್ಟಾಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಜಭೂಷಣ್ ಸಿಂಗ್, ಆಟಗಾರ್ತಿಯರನ್ನು ರಾಷ್ಟ್ರೀಯ ಶಿಬಿರದಿಂದ ಹೊರಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೂಟಗಳಿಗೆ ಆಯ್ಕೆಯಾಗುವುದೂ ಕಷ್ಟಕರವಾಗಲಿದೆ. ಆದರೂ ಆಟಗಾರ್ತಿಯರಿಗೆ ಒಂದು ಜೀವದಾನ ನೀಡಿದ್ದು,
ಫೊಗಾಟ್ ಸಹೋದರಿಯರು ಸರಿಯಾದ ವಿವರಣೆ ನೀಡಿದರೆ ಕ್ಷಮಿಸುವುದಾಗಿ ಬ್ರಜಭೂಷಣ್ ತಿಳಿಸಿದ್ದಾರೆ. ಈ ಬಾರಿ ಕಾಮನ್‌ವೆಲ್ತ್ ಕೂಟ ಮತ್ತು 2010ರ ದೆಹಲಿಕಾಮನ್‌ವೆಲ್ತ್ ಕೂಟದಲ್ಲಿ ಗೀತಾ ಮತ್ತು ಬಬಿತಾ ಚಿನ್ನದ ಪದಕ ಗೆದ್ದಿದ್ದರು. ಇವರ ಕುರಿತು ದಂಗಲ್ ಸಿನಿಮಾ ಬಂದ ನಂತರ ಇಡೀ ದೇಶದಲ್ಲಿ ಜನಪ್ರಿಯರಾಗಿದ್ದನ್ನು ಇಲ್ಲಿ
ನೆನಪಿಸಿಕೊಳ್ಳಬಹುದು.
Related Articles
ಶಿಬಿರವನ್ನು ಸೇರಿಕೊಂಡಿಲ್ಲ. ಅವರಿಗೆ ಮಾಹಿತಿ ನೀಡದಿರುವುದು ನನ್ನ ತಪ್ಪು. ತಕ್ಷಣವೇ ಈ ಬಗ್ಗೆ ಮಾಹಿತಿ ರವಾನಿಸಲಿದ್ದೇನೆ. ಇನ್ನು ರಿಂಕು ಮತ್ತು ಸಂಗೀತಾ ರಷ್ಯಾದಲ್ಲೇ ಕುಸ್ತಿ ತರಬೇತಿ ಪಡೆಯಲು ವೀಸಾಕ್ಕೆ ಯತ್ನಿಸುತ್ತಿದ್ದಾರೆ. ಅಕ್ಕ ಗೀತಾ ಬೆಂಗಳೂರಿನಲ್ಲಿ ಖಾಸಗಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ಅವರು ಯಾಕೆ ಇನ್ನೂ ಶಿಬಿರ ಸೇರಿಕೊಂಡಿಲ್ಲ ಎನ್ನುವುದು ತನಗೆ ಗೊತ್ತಿಲ್ಲ ಎಂದು ಬಬಿತಾ ವಿವರಿಸಿದ್ದಾರೆ.
Advertisement
ಕುಸ್ತಿ ಶಿಬಿರದಿಂದ ಹೊರಬಿದ್ದಿರುವ ಇನ್ನೊಬ್ಬ ಕುಸ್ತಿಪಟು ರಿಯೋ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಪತಿ ಸತ್ಯವ್ರತ ಕಡಿಯಾನ್. ಅವರು ಕೂಡ ಸೂಕ್ತ ಸಮಯಕ್ಕೆ ಶಿಬಿರವನ್ನು ಕೂಡಿಕೊಂಡಿಲ್ಲ.