Advertisement

ಸೋಂಕಿತರ ನಿರ್ವಹಣೆಯತ್ತ ಗಮನ ಹರಿಸಿ: ಇಕಾಲ್‌ ಚಹಲ್‌

06:39 PM Sep 06, 2020 | Suhan S |

ನಾಗಪುರ, ಸೆ. 5: ಕೋವಿಡ್  ಸೋಂಕಿತರ ಹೆಚ್ಚಳದಿಂದ ಚಿಂತೆಗೊಳಗಾಗುವ ಬದಲಿಗೆ ಚಿಕಿತ್ಸೆಯತ್ತ ಗಮನ ಹರಿಸಬೇಕು ಎಂದು ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್‌ ಚಹಲ್‌ ಶುಕ್ರವಾರ ಹೇಳಿದ್ದಾರೆ.

Advertisement

ಪರಿಸ್ಥಿತಿಯನ್ನು ಎದುರಿಸುವಾಗ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಾಮರ್ಥ್ಯವು ಪ್ರಮುಖ ಅಳತೆಕೋಲು ಆಗಿರಬೇಕು ಎಂದವರು ನುಡಿದಿದ್ದಾರೆ. ನಾಗಪುರದ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್ಮುಖ್ ಮತ್ತು ನಾಗಪುರ ಉಸ್ತುವಾರಿ ಸಚಿವ ನಿತಿನ್‌ ರೌತ್‌ ಅವರು ಚಹಲ್‌ ಮತ್ತು ತಜ್ಞ ವೈದ್ಯರ ತಂಡದ ಸಭೆ ಕರೆದಿದ್ದರು. ಚಹಲ್‌ ಇಲ್ಲಿ ಉನ್ನತ ಆಡಳಿತ, ಆರೋಗ್ಯ ಮತ್ತು ಪೊಲೀಸ್‌ ಅಧಿಕಾರಿಗಳನ್ನು ಭೇಟಿಯಾಗಿ ಅವರ ಜತೆಗೆ ಮಾತುಕತೆ ನಡೆಸಿದರು.

ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಎಷ್ಟು ದಿನ ಮುಂದುವರಿಯುತ್ತದೆ ಎಂದು ಯಾರಿಗೂ ಗೊತ್ತಿಲ್ಲ, ನಾವು ಈ ಸುದೀರ್ಘ‌ ಯುದ್ಧಕ್ಕೆ ಬಲವಾದ ಸಿದ್ಧತೆಯನ್ನು ಹೊಂದಿರಬೇಕು ಎಂದರು. ಯಾವುದೇ ನಗರದ ಪರಿಸ್ಥಿತಿಯ ಮೌಲ್ಯಮಾಪನವು ಕೇವಲ ಸಂಖ್ಯೆಗಳ ಆಧಾರದ ಮೇಲೆ ಇರಬಾರದು, ಆದರೆ ಅದರ ಪ್ರಮುಖ ಅಳತೆಕೋಲು ಸೋಂಕಿತರ ನಿರ್ವಹಣೆ, ಆರೈಕೆ ಆಗಿರಬೇಕು ಎಂದರು.

ನಾಗಪುರದ ಚೇತರಿಕೆ ಪ್ರಮಾಣ ಶೇ.66.26ರಷ್ಟಿದೆ ಎಂದು ಸಚಿವ ರಾವುತ್‌ ಹೇಳಿದ್ದಾರೆ. ನಾವು ಕೋವಿಡ್‌ ಆಸ್ಪತ್ರೆಗಳಲ್ಲಿನ ಆಸ್ಪತ್ರೆ ನಿರ್ವಹಣೆ ಮತ್ತು ಚಿಕಿತ್ಸಾ ಕೊಠಡಿಗಳ ಬಗ್ಗೆ ಚರ್ಚಿಸಿದ್ದೇವೆ. ವಲಯವಾರು ಮೇಲ್ವಿಚಾರಣೆಗೆ ನಾವು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಆಸ್ಪತ್ರೆಯ ಹಾಸಿಗೆಗಳ ಲಭ್ಯತೆಯನ್ನು ತಿಳಿಯಲು ನಾವು ಡ್ಯಾಶ್‌ ಬೋರ್ಡ್‌ ಸೌಲಭ್ಯವನ್ನು ಒದಗಿಸಲಿದ್ದೇವೆ ಮತ್ತು ಲ್ಯಾಬ್‌ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next