Advertisement
ಕೋವಿಡ್ ಪರಿಸ್ಥಿತಿ ಪರಿಶೀಲಿಸಲು ಪವಾರ್ ನಗರದಲ್ಲಿ ಚುನಾಯಿತ ಸದಸ್ಯರೊಂದಿಗೆ ಸಭೆ ನಡೆಸಿದರು. ಪುಣೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ಸೋಂಕಿತರ ನಿರ್ಣಾಯಕ ಚಿಕಿತ್ಸೆಗಾಗಿ ಪುಣೆಗೆ ಧಾವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆಮ್ಲಜನಕ ಹಾಸಿಗೆಗಳ ಕೊರತೆ ಇರುವುದರಿಂದ ಅಲ್ಲಿಂದ ರೋಗಿಗಳು ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್ ಆಸ್ಪತ್ರೆಗಳಿಗೆ ದಾಖಲು ಮಾಡಲು ಬಯಸುತ್ತಾರೆ. ಆದ್ದರಿಂದ ಗ್ರಾಮೀಣ ಆಸ್ಪತ್ರೆಗಳನ್ನು ಬಲಪಡಿಸಲು ರಾಜ್ಯ ಸರಕಾರ ಸಾಕಷ್ಟು ಹಣವನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾದ ಮೂಲಸೌಕರ್ಯ ಮತ್ತು ಆಮ್ಲಜನಕವನ್ನು ಒದಗಿಸಲು ಆಡಳಿತವು ಆದ್ಯತೆ ನೀಡಬೇಕು. ಇದರಿಂದ ರೋಗಿಗಳು ತಮ್ಮ ಸ್ಥಳಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆರೋಗ್ಯ ಇಲಾಖೆ ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ ಸಂಖ್ಯೆಯ ಆಮ್ಲಜನಕ ಹಾಸಿಗೆಗಳನ್ನು ಸ್ಥಾಪಿಸುವ ಕೆಲಸವನ್ನು ವೇಗಗೊಳಿಸಬೇಕು ಎಂದು ಪವಾರ್ ಹೇಳಿದ್ದಾರೆ.
Advertisement
ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ ಗಮನ ಹರಿಸಿ: ಅಜಿತ್
07:51 PM Sep 21, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.