Advertisement

ಆರೋಗ್ಯದತ್ತ ಗಮನಹರಿಸಿ: ಗೌಸಿಯಾಬೇಗಂ

06:26 PM Apr 12, 2022 | Team Udayavani |

ಕಂಪ್ಲಿ: ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಕಡೆಗೆ ಆರೋಗ್ಯ ಇಲಾಖೆ ವಿಶೇಷ ಗಮನ ಹರಿಸಬೇಕಾಗಿದೆ ಎಂದು ತಹಶೀಲ್ದಾರ್‌ ಗೌಸಿಯಾಬೇಗಂ ತಿಳಿಸಿದರು.

Advertisement

ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸ್ಥಳೀಯ ಆರೋಗ್ಯ ಇಲಾಖೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಬೇಸಿಗೆ ಕಾಲ ಆರಂಭವಾಗಿದ್ದು ಜಿಲ್ಲೆಯಲ್ಲಿ ಹಾಗೂ
ತಾಲೂಕಿನಲ್ಲಿ ಬಿಸಿಲಿನ ಪ್ರಕರತೆ ಅಧಿಕವಾಗಿರುವುದರಿಂದ ಗರ್ಭಿಣಿಯರು, ಶಿಶುಗಳು ಮತ್ತು ಕಿಶೋರಿಯರ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕಾಗಿದೆ.

ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಸಹಿತ ಸಹಕಾರ ನೀಡಿದರೆ ತಾಲೂಕಿನಲ್ಲಿ ಉತ್ತಮ ಆರೋಗ್ಯದ ವಾತಾವರಣ ನಿರ್ಮಿಸಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಕಾಳಜಿ ವಹಿಸಬೇಕೆಂದರು.

ವೈದ್ಯಾಧಿಕಾರಿ ಡಾ| ರಾಧಿಕಾ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಸಾರ್ವಜನಿಕರು ಸದುಪಯೋಗಪಡೆದು ಕೊಳ್ಳಬೇಕೆಂದರು.

ಸಂಜೆಯವರೆಗೂ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ 58 ಗರ್ಭಿಣಿಯರನ್ನು, 127 ಮಕ್ಕಳನ್ನು ಮತ್ತು 70 ಜನ ಕಿಶೋರಿಯರನ್ನು ತಪಾಸಣೆ ಮಾಡಲಾಗಿದ್ದು, ಯಾವುದೇ ತೀವ್ರತರದ ಪ್ರಕರಣಗಳು ಕಂಡು ಬಂದಿಲ್ಲವೆಂದು ಹಿರಿಯ ಆರೋಗ್ಯ ನಿರೀಕ್ಷಕರಾದ ಚನ್ನಬಸವರಾಜ ತಿಳಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ್‌, ವೈದ್ಯರಾದ ಡಾ| ರವೀಂದ್ರ ಕನಕೇರಿ, ಡಾ| ಶ್ರೀನಿವಾಸ್‌, ಡಾ|
ಸಾಗರ್‌ ಭರ¾ಕ್ಕನವರ್‌, ಡಾ| ರುದ್ರೇಶ್‌ ಗೌಡ, ಡಾ| ಮಲ್ಲೇಶಪ್ಪ, ಶಿವರುದ್ರಪ್ಪ, ಮಹಾಂತೇಶ್‌, ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ ಸೇರಿದಂತೆ ಆರೋಗ್ಯ ಸಹಾಯಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next