Advertisement
ಮಹಾರಾಷ್ಟ್ರದ ನಾಗಪು ರದಲ್ಲಿ ನಡೆದ 108ನೇ ಭಾರತೀಯ ವಿಜ್ಞಾನ ಸಮಾ ವೇಶ ಉದ್ಘಾಟಿಸಿ ಮಂಗಳವಾರ ಮಾತ ನಾಡಿದ ಅವರು ವಿಜ್ಞಾನ-ಆವಿಷ್ಕಾರ ಪ್ರಕ್ರಿಯೆಗಳನ್ನು ಬಲಪಡಿಸುವುದರ ಜತೆಗೆ ಕ್ವಾಂಟಮ್ ತಂತ್ರಜ್ಞಾನ, ಡೇಟಾ ಸೈನ್ಸ್, ಲಸಿಕೆ ಅಭಿವೃದ್ಧಿಯಂಥ ವಿಭಾಗ ಗಳ ಮೇಲೆ ಹೆಚ್ಚಿನ ಗಮನಹರಿಸುವಂತೆ ಕರೆ ನೀಡಿದರು. ಅಲ್ಲದೇ ಸಂಶೋಧನ ಕೇಂದ್ರಗಳಲ್ಲಿ ನಡೆಯುವ ಆವಿಷ್ಕಾರಗಳು ಸಾಧನೆಯಾಗಿ ಪರಿವರ್ತನೆಗೊಳ್ಳುವುದು ಅವು ಜನರನ್ನು ತಲುಪಿದಾಗ ಮಾತ್ರ, ಈ ನಿಟ್ಟಿ ನಲ್ಲಿ ಪ್ರತೀ ಸಂಶೋಧಕನೂ ಕಾರ್ಯ ನಿರತನಾಗಬೇಕು. ದೇಶದ ಯುವ ಪೀಳಿ ಗೆಯನ್ನು ಸಂಶೋಧನೆ ಗಳತ್ತ ಸೆಳೆದು ಬೆಂಬಲ ನೀಡಬೇಕು ಎಂದಿದ್ದಾರೆ.
ಸಿರಿಧಾನ್ಯಗಳ ಉತ್ಪಾದನೆ ಹಾಗೂ ಬಳಕೆಗೆ ದೇಶವ್ಯಾಪಿ ಮಾನ್ಯತೆ ನೀಡಲು ಕೇಂದ್ರಸರಕಾರ ಯೋಜನೆ ಗಳನ್ನು ರೂಪಿಸಿರುವ ನಡುವೆಯೇ, ಈ ಬಾರಿ ವಿಜ್ಞಾನ ಸಮಾವೇಶದಲ್ಲಿ, ಮಹಾರಾಷ್ಟ್ರದ ಪಾಲ^ರ್‌ನ ಬುಡ ಕಟ್ಟು ಪ್ರಾಬಲ್ಯ ಪ್ರದೇಶದ ಶಾಲಾ ವಿದ್ಯಾರ್ಥಿಗಳು ರಾಗಿ ಬೆಳೆ ಕುರಿತಂತೆ ಅಭಿವೃದ್ಧಿಪಡಿಸಿರುವ ಯೋಜನೆ ಯನ್ನು ವಿಜ್ಞಾನಿಗಳ ಮುಂದೆ ಪ್ರಸ್ತುತ ಪಡಿಸಲು ಆಯ್ಕೆ ಮಾಡಲಾಗಿದೆ. ಜವಾಹರ್ ತಾಲೂಕಿನ ಜಯೇಶ್ವರ ವಿದ್ಯಾಮಂದಿರ ಶಾಲೆಯ 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಪೌಷ್ಠಿಕ ಆಹಾರವಾಗಿ ರಾಗಿ ಅಧ್ಯಯನ ಎಂಬ ಶೀರ್ಷಿಕೆ ಅನ್ವಯ 60 ರೈತರನ್ನು ಸಂದರ್ಶಿಸಿ, ಯೋಜನಾ ವರದಿ ಸಿದ್ಧಪಡಿಸಿದ್ದಾರೆ. ಚಿನ್ನದ ಶಾಯಿಯ ಕುರಾನ್ ಪ್ರದರ್ಶನ
ಸಮಾವೇಶದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ 16ನೇ ಶತಮಾನದಲ್ಲಿ ಚಿನ್ನದ ಶಾಯಿ(ಗೋಲ್ಡನ್ ಇಂಕ್)ಯಿಂದ ರಚಿಸಲಾಗಿದ್ದ ಹಾಗೂ ಆರೆಸ್ಸೆಸ್ ಅಂಗಸಂಸ್ಥೆಯಿಂದ ಸಂರಕ್ಷಿ ಸಲ್ಪಟ್ಟಿದ್ದ ಕುರಾನ್ ಪ್ರತಿಯನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಭಾರತದ ಧಾರ್ಮಿಕತೆ, ಐತಿಹ್ಯ , ವಿಜ್ಞಾನ ಮತ್ತು ಪ್ರಾಚೀನ ಭಾರತದ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಹಸ್ತಪ್ರತಿಗಳನ್ನೂ ಪ್ರದರ್ಶಿಸಲಾಗಿದೆ. ಕುರಾನ್ 385 ಪುಟಗಳನ್ನು ಹೊಂದಿದ್ದು ಎಲ್ಲ ಅಕ್ಷರಗಳನ್ನು ಚಿನ್ನದ ಶಾಯಿಯಿಂದ ಬರೆಯಲಾಗಿದೆ. ಯಾವ ಪುಟದಲ್ಲೂ ಒಂದೇ ಒಂದು ತಪ್ಪುಗಳಿಲ್ಲದೇ ಇರುವುದು ಇದರ ವೈಶಿಷ್ಟé.
Related Articles
2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿ ಹೊಂದಿರುವ ಭಾರತ, ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಸಹಭಾಗಿತ್ವಕ್ಕೆ ಸಿದ್ಧವಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು. ವಿಜ್ಞಾನ ಸಮಾವೇಶದಲ್ಲಿ ಮಾತನಾಡಿದ ಅವರು “ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಹಣಕಾಸಿನ ಸಂಪನ್ಮೂಲಗಳಿಗಾಗಿ ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಸಹಭಾಗಿತ್ವಕ್ಕೆ ಪರಮಾಣು ವಲಯ ಮುಕ್ತವಾಗಿದೆ,’ ಎಂದರು.
Advertisement