Advertisement
ಅನುಭವ ಮಂಟಪ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಚಿಕ್ಕಬಳ್ಳಾಪುರದ ತಮಟೆ ಕಲಾವಿದ ಮುನಿವೆಂಕಟಪ್ಪ, ಬೀದರ್‌ನ ಹುಲೂÕರು ಮಹಿಳಾ ಸಿರಿಧಾನ್ಯ ಉತ್ಪಾದಕ ಕಂಪೆನಿ, ಕಲಬುರಗಿಯಲ್ಲಿರುವ ಆಳಂದ ಭೂತಾಯಿ ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ನೂಸರ್ಸ್ ಕಂಪೆನಿಯ ಬಗ್ಗೆ ಪ್ರಧಾನಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
Related Articles
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬಗ್ಗೆ ಪ್ರಧಾನಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 2022ರಲ್ಲಿ ಅತೀ ಹೆಚ್ಚು, 145 ಪೇಟೆಂಟ್‌ಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆ ಐಐಎಸ್‌ಸಿಯದು. ಇದು ಪ್ರತೀ ಐದು ದಿನಗಳಿಗೆ ಎರಡು ಪೇಟೆಂಟ್ ಹೊಂದುವುದಕ್ಕೆ ಸಮಾನ. ಈ ಸಾಧನೆ ದೇಶವಾಸಿಗಳಿಗೆ ಹೆಮ್ಮೆಯ ವಿಚಾರ ಎಂದು ಮೋದಿ ಹೇಳಿದರು.
Advertisement
ಬೀದರ್ ಬಗ್ಗೆ ಪ್ರಸ್ತಾವಸಿರಿಧಾನ್ಯಗಳ ಕ್ಷೇತ್ರದಲ್ಲಿ ಬೀದರ್ ಜಿಲ್ಲೆಯ ಹುಲೂÕರ್ ಮಿಲೆಟ್ಸ್ ಪ್ರೊಡ್ನೂಸರ್ ಕಂಪೆನಿ ಮಾಡಿರುವ ಸಾಧನೆಯ ಬಗ್ಗೆ ಮೋದಿ ಪ್ರಸ್ತಾವಿಸಿದ್ದಾರೆ. ಈ ಸಂಸ್ಥೆಯ ಮೂಲಕ ಹಲವಾರು ಮಂದಿ ಮಹಿಳೆಯರು ಸಿರಿಧಾನ್ಯವನ್ನು ಬೆಳೆಯುತ್ತಿದ್ದಾರೆ. ಅದರ ಮೂಲಕ ಸಿರಿಧಾನ್ಯಗಳ ಹಿಟ್ಟನ್ನೂ ತಯಾರಿಸುತ್ತಿದ್ದಾರೆ. ಈ ಸಂಸ್ಥೆಯ ಮೂಲಕ ಅವರು ತಮ್ಮ ಜೀವನವನ್ನು ಕಂಡುಕೊಂಡಿದ್ದಾರೆ ಎಂದರು. ಕಲಬುರಗಿಯಲ್ಲಿಯೇ ಇರುವ ಅಳಂದ ಭೂತಾಯಿ ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ನೂಸರ್ಸ್ ಕಂಪೆನಿ ಕಳೆದ ವರ್ಷ ಭಾರತದ ಸಿರಿಧಾನ್ಯಗಳ ಸಂಶೋಧನ ಮಂಡಳಿಯ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಆರಂಭಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.