Advertisement

FMGE ಪರೀಕ್ಷೆ: ಮೋಸದ ಜಾಲಕ್ಕೆ ಬಲಿ ಆಗದಂತೆ ಕೇಂದ್ರ ಮನವಿ

01:21 AM Jul 06, 2024 | Team Udayavani |

ಹೊಸದಿಲ್ಲಿ: ವಿದೇಶಗಳಲ್ಲಿ ಎಂಬಿಬಿಎಸ್‌ ಮುಗಿಸಿದ ವರಿಗೆ ದೇಶದಲ್ಲಿ ಚಿಕಿತ್ಸೆ ನೀಡಲು, ಮುಂದಿನ ಶಿಕ್ಷಣ ಮುಂದುವರಿಸಲು ಬೇಕಾಗಿರುವ ಪರೀಕ್ಷೆ ಫಾರಿನ್‌ ಮೆಡಿಕಲ್‌ ಗ್ರಾಜ್ಯುವೇಟ್ಸ್‌ ಎಕ್ಸಾಮಿನೇಶನ್‌ (ಎಫ್ಎಂಜಿಇ) ಪ್ರಶ್ನೆ ಪತ್ರಿಕೆ ಒದಗಿಸುವ ಜಾಲಕ್ಕೆ ಬಲಿ ಬೀಳ ಬಾರದು ಎಂದು ಕೇಂದ್ರ ಸರಕಾರ‌ ಮನವಿ ಮಾಡಿದೆ. ಹಣ ಕೊಟ್ಟರೆ ಉತ್ತರ ಸಹಿತ ಪ್ರಶ್ನೆಪತ್ರಿಕೆಗಳನ್ನು ವಿತರಿ ಸಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ  ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ. ಶನಿವಾರ ದೇಶದ 71 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದೇ ವೇಳೆ ಟೆಲಿಗ್ರಾಂ ಜಾಲತಾಣದಲ್ಲಿ ಎಫ್ಎಂಜಿಇ ಪ್ರಶ್ನೆ ಪತ್ರಿಕೆ ಲಭ್ಯವಿದೆ ಎಂಬ ಮಾಹಿತಿ ಹಂಚಿದ್ದ ಗುಂಪೊಂದರ ಮೇಲೆ ತಿರುವನಂತಪುರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next