ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ಅಯವ್ಯಯ ಮಂಡಿಸಿದ್ದು, ಕೇಂದ್ರ ಸರ್ಕಾರದ ಮಹತ್ವದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸುವ ಮೂಲಕ ಈ ಬಾರಿ ಹಲವು ಜನಪ್ರಿಯ ಘೋಷಣೆಗಳನ್ನು ಘೋಷಿಸಿದ್ದಾರೆ.
ರಫ್ತು ಉತ್ತೇಜನಕ್ಕೆ ತೆರಿಗೆ ಕಡಿತ ಮಾದರಿ ಜಾರಿ. ರಾಷ್ಟ್ರೀಯ ತಾಂತ್ರಿಕ ಜವಳಿ ಯೋಜನೆ ಘೋಷಣೆ. ರಫ್ತು ಉದ್ಯಮ ಉತ್ತೇಜನಕ್ಕೆ ನಿರ್ವಿತ ಯೋಜನೆ ಜಾರಿ. ರಾಜ್ಯ ಮತ್ತು ಕೇಂದ್ರದಲ್ಲಿ ಇನ್ವೆಸ್ಟ್ ಮೆಂಟ್ ಕ್ಲಿಯರೆನ್ಸ್ ಸೆಲ್ ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಹೊಸದಾಗಿ ರಾಷ್ಟ್ರೀಯ ಪೊಲೀಸ್, ವಿಧಿವಿಜ್ಞಾನ ವಿವಿ ಸ್ಥಾಪನೆ. ಹೊಸ ವೈದ್ಯರ ಉತ್ತೇಜನಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ. ಸಿಂಧೂ, ಸರಸ್ವತಿ ನಾಗರಿಕತೆ ಸಾರುವ ಮ್ಯೂಸಿಯಂ ಸ್ಥಾಪನೆ.
ಶಿಕ್ಷಣದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮ. ಹೊಸ ಶಿಕ್ಷಣ ನೀತಿ ಶೀಘ್ರದಲ್ಲಿಯೇ ಘೋಷಣೆಯಾಗಲಿದೆ. 12 ರೋಗಗಳಿಗೆ ಮಿಷನ್ ಇಂದ್ರಧನುಷ್ ಯೋಜನೆ ಜಾರಿ. ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ ಜೈವಿಕ್ ಖೇತಿ ಯೋಜನೆ ಜಾರಿ.
ರೈತರ ಅನುಕೂಲಕ್ಕಾಗಿ ಕೃಷಿ ರೈಲ್, ಕೃಷಿ ಉಡಾನ್ ಯೋಜನೆ ಜಾರಿ. ರೈತ ಮಹಿಳೆಯರಿಗಾಗಿ ಧಾನ್ಯ ಲಕ್ಷ್ಮೀ ಯೋಜನೆ ಜಾರಿ. ಅಹಮದಾಬಾದ್ ನಲ್ಲಿ ಹೊಸ ಮ್ಯೂಸಿಯಂ ಸ್ಥಾಪನೆ. ಜಾರ್ಖಂಡ್ ನಲ್ಲಿ ಟ್ರೈಬಲ್ ಮ್ಯೂಸಿಯಂ ಜಾರಿ. ಶಿಕ್ಷಣ ಕ್ಷೇತ್ರಕ್ಕೆ 99, 300 ಕೋಟಿ ರೂಪಾಯಿ ಅನುದಾನ ಮೀಸಲು.